ಪಶ್ಚಿಮಘಟ್ಟದ ಕಸ್ತೂರಿ ರಂಗನ್ ವರದಿಯಿಂದ ಚಾಮರಾಜನಗರದ ಯಾವ ಹಳ್ಳಿಗೆ ಅಪಾಯ!
ಬೆಂಗಳೂರು, ಜುಲೈ19: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೇ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಚಾಮರಾಜನಗರ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ ಎಂಬುದರ ವಿವರಣೆ ಇಲ್ಲಿದೆ.
ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ.
ಕೇಂದ್ರ ಸರ್ಕಾರಕ್ಕೆ ಗಾಡ್ಗೀಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗೀಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್ ತಮಿಳುನಾಡಿ, ಮಹಾರಾಷ್ಟ್ರ, ಗೋವಾ, ಕರ್ನಾಟಕದ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20,668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.

ಚಾಮರಾಜನಗರ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರುತ್ತದೆ:
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಳ್ಳಿಗಳಾದ ಬೆರೆಂಬಾಡಿ ಸ್ಟೇಟ್ ಫಾರೆಸ್ಟ್, ಬೆರೆಂಬಾಡಿ ಜಿಲ್ಲಾ ಅರಣ್ಯ, ಬರಗಿ, ಬೆರೆಂಬಾಡಿ ಡಿಸ್ಟಿಕ್ಟ್ ಫಾರೆಸ್ಟ್, ಹೊಂಗಹಳ್ಳಿ, ಚನ್ನಮಲ್ಲಿಪುರ, ಮದ್ದೂರು, ಬೆರೆಂಬಾಡಿ, ಲಕ್ಕಿಪುರ, ಕಲ್ಲಿಪುರ, ಕುನಗಹಳ್ಳಿ, ಬೆರೆಂಬಾಡಿ ಸ್ಟೇಟ್ ಫಾರೆಸ್ಟ್, ಹೆಗ್ಗವಾಡಿ, ಚಿರಕನಹಳ್ಳಿ, ಕಡಬೂರ್, ಬಂಡೀಪುರ ಸ್ಟೇಟ್ ಫಾರೆಸ್ಟ್, ಮಗುವಿನಹಳ್ಳಿ ಮೇಲ್ ಕಮನಹಳ್ಳಿ, ಬಂಡೀಪುರ ಡಿಸ್ಟಿಕ್ಟ್ ಫಾರೆಸ್ಟ್, ಬಂಡೀಪುರ, ಕನಿಯನಪುರ ಎಂಬ ಹಳ್ಳಿಗಳು ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸಿರುವ ವ್ಯಾಪ್ತಿಯಲ್ಲಿ ಬರಲಿದೆ. ಚಾಮರಾಜಗರದ ಈ ಹಳ್ಳಿಗಳಿಗೆ ಕಸ್ತೂರಿ ರಂಗನ್ ವರದಿ ಅನುಷ್ಟಾನ ಮಾಡಿದರೇ ಜನರಿಗೆ ಅಪಾಯ ಖಚಿತವಾಗಲಿದೆ.












Click it and Unblock the Notifications