ಚಾಮರಾಜನಗರ: ಕಾರು ಕಂಡು ರಗಡ್ ಲುಕ್ ಕೊಟ್ಟ ಚಿರತೆ.!-ವಿಡಿಯೋ ವೈರಲ್
ಚಾಮರಾಜನಗರ, ಅಕ್ಟೋಬರ್, 18: ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಣಿಗಳು ಹಾವಳಿ ಮಾಡುತ್ತಲೇ ಇರುತ್ತವೆ. ಇನ್ನೂ ಈ ವಿಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಉದಾಹರಣೆಗಳಿವೆ. ಹಾಗೆಯೇ ಇದೀಗ ಚಿರತೆಯೊಂದು ರಸ್ತೆಬದಿಯೇ ಪ್ರವಾಸಿಗರಿಗೆ ದರ್ಶನ ಕೊಟ್ಟ ಘಟನೆ ಪ್ರಸಿದ್ಧ ಪ್ರವಾಸಿ ತಾಣವಾದ ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ನಡೆದಿದೆ.
ತಮಿಳುನಾಡಿನ ಪ್ರವಾಸಿಗರು ತೆರಳುತ್ತಿದ್ದ ವೇಳೆ ರಸ್ತೆಬದಿಯೇ ಚಿರತೆ ಕಂಡಿದ್ದಾರೆ. ಇನ್ನು, ಕಾರಿನಲ್ಲಿದ್ದವರು ತನ್ನನ್ನು ನೋಡುತ್ತಿದ್ದನ್ನು ಕಂಡ ಚಿರತೆ ನಿಂತು ರಗಡ್ ಲುಕ್ ಕೊಟ್ಟಿದ್ದು, ಈ ದೃಶ್ಯ ಪ್ರವಾಸಿಗೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.

ಕಾರಿನ ಹಿಂದೆ ಬಸ್ ಬಂದಿದೆ. ಈ ವೇಳೆ ಚಿರತೆಯು ಬಂಡೆಕಲ್ಲಿನ ಮೇಲೆ ನಿಂತು ಜನರನ್ನು ಗುರಾಯಿಸಿದ್ದು, ಈ ವೀಡಿಯೋ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ರಸ್ತೆಗಿಳಿದ ಆನೆ: ಕಾಡಾನೆಯೊಂದು ರಸ್ತೆಗಿಳಿದ ಪರಿಣಾಮ ಹೆದ್ದಾರಿಯ ಎರಡೂ ಬದಿ ವಾಹನಗಳು ನಿಂತಲ್ಲೇ ನಿಂತ ಘಟನೆ ಚಾಮರಾಜನಗರ ಸಮೀಪದ ತಾಳವಾಡಿಯ ಚಿಕ್ಕಳ್ಳಿಯಲ್ಲಿ ನಡೆದಿದೆ. ಆಹಾರ ಅರಸಿ ನಾಡಿನತ್ತ ಬಂದ ಆನೆ ರಸ್ತೆಯಲ್ಲಿ ಓಡಾಡಿದ್ದರಿಂದ ಟ್ರ್ಯಾಕ್ಟರ್, ಕಾರು, ಬೈಕ್ ಸವಾರರು ಗಾಬಾರಿಗೊಂಡು ತಪ್ಪಿಕೊಳ್ಳಲು ಹರಸಹಾಸಪಟ್ಟಿದ್ದಾರೆ.
ಇನ್ನು ಆನೆ ಓಡಾಟದ ದೃಶ್ಯವನ್ನು ಟ್ರ್ಯಾಕ್ಟರ್ ಚಾಲಕ ಸೆರೆ ಹಿಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಜಾಗರೂಕತೆಯಿಂದ ವಾಹನ ಚಲಾಯಿಸಿ, ವನ್ಯಜೀವಿಗಳಿಗೆ ಯಾವುದೇ ಹಣ್ಣುಗಳನ್ನು ಕೊಡಬೇಡಿ ಎಂದು ಅರಣ್ಯ ಇಲಾಖೆ ಸಲಹೆ ನೀಡಿದೆ.
ಬೋನಿಗೆ ಬಿದ್ದ ಚಿರತೆ: ಕಳೆದ 3 ತಿಂಗಳುಗಳಿಂದ ರೈತರಿಗೆ ಉಪಟಳ ಕೊಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಸೆರೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದಲ್ಲಿ ನಡೆದಿದೆ.
ಕುಲಗಾಣ ಗ್ರಾಮದ ಬಾಬು ಅಯ್ಯಂಗಾರ್ ಎಂಬುವವನ ಜಮೀನಿನಲ್ಲಿ ನಾಯಿ ಕಟ್ಟಿ ಬೋನನ್ನು ಇರಿಸಲಾಗಿತ್ತು. ಆಹಾರ ಅರಸಿ ಬಂದ ಚಿರತೆಯು ನಾಯಿ ಆಸೆಗೆ ಬೋನಲ್ಲಿ ಸೆರೆಯಾಗಿದೆ.
ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಬಫರ್ ವಲಯದಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಮುಂದಿನ ಕ್ರಮ ಕೈಗೊಂಡಿದೆ. ಸೆರೆಯಾದ ಚಿರತೆ ಗಂಡಾಗಿದ್ದು, 5 ವರ್ಷ ಇರಬಹುದು ಎಂದು ಅಂದಾಜು ಮಾಡಲಾಗಿದೆ.












Click it and Unblock the Notifications