ಶಾಲೆಯಲ್ಲೇ ಮಗಳಿಗೆ ಜನ್ಮವಿತ್ತ 5ನೇ ತರಗತಿ ಬಾಲಕಿ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಆಗಸ್ಟ್ 28 : ಶಾಲೆಯಲ್ಲಿ ವ್ಯಾಸಾಂಗ ಮಾಡಬೇಕಿದ್ದ ಬಾಲಕಿಯೊಬ್ಬಳು ಇದೀಗ ಪುಟ್ಟ ಕಂದಮ್ಮನಿಗೆ ತಾಯಿಯಾಗಿ ಆರೈಕೆ ಮಾಡುವ ಹೊಣೆ ಹೊತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣವಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಆಶ್ರಮ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಶಾಲೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಹದೇಶ್ವರ ಬೆಟ್ಟದ ತಪ್ಪಲಲ್ಲಿರುವ ಮದಗನಾಣೆ ಪೋಡಿ ಚಿಕ್ಕಮಾದರವರ ಪುತ್ರಿ 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ಪೋಡಿನ ಸಮೀಪವಿರುವ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. [ನಾಪತ್ತೆಯಾಗಿದ್ದ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು ಹೇಗೆ?]

Minor girl gives birth to baby in tribal school in MM Hills

ಆದರೆ ಜೂನ್ 24ರಂದು ಆ ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಮಹದೇಶ್ವರ ಬೆಟ್ಟದಲ್ಲಿರುವ ಗಿರಿಜನ ಆಶ್ರಮ ಶಾಲೆಗೆ ದಾಖಲಾದಳು. ಗಿರಿಜನ ಶಾಲೆಗೆ ದಾಖಲಾಗಲು ಆಕೆ ಗರ್ಭವತಿಯಾಗಿರುವ ಸಂಗತಿಯೇ ಕಾರಣ.

ಬಾಲಕಿ ತನ್ನ ಸೋದರ ಮಾವ ಶಿವು(18) ನೊಂದಿಗೆ ಕಳೆದ ಒಂದು ವರ್ಷದಿಂದ ದೈಹಿಕ ಸಂಪರ್ಕ ಹೊಂದಿದ್ದಳು ಎನ್ನಲಾಗಿದ್ದು, ಇದರ ಫಲವಾಗಿ ಆಕೆ ಗರ್ಭವತಿಯಾದಳು. ತಾನು ಗರ್ಭವತಿಯಾಗಿರುವ ಸಂಗತಿಯನ್ನು ಸೋದರ ಮಾವನಿಗೆ ಮಾತ್ರ ತಿಳಿಸಿದ್ದ ಬಾಲಕಿ ಪೋಷಕರ ಬಳಿ ಹೇಳಿರಲಿಲ್ಲ. [ತಾಯಿಯ ಜೀವಕ್ಕೆ ಕುತ್ತಾದ ವಿಚಿತ್ರ ಮಗುವಿನ ಜನನ!]

ಈ ನಡುವೆ ಆಗಸ್ಟ್ 15ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲೂ ಸಹ ಭಾಗವಹಿಸಿದ್ದ ಬಾಲಕಿ ಆಗಸ್ಟ್ 25ರಂದು ಆಶ್ರಮ ಶಾಲೆಯಲ್ಲಿ ಹೊಟ್ಟೆ ನೋವಿನಿಂದ ನರಳಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇದನ್ನು ಕಂಡ ಆಶ್ರಮ ಶಾಲೆಯ ಸಿಬ್ಬಂದಿಗಳು ಕೂಡಲೇ ಆಕೆಯ ಪೋಷಕರಿಗೆ ಸುದ್ದಿ ಮುಟ್ಟಿಸಿ, ಮನೆಗೆ ಕಳುಹಿಸಿದರು.

ಆಶ್ರಮ ಶಾಲೆಯಲ್ಲಿ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂಗತಿ ಹೊರ ಬೀಳುತ್ತಿದ್ದಂತೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ ಮತ್ತು ಮಕ್ಕಳ ರಕ್ಷಣಾ ಸಮಿತಿ ಭೇಟಿ ನೀಡಿ, ರತ್ನಿ ಮತ್ತು ಮಗುವನ್ನು ಆರೋಗ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. [ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಟ್ರೆಕ್ಕಿಂಗ್, ನಾಲ್ವರ ಬಂಧನ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 15-year-old minor girl has given birth to baby girl in tribal school in Male Mahadeshwar hills on 25th August. She had an illicit relationship with 18 year old boy. She was removed from govt school as she was pregnant.
Please Wait while comments are loading...