Get Updates
Get notified of breaking news, exclusive insights, and must-see stories!

ಹನೂರೂ: ವಿದ್ಯುತ್‌, ರಸ್ತೆ, ಆಸ್ಪತ್ರೆಯೂ ಇಲ್ಲ, ಅದಕ್ಕೆ ನಮ್ಮ ವೋಟ್‌ ನಿಮಗಿಲ್ಲ: ರಾಜಕಾರಣಿಗಳಿಗೆ ಸೆಡ್ಡು ಹೊಡೆದ ಮತದಾರರು

ಚಾಮರಾಜನಗರ, ಏಪ್ರಿಲ್‌, 17: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದೇ ಸರಿಯಾದ ಸಮಯ ಎಂದು ಹಲವು ಗ್ರಾಮಗಳ ಜನರು ಸಮಸ್ಯೆಯನ್ನು ಬಗೆಹರಿಸುವವರೆಗೂ ನಾವು ಮತದಾನ ಮಾಡುವುದಿಲ್ಲ ಅಂತಾ ರಾಜಕಾರಣಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಇದೇ ರೀತಿ ಹನೂರು ತಾಲೂಕಿನ ಎರಡು ಗ್ರಾಮಗಳಲ್ಲಿ ನಡೆದಿದೆ.

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಮ್ಮ ಊರಿಗೆ ಒಂದು ರಸ್ತೆ, ವಿದ್ಯುತ್ ಸಂಪರ್ಕ, ಆಸ್ಪತ್ರೆಯೂ ಇಲ್ಲದಂತಾಗಿದೆ. ಆದ್ದರಿಂದ ಈ ಬಾರಿ ಯಾರಿಗೂ ಮತ ಹಾಕುವುದಿಲ್ಲ ಎಂದು ಹೇಳುವ ಮೂಲಕ ಹನೂರು ತಾಲೂಕಿನ ಪಡಿಸಲನತ್ತ ಮತ್ತು ತೇಕಾಣೆ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ.

 Karnataka election 2023: Hanur: No electricity, road and hospital: Election boycott warning by voters

ಚುನಾವಣಾ ಬಹಿಷ್ಕಾರದ ನಿರ್ಧಾರ

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡಿಸಲನತ್ತ ಮತ್ತು ತೇಕಾಣೆ ಗ್ರಾಮಸ್ಥರು ಮೂಲಸೌಕರ್ಯ ಕಲ್ಪಿಸದಿದ್ದಕ್ಕೇ ಚುನಾವಣಾ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ. ರಸ್ತೆ ಇಲ್ಲದೇ ನಡೆದೇ ಹೋಗಬೇಕಿರುವ ಹಿನ್ನೆಲೆಯಲ್ಲಿ ಈ ಊರಿಗೆ ಇನ್ನೂ ‌ಮತ ಕೇಳಲೂ ಯಾರು ಬಂದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಗ್ರಾಮಸ್ಥರಿಂದ ಆಕ್ರೋಶ

ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದ ವ್ಯಾಪ್ತಿಗೆ ಈ ಎರಡು ಗ್ರಾಮಗಳು ಒಳಪಡಲಿದ್ದು, ರಸ್ತೆ ನಿರ್ಮಾಣಕ್ಕೆ ಅರಣ್ಯ ಕಾಯ್ದೆಗಳು ಅಡ್ಡಿ ಆಗಿದೆ.‌ ಆದ್ದರಿಂದ ಈಗಲೂ ಅನಾರೋಗ್ಯಕೀಡಾದವರನ್ನು ಡೋಲಿ ಮೂಲಕ 10-14 ಕಿಲೋ ಮೀಟರ್‌ವರೆಗೂ ಹೊತ್ತೋಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ವಿದ್ಯುತ್ ಸಂಪರ್ಕವೂ ಕೂಡ ಇಲ್ಲದಂತಾಗಿದೆ. ಇಷ್ಟೊಂದು ಅನ್ಯಾಯಕ್ಕೆ ಒಳಗಾಗಿರುವ ನಾವು ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೇಕಾಣೆ ಗ್ರಾಮದಲ್ಲಿ 50 ಮನೆ, ಪಡಿಸಲನತ್ತ ಗ್ರಾಮದಲ್ಲಿ 80 ಮನೆಗಳಿದ್ದು, ಇಲ್ಲಿ ಒಟ್ಟು 270 ಮತಗಳಿವೆ. ರಸ್ತೆ ನಿರ್ಮಾಣ ಮಾಡಿದರಷ್ಟೇ ನಾವು ಮತ ಹಾಕುತ್ತೇವೆ ಎಂದು ಇಲ್ಲಿನ ಜನರು ರಾಜರಾರಣಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ರಸ್ತೆ ಇಲ್ಲದೆ ಜನರ ಪರದಾಟ

ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆರಡೆ ಗ್ರಾಮದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ವ್ಯಕ್ತಿಯೋರ್ವರ ಶವವನ್ನು ಊರಿಗೆ ಸಾಗಿಸಲು ರಸ್ತೆ ಇಲ್ಲದ ಕಾರಣಕ್ಕೆ ಸ್ಥಳೀಯರೇ ಕಟ್ಟಿಗೆಯೊಂದರಲ್ಲಿ ಕಟ್ಟಿಕೊಂಡು ಸುಮಾರು 5 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಊರಿಗೆ ತಲುಪಿಸಿದ ಅಮಾನವೀಯ ಘಟನೆ ನಡೆದಿದೆ.

ಬೆರಡೆ ಗ್ರಾಮದ ದಾಮು ನಾಯ್ಕ ಎನ್ನುವವರು ಆಕಸ್ಮಿಕವಾಗಿ ನಡೆದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದರು. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಮನೆಗೆ ತರಲು ಹೆದ್ದಾರಿ ವರೆಗೆ ವಾಹನದಲ್ಲಿ ತಂದು ಬಳಿಕ ಅಲ್ಲಿಂದ ಕಟ್ಟಿಗೆಯೊಂದಕ್ಕೆ ಶವವನ್ನು ಕಟ್ಟಿಕೊಂಡು ಜೋಲಿಯಾಗಿ ಐದು ಕಿ.ಮೀ ನಡೆದುಕೊಂಡು ಊರು ಸೇರಿಸಲಾಗಿದೆ.

ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಸರ್ಕಾರ ಮಾಡುವುದಾಗಿ ಜನಪ್ರತಿನಿಧಿಗಳು ಭಾಷಣ ಬಿಗಿಯುತ್ತಲೆ ಇರುತ್ತಾರೆ. ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇಂದಿಗೂ ಅದೇಷ್ಟೋ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇದೇ ರೀತಿ ಅಂಕೋಲಾದ ಬೆರಡೆ ಗ್ರಾಮದಲ್ಲಿಯೂ ರಸ್ತೆ ಸೌಕರ್ಯವೇ ಇಲ್ಲದೆ ಶವವನ್ನು ಕಟ್ಟಿಗೆಗೆ ಕಟ್ಟಿಕೊಂಡು ಕಿಲೋ ಮೀಟರ್ ದೂರವನ್ನು ಜನರೇ ಹೊತ್ತು ಸಾಗಿದ್ದಾರೆ.

ಇನ್ನು ಗ್ರಾಮದಲ್ಲಿ 10 ಮನೆ ಮಾತ್ರ ಇದೆ. ಆದರೆ ಇದೇ ಗ್ರಾಮದಲ್ಲಿ ನೂರಾರು ಕುಟುಂಬಗಳ ಜಮೀನು ಇಲ್ಲಿದೆ. ನಿತ್ಯವು ಬಂದು ಹೋಗುತ್ತಾರೆ. ಆದರೆ ಇಲ್ಲಿಯೇ ಮನೆಕಟ್ಟಿಕೊಂಡು ಬದುಕುತ್ತಿರುವ ಗ್ರಾಮಸ್ಥರು ರಸ್ತೆ ಇಲ್ಲದ ಕಾರಣ ಅನಾರೋಗ್ಯಕ್ಕೊಳಗಾದವರು ಅಲ್ಲವೇ ಯಾವುದೇ ಆಪತ್ತು ಎದುರಾದರು ಜೋಳಿಗೆ ಕಟ್ಟಿಹೊರಬೇಕಾಗಿದೆ. ಗುಡ್ಡದ ದಾರಿಯಲ್ಲಿ ಓಡಾಡುವುದಕ್ಕೂ ಕಷ್ಟದ ಪರಿಸ್ಥಿತಿ ಇದೆ. ನಮಗೆ ಒಂದು ರಸ್ತೆ ನಿರ್ಮಾಣ ಮಾಡಿಕೊಟ್ಟಲ್ಲಿ ಎಲ್ಲ ರೀತಿಯಿಂದಲೂ ಅನುಕೂಲವಾಗಲಿದೆ ಎಂದು ಸ್ಥಳೀಯರಾದ ಸಣ್ಣಪ್ಪ ನಾಯ್ಕ್‌ ಹೇಳಿದ್ದರು.

