ಬೇಗೂರು ಬಾರ್ ಗೂ ಹಳೆ ನೋಟುಗಳ ನಂಟು, ಐಟಿ ಅಧಿಕಾರಿಗಳ ದಾಳಿ
ಗುಂಡ್ಲುಪೇಟೆ, ಮಾರ್ಚ್. 08 : ಅಪನಗದೀಕರಣದ ಬಳಿಕ ಅಧಿಕ ವ್ಯವಹಾರ ನಡೆಸಿದೆ ಎಂಬ ಮಾಹಿತಿಯೊಂದಿಗೆ ಬೇಗೂರಿನ ಬಾರ್ ವೊಂದರ ಮೇಲೆ ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
2016 ನವೆಂಬರ್ 8ರ ನಂತರದ 2 ತಿಂಗಳ ಅವಧಿಯಲ್ಲಿ ಸುಮಾರು 40 ಲಕ್ಷ ರುಗಿಂತ ಹೆಚ್ಚಿನ ವಹಿವಾಟು ನಡೆಸಿರುವ ಮಾಹಿತಿ ಮೇರೆಗೆ ವೆಂಕಟೇಶ್ವರ ಬಾರ್ ಮೇಲೆ ದಾಳಿ ಮಾಡಿ ಮಾಲೀಕ ಗೋವಿಂದು ಅವರನ್ನು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಬಾರ್ ಮಾಲೀಕ ಗೋವಿಂದು ಅವರು ಆ ಅವಧಿಯಲ್ಲಿ ಹೆಚ್ಚಿನ ಜನರು 500 ಮತ್ತು 1000 ರೂಪಾಯಿಗಳ ನೋಟನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಮದ್ಯ ಖರೀದಿ ಮಾಡಿದ್ದಾರೆ.
ಅಲ್ಲದೆ ಈ ಬಗ್ಗೆ ಸಗಟು ಮದ್ಯಮಾರಾಟ ಸಂಸ್ಥೆಯಾದ ಎಂಎಸ್‍ಐಎಲ್ ಗೆ ಡಿಮ್ಯಾಂಡ್ ಡ್ರಾಫ್ಟ್ ನೀಡುವ ಮೂಲಕ ಖರೀದಿಸಿರುವುದಾಗಿ ಮಾಲೀಕ ಗೋವಿಂದು ಆದಾಯ ತೆರಿಗೆ ಅಧಿಕಾರಿಗಳಿಗೆ ಹೇಳಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ಚಾಮರಾಜನಗರದ ಆದಾಯ ತೆರಿಗೆ ಕಚೇರಿಗೆ ಸಲ್ಲಿಸುವಂತೆ ