• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೋಮವಾರದಿಂದ ಮಲೆ ಮಹದೇಶ್ವರನ ದೇಗುಲ ಓಪನ್

|
Google Oneindia Kannada News

ಚಾಮರಾಜನಗರ, ಜೂನ್ 6: ಜೂನ್ 8 ರಿಂದ ಭಕ್ತರಿಗೆ ಮಾದಪ್ಪನ ದರ್ಶನ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ಲಾಕ್‌ಡೌನ್‌ನಿಂದ ಮುಚ್ಚಿದ್ದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ದೇಗುಲವನ್ನು ಇದೀಗ ತೆರೆಯಲಾಗುತ್ತಿದೆ

   Sanitizer company claiming to destroy corona fined by high court| Devtol Sanitizer |Oneindia Kannada

   ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಇನ್ನಷ್ಟು ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಹಲವು ಷರತ್ತುಗಳ ಮೇಲೆ ಮಾದಪ್ಪನ ದರ್ಶನ ಭಾಗ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿ ದಿನ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ ಮಾತ್ರ ಮಾದಪ್ಪನ ದರ್ಶನ ಭಕ್ತರಿಗೆ ಸಿಗಲಿದೆ.

   ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ಭಕ್ತರಿಗೆ ಮಹತ್ವದ ಪ್ರಕಟಣೆಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ಭಕ್ತರಿಗೆ ಮಹತ್ವದ ಪ್ರಕಟಣೆ

   ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೇವಸ್ಥಾನದ ಸಿಬ್ಬಂದಿ ಮತ್ತು ಭಕ್ತರು ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ. ತಮಿಳುನಾಡಿನಿಂದ ಬರುವ ಭಕ್ತರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ.

   ದೇವಸ್ಥಾನದಲ್ಲಿ ಲಾಡು ಮತ್ತು ಪ್ರಸಾದ ವಿತರಣೆಗೆ ಮಾತ್ರ ಅವಕಾಶವಿದ್ದು, ತೀರ್ಥ, ಮಹಾ ಮಂಗಳಾರತಿ ಮತ್ತು ಪಂಚಾಮೃತ ನಿರ್ಬಂಧವಿದೆ. ದಾಸೋಹ ಭವನದಲ್ಲಿ ತಾತ್ಕಾಲಿಕವಾಗಿ ಊಟದ ವ್ಯವಸ್ಥೆ ಬಂದ್ ಆಗಿದೆ.

   ಇವುಗಳ ಜೊತೆಗೆ ಸದ್ಯದ ಮಟ್ಟಿಗೆ ಚಿನ್ನ ಹಾಗೂ ಬೆಳ್ಳಿ ರಥಗಳ ಉತ್ಸವವನ್ನು ನಿರ್ಬಂಧಿಸಲಾಗಿದೆ ಎಂದು ಚಾಮರಾಜನಗರ ದಲ್ಲಿ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

   English summary
   Chamarajanagar Male Mahadeshwara Temple will be opening on june 8 for devotees says S Suresh kumar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X