IAF Plane Crash: ಚಾಮರಾಜನಗರ ಜಿಲ್ಲೆಯ ಭೋಗಾಪುರ ಬಳಿ ಭಾರತದ ವಾಯು ಸೇನೆ ಲಘು ವಿಮಾನ ಪತನ, ಪೈಲಟ್‌ಗಳು ಸೇಫ್‌ ಆಗಿದ್ದು ಹೇಗೆ?

IAF Plane Crash: ಚಾಮರಾಜನಗರ, ಜೂನ್‌, 01: ಚಾಮರಾಜನಗರ ಜಿಲ್ಲೆಯ ಭೋಗಪುರದ ಬಳಿ ಭಾರತದ ವಾಯು ಸೇನೆಯ ಲಘು ವಿಮಾನ ಪತನವಾಗಿದೆ. ಸದ್ಯ ಈ ಘಟನೆಯಲ್ಲಿ ಪೈಲಟ್‌ಗಳಿಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚಾಮರಾಜನಗರ ಜಿಲ್ಲೆಯ ಭೋಗಪುರದ ಬಳಿ ಜಮೀನುವೊಂದರಲ್ಲಿ ಲಘು ವಿಮಾಣ ಪತನವಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸರು ದೌಡಾಯಿಸಿದ್ದಾರೆ. ಇದೀಗ ಘಟನಾ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ವಿಮಾನದಲ್ಲಿದ್ದ ಪೈಲಟ್‌ಗಳಿಬ್ಬರೂ ಪ್ಯಾರಾಚೋಟ್ ಮೂಲಕ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Indian Air Force plane crash near Bhogpura village

ಪೈಲಟ್‌ಗಳು ಪಾರಾಗಿದ್ದು ಹೇಗೆ?

ಪ್ರತಿಕೂಲ ವಾತಾವರಣದಿಂದಾಗಿ ವಾಯುಸೇನೆಯ ಕಿರಣ್ ಏರ್ ಪಥ್ U692 ವಿಮಾನ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪತನಗೊಂಡಿದೆ. ಇದೊಂದು ತರಬೇತಿ ವಿಮಾನ ಆಗಿದ್ದು, ಭೂಮಿಕಾ ಹಾಗೂ ತೇಜ್ ಪಾಲ್ ಎಂಬವರು ಈ ವಿಮಾನವನ್ನು ಚಲಾಯಿಸುತ್ತಿದ್ದರು.

ಪ್ಯಾರಚೂಟ್ ಮೂಲಕ ಇಬ್ಬರೂ ತಮ್ಮನ್ನು ಬಚಾವ್ ಮಾಡಿಕೊಂಡಿದ್ದು ವಿಮಾನ ಪತನಗೊಂಡ 2 ಕಿಲೋ ಮಿಟರ್‌ ದೂರದಲ್ಲಿ ಇಬ್ಬರು ಬಿದ್ದಿದ್ದರು. ಸದ್ಯ, ಇಬ್ಬರನ್ನು ವಾಯುಸೇನೆಯವರು ಪತ್ತೆಹಚ್ಚಿ ರಕ್ಷಣೆ ಮಾಡಿದ್ದು, ಅವರನ್ನು ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದಿದ್ದಾರೆ. ಇನ್ನು ಇಬ್ಬರಿಗೂ ಕುತ್ತಿಗೆ ಬಳಿ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+