Mettur Dam: ಕಾವೇರಿ ಆರ್ಭಟದಿಂದ ಮೆಟ್ಟೂರು ಜಲಾಶಯ ಭರ್ತಿ: ಸಾಲೂರು ಶ್ರೀಗಳಿಂದ ಪೂಜೆ
Mettur Dam: ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟಿಸುತ್ತಲೇ ಇದ್ದು, ಪರಿಣಾಮ ನದಿ, ಕೆರೆ-ಕಟ್ಟೆಗಳು ಅಲ್ಲದೆ, ಅನೇಕ ಜಲಮೂಗಳು ಅಪಾಯದ ಮಟ್ಟದಲ್ಲಿ ತುಂಬಿ ಉಕ್ಕಿ ಹರಿಯುತ್ತಿವೆ. ಇನ್ನು ಇದೀಗ ಕಾವೇರಿ ಆರ್ಭಟಕ್ಕೆ ಭರ್ತಿಯಾಗಿರುವ ಮೆಟ್ಟೂರು ಜಲಾಶಯದಲ್ಲಿ ಕಾವೇರಿ ಮಾತೆಗೆ ಸಾಲೂರು ಶ್ರೀ ಪೂಜೆ ಸಲ್ಲಿಸಿದರು.
ತಮಿಳುನಾಡಿನ ಮೆಟ್ಟೂರು ಶಾಸಕ ಸದಾಶಿವಂ ಅವರೊಟ್ಟಿಗೆ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಜಲಾಶಯಕ್ಕೆ ಭೇಟಿ ನೀಡಿ, ಕಾವೇರಿ ಮಾತೆಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಪ್ರತಿವರ್ಷವೂ ಕರ್ನಾಟಕ ಮತ್ತು ತಮಿಳುನಾಡಿಗೆ ಕಾವೇರಿ ಕೃಪೆ ಇರಲಿ, ಎರಡೂ ರಾಜ್ಯದ ರೈತರ ಉತ್ತಮ ನೀರು ಪಡೆದು ಬೆಳೆ ಚೆನ್ನಾಗಿ ಬೆಳೆಯಲಿ, ಕಾವೇರಿ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟು ಮಾಡುವುದಿಲ್ಲ ಎಂದು ಮೆಟ್ಟೂರು ಶಾಸಕ ಸದಾಶಿವಂ ಹೇಳಿದ್ದಾರೆ. ಪೂಜೆ ಸಲ್ಲಿಕೆ ವೇಳೆ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರಘು ಸೇರಿದಂಯೆ ಮತ್ತಿತರರು ಇದ್ದರು.
ಕಾವೇರಿ ಆರ್ಭಟಕ್ಕೆ ಮೆಟ್ಟೂರು ಭರ್ತಿ: 120 ಅಡಿ ನೀರಿನ ಸಂಗ್ರಹಣಾ ಸಾಮಾರ್ಥ್ಯವುಳ್ಳ ಮೆಟ್ಟೂರು ಜಲಾಶಯವು ಕಾವೇರಿ ಆರ್ಭಟಕ್ಕೆ ಭರ್ತಿಯಾಗಿದೆ. ಅಣೆಕಟ್ಟೆಗೆ ಕೇವಲ 7 ದಿನಗಳಲ್ಲಿ 59 ಅಡಿಗಳಷ್ಟು ನೀರು ಬಂದಿದೆ. ಜುಲೈ 20ರಂದು ಮೆಟ್ಟೂರು ಜಲಾಶಯದಲ್ಲಿ 61 ಅಡಿ ನೀರು ಸಂಗ್ರಹವಾಗಿತ್ತು. ಜುಲೈ 27ರ ವೇಳೆಗೆ ಇದು 120 ಅಡಿಗೆ ಏರಿಕೆಯಾಗಿತ್ತು.
ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಕಳೆದ ಎರಡು ದಿನಗಳಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಧುಮ್ಮಿಕ್ಕುತ್ತಿರುವ ಜೋಗ್ ಫಾಲ್ಸ್: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಫಾಲ್ಸ್‌ಗಳು ಸಾಗರದಂತೆ ಮೇಲಿನಿಂದ ಧುಮ್ಮಿಕ್ಕುತ್ತಿವೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತದ ರಾಜ, ರಾಣಿ, ರೋರಲ್, ರಾಕೇಟ್ ಜೊತೆ ಚಿಕ್ಕಪ್ಪ, ದೊಡ್ಡಮ್ಮ, ದೊಡ್ಡಪ್ಪ ಎನ್ನುವ ನೀರಿನ ಸೆಲೆಗಳು ಹುಟ್ಟಿಕೊಂಡಿವೆ ಎನ್ನುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಪ್ರವಾಸಿ ತಾಣಗಳ ತವರೂರು ಅಂತಲೇ ಹೆಸರುವಾಸಿಯಾಗಿರುವ ಶಿವಮೊಗ್ಗ ಜಿಲ್ಲೆಯಿಂದ ಜೋಗ್ ಫಾಲ್ಸ್ 106.3 ಕಿಲೋ ಮೀಟರ್ ದೂರ ಆಗುತ್ತದೆ. ಬೆಂಗಳೂರಿನಿಂದ 402.4 ಕಿಲೋ ಮೀಟರ್ ದೂರ ಆಗುತ್ತಿದೆ. ಇನ್ನೂ ಕಳೆದ ವರ್ಷ ಅಂದರೆ 2023ರಲ್ಲಿ ಮುಂಗಾರು ಕೈಕೊಟ್ಟ ಕಾರಣ ಈ ಫಾಲ್ಸ್‌ಗೆ ನೀರಿನ ಹರಿವಿನ ಪ್ರಮಾಣ ತುಂಬಾ ಕಡಿಮೆಯಾಗಿತ್ತು.
ಆದರೆ ಇದೀಗ 2024 ಜೂನ್ ಆರಂಭವಾಗುತ್ತಿದ್ದಂತೆ ಮುಂಗಾರು ಚುರುಕು ಪಡೆದಿದ್ದು, ಇದೀಗ ಫಾಲ್ಸ್‌ನಲ್ಲಿ ಬರೀ ರಾಜ, ರಾಣಿ, ರೋರಲ್, ರಾಕೇಟ್ ಜೊತೆಗೆ ಹೊಸದಾಗಿ ಚಿಕ್ಕಪ್ಪ, ದೊಡ್ಡಮ್ಮ, ದೊಡ್ಡಪ್ಪ ಹುಟ್ಟಿಕೊಂಡಿದ್ದಾರೆ ಎನ್ನುವ ವಿಡಿಯೋವೊಂದು ಸದ್ದು ಮಾಡುತ್ತಿದೆ.
ಫಾಲ್ಸ್‌ಗೆ ರಾಜ, ರಾಣಿ, ರೋರಲ್, ರಾಕೇಟ್ ಜೊತೆಗೆ ಹೊಸದಾಗಿ ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ ಮಕ್ಕಳನ್ನು ಕೂಡ ಕೊರೆದುಕೊಂಡು ಬಂದಿವೆ ಎನ್ನುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮಲೆನಾಡಿನ ಪ್ರವಾಸಿ ತಾಣಗಳ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯಲ್ಲೂ ಮಳೆರಾಯ ಆರ್ಭಟ ಮುಂದುರೆಸಿದ ಹಿನ್ನೆಲೆ ಇಲ್ಲಿನ ವಿಶ್ವಪ್ರಸಿದ್ಧ ತಾಣವಾದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಅಲ್ಲದೆ, ಸಾಗರ ರೂಪ ಪಡೆದಿದೆ. ಇನ್ನು ಈ ನೀರನ್ನು ಆಶ್ರಯಿಸಿದ್ದ ಜೀವಸಂಕುಲಗಳು, ಸರಿಸೃಪಗಳು ಹಾಗೂ ಜಲಚರಗಳಲ್ಲೂ ಹೊಸ ಚೈತನ್ಯ ಮೂಡಿದಂತಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರೀಲ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹಾಗೆಯೇ ಜೋಗ ಜಲಪಾತದ ಈ ವಿಡಿಯೋವೂ ಸಹ ಇದೀಗ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications