ಚಾಮರಾಜನಗರದಲ್ಲಿ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ
ಚಾಮರಾಜನಗರ, ಜೂನ್ 12: ಮಗುವಿನೊಂದಿಗೆ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಇಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿಯನ್ನು ಸಂಗೀತಾ (23) ಎಂದು ಗುರುತಿಸಲಾಗಿದೆ.
Recommended Video
Bengaluru corona cases are getting scarier everyday | Bengaluru | Oneindia Kannada
6 ವರ್ಷದ ಹಿಂದೆ ಸಂಗೀತ ಅವರು ಮಂಜು ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿ ಅನ್ಯೋನ್ಯವಾಗಿದ್ದರು. ಶುಕ್ರವಾರ ಗ್ರಾಮದ ಮಹದೇಶ್ವರ ದೇಗುಲಕ್ಕೆ ಹೋಗುತ್ತೇನೆಂದು ಬೆಳಿಗ್ಗೆ ಮನೆಯವರಿಗೆ ಹೇಳಿ ಹೋಗಿದ್ದರು.

ನಂತರ ಮನೆಯಿಂದ ಅರ್ಧ ಕಿಲೋಮೀಟರ್ ದೂರವಿರುವ ಕೆರೆಗೆ ಗಂಡು ಮಗುವನ್ನು ಎಸೆದು ತಾವೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications