ಗುಂಡ್ಲುಪೇಟೆ ಕಡಬೂರು ಗೇಟ್ ಬಳಿ ಸಾರಿಗೆ ಬಸ್ ಪಲ್ಟಿ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜಗರ, ಜನವರಿ 10: ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಕಡಬೂರು ಗೇಟ್ ಸಮೀಪ ನಡೆದಿದ್ದು, ಬಸ್ ನಿಯಂತ್ರಣ ತಪ್ಪಲು ರಸ್ತೆಯ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಪಟ್ಟಣದ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಾಮರಾಜಗರ ತಾಲೂಕಿನ ಯರಗನಹಳ್ಳಿ ಗ್ರಾಮಕ್ಕೆ ತೆರಳಿ ಮತ್ತೆ ಪಟ್ಟಣದತ್ತ ಹಿಂತಿರುಗುತ್ತಿದ್ದಾಗ ಘಟನೆ ನಡೆದಿದೆ. ಕಿರಿದಾದ ಹಾಗೂ ಬದಿಯಲ್ಲಿ ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆಯಲ್ಲಿ ಎದುರು ಬಂದ ವಾಹನಕ್ಕೆ ಅವಕಾಶ ಮಾಡಿ ಕೊಡಲು ಸರಿದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಬದಿಗೆ ನಿಧಾನವಾಗಿ ಮಗುಚಿದೆ.[ಬೈಕ್ ಗೆ ಬಸ್ ಡಿಕ್ಕಿ: ಅಣ್ಣ ಸ್ಥಳದಲ್ಲೇ ಸಾವು, ತಂಗಿ ಸ್ಥಿತಿ ಗಂಭೀರ]

KSRTC bus topple in Gundlupet taluk

ಬಸ್ ನಲ್ಲಿ ಸಿಬ್ಬಂದಿಯೊಂದಿಗೆ ಕೇವಲ 5 ಪ್ರಯಾಣಿಕರಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಬೊಮ್ಮನಹಳ್ಳಿಯಿಂದ ಅರಕಲವಾಡಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. 8 ತಿಂಗಳಿನಿಂದಲೂ ಕಾಮಗಾರಿ ನಡೆಸುತ್ತಿದ್ದು, ಮೆಟ್ಲಿಂಗ್ ಹಂತದಲ್ಲಿ ಸ್ಥಗಿತವಾಗಿದೆ.[ಮಹಾರಾಷ್ಟ್ರದಲ್ಲಿ ಕೆಎಸ್ಆರ್ ಟಿಸಿ ಬಸ್ ದುರಂತ. ಆರು ಮಂದಿ ಸಾವು]

ಸಮರ್ಪಕ ನೀರು ದೊರಕದ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ನಡೆಸುತ್ತಿದ್ದು, ನೀರು ಹರಿಸದ ಪರಿಣಾಮವಾಗಿ ದೂಳು ಎದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಮಾರ್ಗದಲ್ಲಿ ಕಲ್ಲುಗಳು ಮೇಲೆದ್ದು, ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ರಸ್ತೆ ಬದಿಯಲ್ಲಿ ಹಳ್ಳ-ಗುಂಡಿಗಳಿಗೆ ಮಣ್ಣು ತುಂಬಿಸಿ ಸಮತಟ್ಟು ಮಾಡದ ಪರಿಣಾಮವಾಗಿ ಎದುರು ಬರುವ ವಾಹನಕ್ಕೆ ದಾರಿ ಕೊಡಲು ಸಾಧ್ಯವಿಲ್ಲದಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KSRTC bus topple in Gundlupet taluk, Chamarajanagar district on Tuesday. But no casualities reported.
Please Wait while comments are loading...