ಇರೋವರ್ಗೂ ಎಂಜಾಯ್ ಮಾಡ್ಬೇಕು ಅಷ್ಟೇ: ಎಂಜಿ ರಸ್ತೆಯಲ್ಲಿ ಹಳ್ಳಿ ತಾತನ ಸಂಭ್ರಮಾಚರಣೆ ಜೋರೋ.. ಜೋರು, ವೈರಲ್
ಈ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸವರ್ಷವನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಸ್ವಲ್ಪ ಡಿಫೆರೆಂಟ್ ಆಗಿತ್ತು ಎನ್ನುವುದು ಹಲವರ ಮಾತಾಗಿದೆ. ಹಾಗೆಯೇ ಇಲ್ಲೊಬ್ಬ ಹಳ್ಳಿಯಿಂದ ಬಂದಿದ್ದ ತಾತ (ಅಜ್ಜ) ಎಂಜಿ ರಸ್ತೆಯಲ್ಲಿ ನಡೆದ ಸಂಭ್ರಮಾಚರಣೆಯನ್ನು ಹಾಡಿಹೊಗಳಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ಭಾರೀ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಹೊಸವರ್ಷವನ್ನು ಸಂಭ್ರಮಾಚರಣೆ ಮಾಡುವುದೆಂದರೆ ಅದು ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ಕೋರಮಂಗಲದಲ್ಲಿ. ಇಲ್ಲಿಗೆ ಎಂಜಾಯ್ ಮಾಡಲೆಂದೇ ಒಂದು ದಿನದ ಮುಂಚೆಯೇ ಬೇರೆ ಬೇರೆ ಊರುಗಳಿಂದ ಯುವಕ, ಯುವತಿಯರೇ ಹೆಚ್ಚಾಗಿ ಬರುತ್ತಾರೆ. ಅದರಲ್ಲೂ ಇಲ್ಲೇ ನೆಲೆಸಿರುವ ಪಿಜಿ ಬಾಯ್ಸ್, ಗರ್ಲ್ಸ್‌ದಂತೂ ಸದ್ದು ಸ್ವಲ್ಪ ಜೋರಾಗಿಯೇ ಇರುತ್ತದೆ.

ಹಾಗೇ ನೋಡೋದಾದ್ರೆ ಈ ಬಾರಿ ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರಿಂದ ಬಂದ ಅಜ್ಜ ಅಂತೂ ಎಂಜಿ ರಸ್ತೆಯಲ್ಲಿ ಫುಲ್ ಎಂಜಾಯ್ ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ಅವರು ಕೆಲವು ಮಾತಗಳನ್ನು ಸಹ ಹೇಳಿದ್ದು, "ಇಲ್ಲಿನ ವಾತಾವರಣವನ್ನು ನೋಡಿದರೆ ತುಂಬಾ ಸಂತೋವಾಗುತ್ತಿದೆ. ಇರೋವಾರ್ಗೂ ಎಂಜಾಯ್ ಮಾಡಬೇಕು. ಸತ್ತ ಮೇಲೆ ಮಾಡುವುದಕ್ಕೆ ಆಗುತ್ತಾ," ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿನ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.












Click it and Unblock the Notifications