ಗುಂಡ್ಲುಪೇಟೆ: ಚಿರತೆ ಬಂತು ಚಿರತೆ.. ಕಾರಿನ ಬಳಿಯೇ ಬಂದ್ಬಿಡ್ತು; ವಿಡಿಯೋ ಭಾರೀ ವೈರಲ್
ಚಾಮರಾಜನಗರ, ನವೆಂಬರ್, 09: ಚಾಮರಾಜನಗರ ಜಿಲ್ಲೆಯಲ್ಲಿನ ಪ್ರಾಣಿಗಳ ಹಾವಳಿ ವಿಡಿಯೋ ಸಮಾಜಿಕ ಜಾಲತಾನಗಳಲ್ಲಿ ವೈರಲ್ ಆಗುತ್ತಲೇ ಇವೆ. ಇತ್ತೀಚೆಗಷ್ಟೇ ಗುಂಡ್ಲುಪೇಟೆ ತಾಲ್ಲೂಕಿನ ಗೋಪಾಲಸ್ವಾಮಿ ಬೆಟ್ಟಕ್ಕೆ ಹುಲಿ ಬಂದಿದ್ದು, ಈ ದೃಶ್ಯ ಪ್ರವಾಸಿಗ ಫೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಇದೇ ಸ್ಥಳದಲ್ಲಿ ಚಿರತೆಯ ಹಾವಾಳಿ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಹಸಿರಿನ ವನಸಿರಿಗೆ ಸದಾ ಮಂಜು ಮುಸುಕಿ ದೃಶ್ಯ ಕಾವ್ಯವನ್ನೇ ಸೃಷ್ಟಿಸುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕರ್ನಾಟಕದ ಕಾಶ್ಮೀರ ಎನಿಸಿಕೊಂಡಿದೆ. ಇಲ್ಲಿನ ಗೋಪಾಲಸ್ವಾಮಿಗೆ ಅಪಾರ ಭಕ್ತರಿದ್ದಾರೆ. ವಾರಾಂತ್ಯ ಬಂತೆಂದರೆ ಸಾಕು ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರಲಿದೆ. ಇನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಬೆಟ್ಟವಿದ್ದು, ಇಲ್ಲಿರುವ ಹುಲಿ, ಚಿರತೆ, ಕರಡಿ, ಆನೆಗಳು ಪ್ರವಾಸಿಗರಿಗೆ ದರ್ಶನ ಕೊಡುತ್ತಲೇ ಇರುತ್ತಿರುತ್ತವೆ.

ಅಂದಹಾಗೆ ಕೆಲ ದಿನಗಳ ಹಿಂದೆಯಷ್ಟೇ ಜೋಡಿ ಚಿರತೆಗಳು ದರ್ಶನ ಕೊಟ್ಟಿದ್ದು, ಒಂದು ಚಿರತೆ ಹಿಂದೆಯೇ ಬೇರೆ ಕಡೆ ಹೊರಟರೆ, ಒಂದಂತೂ ಯಾವುದೇ ಅಳುಕಿಲ್ಲದೇ ತಾನೇ ಇಲ್ಲಿನ ರಾಜ ಎಂಬಂತೆ ನಡೆದುಬಂದಿದೆ. ಹತ್ತಿತ-ಹತ್ತಿರ ಇನ್ನೂ ಹತ್ತಿರ ಎಂಬಂತೆ ಕೆಲವೇ ಮೀಟರ್‌ಗಳ ಅಂತರಕ್ಕೆ ಬಂದ ಚಿರತೆ ರಸ್ತೆ ತಡೆಗೋಡಿ ಏರಿ ಮಾಯವಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಚುಮು ಚುಮು ಚಳಿಯಲ್ಲಿ ಓಡಾಡಿದ ಬೆಟ್ಟದ ಹುಲಿ: ಗೋಪಾಲಸ್ವಾಮಿ ಬೆಟ್ಟದಲ್ಲಿ ಮಧ್ಯಾಹ್ನದವರೆಗೂ ದಟ್ಟ ಮಂಜು ತಂಪು ತಂಪು ವಾತಾವರಣ ಕವಿದಿರುತ್ತದೆ. ಇದರ ನಡುವೆಯೇ ಬೆಟ್ಟದಲ್ಲಿ ಹುಲಿರಾಯ ಆಗಾಗ ದರ್ಶನ ನೀಡುತ್ತಿದ್ದು, ಇದರಿಂದ ಪ್ರವಾಸಿಗರು, ಭಕ್ತರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುಮುತ್ತಲಿನ ಕಾಡಿನಲ್ಲಿ ಆಗಾಗ ಹುಲಿಯೊಂದು ಕಾಣಿಸಿಕೊಳ್ಳುತ್ತಿದೆ. ಹೀಗೆ ಪ್ರವಾಸಿಗರ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ಬೆಟ್ಟದ ಹುಲಿ ಅಂತಲೇ ಕರೆಸಿಕೊಳ್ಳುತ್ತಿವೆ.
ಒಟ್ಟಿನಲ್ಲಿ ದಟ್ಟ ಮಂಜಿನ ಆನಂದ ಅನುಭವಿಸುತ್ತಿದ್ದ ಪ್ರವಾಸಿಗರು ಈಗ ಬೆಟ್ಟದ ಹುಲಿಯನ್ನು ಕಂಡು ಖುಷಿಪಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಈ ಮೂಲಕ ಈ ವಿಡಿಯೋಗಳು ಸಖತ್ ಟ್ರೆಂಡ್ ಆಗಿಬಿಟ್ಟಿವೆ.












Click it and Unblock the Notifications