ಯಳಂದೂರು; ಮಂಡಿ, ಕೀಲು ನೋವಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿದೆ ಮದ್ದು

ಚಾಮರಾಜನಗರ, ಅಕ್ಟೋಬರ್‌, 07: ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಿದರೆ ಸೊಂಟ, ಬೆನ್ನು ನೋವು ಬರುವುದು ಸಾಮಾನ್ಯ ಆಗಿರುತ್ತದೆ. ಆದರೆ ಕೀಲು, ಮಂಡಿ ನೋವಿಗೆ ಯಳಂದೂರಿನ ರಾಷ್ಟೀಯ ಹೆದ್ದಾರಿ ಮಧ್ಯದಲ್ಲೇ ಚಿಕಿತ್ಸೆ ಇದೆ ಎಂದು ಇಲ್ಲಿನ ಜನರು ನಂಬಿದ್ದಾರೆ. ಮಂಡಿ, ಕೀಲು ನೋವು ಇದ್ದವರು ಇಲ್ಲಿಗೆ ಬಂದು " ನರಿಕಲ್ಲು" ಎಂಬ ಮಾರಮ್ಮಗೆ ನಮಸ್ಕರಿಸಿ ಹೋಗುತ್ತಿದ್ದಾರೆ. ಮಾರಮ್ಮನಿಗೆ ನಮಸ್ಕಾರ ಮಾಡಿದರೆ ಎಲ್ಲ ನೋವುಗಳು ಮಾಯ ಆಗುತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆ ಆಗಿದೆ.

ಯಳಂದೂರಿನಿಂದ ಮಾಂಬಳ್ಳಿಗೆ ತೆರಳುವಾಗ ರಾಷ್ಟೀಯ ಹೆದ್ದಾರಿ ಮಧ್ಯದಲ್ಲೇ "ನರಿಕಲ್ಲು" ಎಂಬ ಮಾರಮ್ಮವೊಂದು ಹಲವು ದಶಕಗಳಿಂದ ಇದೆ. ಮಂಡಿ, ಕೀಲು ನೋವಿನಿಂದ ಬಳಲುವವರು ಇದಕ್ಕೆ ಒಂದು ನಮಸ್ಕಾರ ಹಾಕಿದರೇ ಸಾಕು, ಎಲ್ಲಾ ನೋವು ಮಾಯ ಆಗುತ್ತದೆಯಂತೆ. ಇದು ರಸ್ತೆಯ ನಡುವೆಯೇ ಇದ್ದು, ಭಾರಿ ವಾಹನಗಳ ಸಂಚಾರದ ನಡುವೆ ನಮಸ್ಕರಿಸಿ ಇಲ್ಲಿನ ಜನರು ಭಕ್ತಿ ಪರಾಕಷ್ಟೆ ಮೆರೆಯುತ್ತಾರೆ.

ಆರ್ಥಿಕ ಹಿಂಜರಿತ: ವಿಶ್ವದಾದ್ಯಂತ 50% ಐಟಿ ಕಂಪನಿಗಳು ವಜಾಗೊಳಿಸಲು ತಯಾರಿ?

ಮಾರಮ್ಮನ ಬಗ್ಗೆ ಜನರ ಅಭಿಪ್ರಾಯ ಏನು?

50-60 ವರ್ಷಗಳಿಂದಲೂ ರಸ್ತೆ ಮದ್ಯೆ ಕಲ್ಲು ಒಂದಿದ್ದು, ಕೀಲು, ಮಂಡಿ ನೋವಿನಿಂದ ಬಳಲುವವರು ಇಲ್ಲಿಗೆ ಬಂದು ನಮಸ್ಕರಿಸಿ ಪೂಜೆ ಸಲ್ಲಿಸುತ್ತಾರೆ. ವಾಹನ ಸವಾರರು, ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ರಸ್ತೆಯಲ್ಲಿ ಹಾದು ಹೋಗುವಾಗ, ಇದಕ್ಕೆ ನಮಸ್ಕರಿಸಿ‌ ಹೋಗುವುದು ನಿತ್ಯ ಕಾಣಬಹುದಾಗಿದೆ.

"ನಾವು ಮದುವೆಯಾಗಿ ಬಂದಾಗಿನಿಂದ ಈ ನರಿಕಲ್ಲು ನೋಡುತ್ತಿದ್ದೇವೆ. ಮಂಡಿ, ಕೈ-ಕಾಲು ಸೆಳೆತ ಇದ್ದರೇ ಇಲ್ಲಿಗೆ ಬಂದು ಪೂಜೆ ಮಾಡುತ್ತೇವೆ. ಪೂಜೆ ಮಾಡಿದ ಬಿಳಿಕ ಎಲ್ಲಾ ನೋವುಗಳು ಮಾಯ ಆಗುತ್ತದೆ." ಎಂದು ಸ್ಥಳೀಯರಾದ ಸುಶೀಲಾ, ಜಯಮ್ಮ ಹೇಳುತ್ತಿದ್ದಾರೆ.

ಆರ್ಥಿಕ ಹಿಂಜರಿತ: ವಿಶ್ವದಾದ್ಯಂತ 50% ಐಟಿ ಕಂಪನಿಗಳು ವಜಾಗೊಳಿಸಲು ತಯಾರಿ?

ಬಾರಿ ಮಳೆಗೆ ತತ್ತರಿಸಿದ್ದ ಜನ

ಈ ಹಿಂದೆ ಭಾರಿ ಮಳೆ ಸುರಿದಿದ್ದು, ಯಳಂದೂರು ತಾಲೂಕಿನ ಅಂಬಳೆ, ಮದ್ದೂರು, ಅಗರ -ಮಾಂಬಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಆತಂಕಗೊಂಡಿದ್ದರು. ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗಿತ್ತು, ಕೆರೆ-ಕಟ್ಟೆಗಳು ಉಕ್ಕಿ ಹರಿದ ಕಾರಣ ಜನರ ಕಳವಳವನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ಅಂಬಳೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು. ಎಲ್ಲೆಡೆ ಮಳೆ ನೀರು ಆವರಿಸಿದ್ದ ಕಾರಣ ಜನರು ಮನೆಗಳನ್ನು ಖಾಲಿ ಮಾಡಿಕೊಂಡು ವಲಸೆ ಹೋಗಿದ್ದರು. ಅಂಬಳೆ, ಕಂದಹಳ್ಳಿ ಮತ್ತು ವೈ.ಕೆ.ಮೋಳೆ ಗ್ರಾಮಗಳು ಜಲಾವೃತವಾಗಿದ್ದವು. ಮತ್ತೊಂದೆಡೆ ಜನರು ಮನೆಯಲ್ಲಿದ್ದ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+