ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ

ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ 23 ರಿಂದ 27ರವರೆಗೆ ಮಹಾಶಿವರಾತ್ರಿ ಹಾಗೂ ಮಾರ್ಚ್ 25 ರಿಂದ 29ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ.

By Mahesh
|
Google Oneindia Kannada News

ಚಾಮರಾಜನಗರ, ಫೆಬ್ರವರಿ 20: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಐತಿಹಾಸಿಕ ಮಲೆಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ 23 ರಿಂದ 27ರವರೆಗೆ ಮಹಾಶಿವರಾತ್ರಿ ಹಾಗೂ ಮಾರ್ಚ್ 25 ರಿಂದ 29ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇಗುಲದ ಮಂಡಳಿ ಪ್ರಕಟಿಸಿದೆ.

ಫೆಬ್ರವರಿ 23ರಂದು ಮಹಾಶಿವರಾತ್ರಿ ಜಾತ್ರೆ ಮಹೋತ್ಸವ ಆರಂಭಗೊಳ್ಳಲಿದೆ. ಫೆ. 24ರಂದು ಶ್ರೀಸ್ವಾಮಿಗೆ ಎಣ್ಣೆಮಜ್ಜನ, ವಿಶೇಷ ಸೇವೆ ಉತ್ಸವ ಹಾಗೂ ಜಾಗರಣೆ ಉತ್ಸವ, [ಶಿವರಾತ್ರಿ ದೆಸೆ : ಮೂರು ದಿನ ಬ್ಯಾಂಕುಗಳಿಗೆ ರಜೆ]

* ಫೆ. 25ರಂದು ಶ್ರೀಸ್ವಾಮಿಗೆ ವಿಶೇಷ ಸೇವೆ ಮತ್ತು ಉತ್ಸವ,
* ಫೆ. 26ರಂದು ಅಮಾವಾಸ್ಯೆ ಉತ್ಸವಾದಿಗಳು ಜರುಗಲಿವೆ.
* ಫೆ. 27ರಂದು ಬೆಳಿಗ್ಗೆ 9.40 ರಿಂದ 10.30 ಗಂಟೆಯವರೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ ಅಭಿಷೇಕ ಪೂಜೆ ಕೈಂಕರ್ಯಗಳು ನೆರವೇರಿದ ಬಳಿಕ ಕೊಂಡೋತ್ಸವ ನಡೆಯಲಿದೆ.

Maha Shivaratri at Male Mahadeshwara Betta From Feb 23 to 27

ಯುಗಾದಿ ಜಾತ್ರೆ: ಮಾರ್ಚ್ 25ರಂದು ಯುಗಾದಿ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ.
* ಮಾ. 26ರಂದು ಎಣ್ಣೆ ಮಜ್ಜನ ಹಾಗೂ ವಿಶೇಷ ಸೇವೆ,
* ಮಾ. 27ರಂದು ಶ್ರೀಸ್ವಾಮಿಗೆ ವಿಶೇಷ ಸೇವೆ ಉತ್ಸವಾದಿಗಳು,
* ಮಾ 28ರಂದು ಅಮಾವಾಸ್ಯೆ, ವಿಶೇಷ ಸೇವೆ ಉತ್ಸವಾದಿಗಳು ನಡೆಯಲಿವೆ.
* ಮಾ 29ರಂದು ಚಾಂದ್ರಮಾನ ಯುಗಾದಿ ಹಾಗೂ ಮಹಾರಥೋತ್ಸವವು ಬೆಳಿಗ್ಗೆ 10.30 ರಿಂದ 11.05 ಗಂಟೆಯವರೆಗೆ ನಡೆಯಲಿದೆ.

ವಿಶೇಷ ಸೇವೆ, ಉತ್ಸವಗಳು ಸಾಲೂರು ಬೃಹನಠದ ಅಧ್ಯಕ್ಷರಾದ ಶ್ರೀ ಪಟ್ಟದ ಗುರುಸ್ವಾಮಿಗಳು ಹಾಗೂ ಪ್ರಣವ ಶ್ರೀ ಪಟ್ಟದ ಇಮ್ಮುಡಿ ಮಹದೇವಸ್ವಾಮಿಗಳ ನೇತೃತ್ವದಲ್ಲಿ ಜರುಗಲಿದೆ ಎಂದು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Maha Shivaratri celebration will be held from February 23 to 27, 2017 at Male Mahadeshwara Betta, Kollegala, Chamarajanagara district in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X