ಇನ್ನು ಬೆರಡೆ ಗ್ರಾಮವು ಐಎನ್ಎಸ್ ಕದಂಬ ನೌಕಾನೆಲೆಯ ಭೂಮಿಗೆ ಹೊಂದಿಕೊಂಡೇ ಇದ್ದು, ಗ್ರಾಮದ ಸುಮಾರು ಶೇಕಡಾ 50ರಷ್ಟು ಜಮೀನನ್ನು ನೌಕಾದಳದವರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಇನ್ನು ಗ್ರಾಮಕ್ಕೆ ಸಾಗುವ ದಾರಿಯೂ ಈ ಹಿಂದೆಯೇ ನೌಕಾನೆಲೆಯ ವ್ಯಾಪ್ತಿಗೆ ಹೋಗಿದ್ದು, ಇದಾದ ನಂತರ ಗ್ರಾಮಕ್ಕೆ ರಸ್ತೆಯೇ ಇಲ್ಲದಂತಾಗಿದೆ. ಇನ್ನು ಸುಮಾರು 150 ಎಕರೆಗೂ ಅಧಿಕ ಭೂಮಿ ಇಂದಿಗೂ ರೈತರದ್ದೇ ಆಗಿದ್ದು ಕೃಷಿ ಚಟುವಟಿಕೆಯನ್ನು ಮಾಡುತ್ತಾ ಬಂದಿದ್ದಾರೆ.

ಗ್ರಾಮದಲ್ಲಿ ರಸ್ತೆ ಇಲ್ಲದೆ ಬಹುತೇಕ ಎಲ್ಲರೂ ಬೇರೆ ಬೇರೆ ಊರುಗಳಿಗೆ ಹೋಗಿ ನೆಲೆಸಿದ್ದಾರೆ. ಪ್ರತಿದಿನ ಜಮೀನಿಗೆ ಕಿರಿದಾದ ಕಾಲುದಾರಿಯಲ್ಲಿಯೇ ಕಷ್ಟಪಟ್ಟು ಓಡಾಟ ನಡೆಸುತ್ತಾರೆ. ಗ್ರಾಮದಲ್ಲಿನ ಜನರಿಗೆ ಹೊತ್ತಿನ ಊಟಕ್ಕೆ ಏನಾದರು ಬೇಕು ಎಂದರೂ ಕೂಡ ನಡೆದುಕೊಂಡೆ ದೂರಾದ ಐದಾರು ಕಿ.ಮೀ ಅಂಕೋಲಾಗೆ ತೆರಳಿ ತರಬೇಕು.

ಅಲ್ಲದೇ ಹಳ್ಳ ಕೂಡ ಇರುವ ಕಾರಣ ಮಳೆಗಾಲದಲ್ಲಿ ಹಲವು ಮಂದಿ ಆಪತ್ತುತಂದುಕೊಂಡ ಘಟನೆ ಕೂಡ ನಡೆದಿದೆ. ನೌಕಾನೆಲೆ ಜಾಗ ಪಕ್ಕದಲ್ಲಿಯೇ ಇರುವ ಕಾರಣ ಅವರು ಕೂಡ ಹೆದರಿಸುತ್ತಾರೆ. ರಸ್ತೆ ನಿರ್ಮಿಸಿಕೊಡುವಂತೆ ಹಲವು ಬಾರಿ ಜನಪ್ರತಿನಿಧಿಗಳ ಬಳಿ ಮನವಿ ಮಾಡಿಕೊಂಡರು ಯಾರು ಸ್ಪಂದಿಸುತ್ತಿಲ್ಲ. ಪ್ರತಿ ಬಾರಿ ಯಾರೇ ಮೃತಪಟ್ಟರು ಈ ದುಸ್ಥಿತಿ ಇದೆ. ಕೂಡಲೇ ನಮಗೆ ಕನಿಷ್ಟ ಒಂದು ರಸ್ತೆ ನಿರ್ಮಾಣ ಮಾಡಿಕೊಟ್ಟಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+