ನೈಟ್‌ ಕರ್ಫ್ಯೂ; ಮಲೆ ಮಾದೇಶ್ವರನ ದರ್ಶನಕ್ಕೆ ಮಾರ್ಗಸೂಚಿ

ಚಾಮರಾಜನಗರ, ಡಿಸೆಂಬರ್ 24: ಕರ್ನಾಟಕ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ಮಲೆ ಮಾದೇಶ್ವರ ದೇವಾಲಯದ ದರ್ಶನದಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಮಾರ್ಗಸೂಚಿ ಪ್ರಕಟಿಸಲಾಗಿದೆ.

ಗುರುವಾರ ರಾತ್ರಿ 11 ಗಂಟೆಯಿಂದ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗಾಗಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ದಿನಗಳಲ್ಲಿ ದೇವಾಲಯಕ್ಕೆ ಆಗಮಿಸುವ ಭಕ್ತರು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮನವಿಯನ್ನು ಮಾಡಲಾಗಿದೆ.

ದೇವಾಲಯಕ್ಕೆ ಬರುವ ಭಕ್ತರಿಗಾಗಿಯೇ ಸಹಾಯವಾಣಿಯನ್ನು ಆರಂಭಿಸಲಾಗಿದೆ. ದೇವಾಲಯದ ದರ್ಶನದ ಸಮಯ, ನಿಯಮಗಳ ಬಗ್ಗೆ ಯಾವುದೇ ಗೊಂದಲವಿದ್ದರೂ ಸಹಾಯವಾಣಿ ಸಂಖ್ಯೆ 1860 425 4350 ಗೆ ಕರೆ ಮಾಡಬಹುದು.

10.30ರೊಳಗೆ ಆಗಮಿಸಬೇಕು

10.30ರೊಳಗೆ ಆಗಮಿಸಬೇಕು

* ಕೊಠಡಿಗಳನ್ನು ಆನ್‍ ಲೈನ್ ಮೂಲದ ಕಾಯ್ದಿರಿಸಿರುವ ಭಕ್ತಾದಿಗಳು ರಾತ್ರಿ 10.30ರೊಳಗೆ ಮಹದೇಶ್ವರ ಬೆಟ್ಟಕ್ಕೆ ಬಂದು ಮಾಹಿತಿ ಕೇಂದ್ರದಲ್ಲಿ ನೋಂದಾಯಿಸಿ, ಸಂಬಂಧಪಟ್ಟ ವಸತಿ ಗೃಹದೊಳಗೆ ವಾಸ್ತವ್ಯಕ್ಕೆ 10.45ರೊಳಗೆ ತಲುಪಬೇಕು.

* ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮಾಹಿತಿ ಕೇಂದ್ರವನ್ನು ಮುಚ್ಚಲಾಗುವುದು ಹಾಗೂ ಯಾವುದೇ ಕೊಠಡಿಗಳನ್ನು ಈ ಸಮಯದಲ್ಲಿ ವಿತರಿಸಲಾಗುವುದಿಲ್ಲ.

ಸಂಚಾರಕ್ಕೆ ಅವಕಾಶ ಇರುವುದಿಲ್ಲ

ಸಂಚಾರಕ್ಕೆ ಅವಕಾಶ ಇರುವುದಿಲ್ಲ

* ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಸಂಪೂರ್ಣ ಲಾಕ್‍ ಔಟ್ ಪಾಲಿಸಲಾಗುವುದು. ಯಾವುದೇ ಸಂಚಾರಕ್ಕೆ ಅವಕಾಶವಿರುವುದಿಲ್ಲ.

* ದೇವಸ್ಥಾನ, ಲಾಡು ಕೌಂಟರ್ ಹಾಗೂ ದಾಸೋಹಕ್ಕೆ ಬರುವವರು ರಾತ್ರಿ 10ರ ಒಳಗಾಗಿ ದರ್ಶನ ಪಡೆಯುವುದು, ದಾಸೋಹ ಸ್ವೀಕರಿಸುವುದು ಹಾಗೂ ಲಾಡು ಖರೀದಿಸುವುದು. ರಾತ್ರಿ 10ರ ನಂತರ ಈ ಮೂರೂ ಸೇವೆಗಳು ಲಭ್ಯವಿರುವುದಿಲ್ಲ.

* ಕೊಠಡಿ ಕಾಯ್ದಿರಿಸಿರುವವರು ನಂತರ ಬಂದಲ್ಲಿ ರೀಫಂಡ್ ನೀಡಲಾಗುವುದಿಲ್ಲ. ಈ ಬಗ್ಗೆ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.

ಭಕ್ತಾದಿಗಳಿಗೆ ಪವೇಶವಿಲ್ಲ

ಭಕ್ತಾದಿಗಳಿಗೆ ಪವೇಶವಿಲ್ಲ

* ಬೆಳಗ್ಗೆ 4ಕ್ಕೆ ಪ್ರಾರಂಭವಾಗುವ ಅಭಿಷೇಕಕ್ಕೆ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ. ಆದರೆ, ಸಾಂಪ್ರದಾಯಿಕವಾಗಿ ಅಭಿಷೇಕವನ್ನು ಬೇಡ ಗಂಪಣರು ಹಾಗೂ ದೇವಾಲಯದ ಒಳಾವರಣದ ಸಿಬ್ಬಂದಿ ನಡೆಸಲಿರುವರು. ಬೆಳಗ್ಗೆ 5ರ ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.

* ದೇವಾಲಯದ ಆವರಣದಲ್ಲಿ ವಸತಿ ಗೃಹಗಳು, ಕಾಟೇಜುಗಳು ಹಾಗೂ ಡಾರ್ಮಿಟರಿ ಹೊರತುಪಡಿಸಿ, ಬೇರೆ ಯಾವುದೇ ತೆರೆದ ಜಾಗಗಳು ಹಾಗೂ ದೇವಾಲಯದ ಪಕ್ಕದಲ್ಲಿರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯ ಷೆಡ್‍ನಲ್ಲಿ ಉಳಿದುಕೊಳ್ಳಬಾರದಾಗಿ ಮನವಿ.

* ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಶ್ರೀ ಕ್ಷೇತ್ರಕ್ಕೆ ಬರುವುದು ಹಾಗೂ ಶ್ರೀ ಕ್ಷೇತ್ರದಿಂದ ತೆರಳುವವರೆಗೆ ಧರಿಸಿರಲು ಕೋರಿದೆ. ವೈಯುಕ್ತಿಕವಾಗಿ ಸ್ಯಾನಿಟೈಸರ್ ಇಟ್ಟುಕೊಳ್ಳಲು ಹಾಗೂ ಆಗಾಗ ಉಪಯೋಗಿಸಲು ಕೋರಿದೆ.

ಸಾಮಾಜಿಕ ಅಂತರ ಪಾಲಿಸಿ

ಸಾಮಾಜಿಕ ಅಂತರ ಪಾಲಿಸಿ

* ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವುದು. ವಿಶೇಷವಾಗಿ ದೇವಸ್ಥಾನದ ದರ್ಶನಕ್ಕೆ ಕ್ಯೂ ನಿಲ್ಲುವಾಗ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡೇ ದರ್ಶನ ಮಾಡುವುದು.

* ದಾಸೋಹದಲ್ಲಿ ಕಡ್ಡಾಯವಾಗಿ ಕ್ಯೂ ನಲ್ಲಿ ಹಾಗೂ ಕುಳಿತುಕೊಳ್ಳುವ ಮೇಜಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

Recommended Video

      ಮಂಗಳೂರು: ಕ್ರಿಸ್‌ಮಸ್‌ ಹಬ್ಬಕ್ಕೆ ಸಜ್ಜಾಗುತ್ತಿದೆ ಕಡಲನಗರಿ ಮಂಗಳೂರು | Oneindia Kannnada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+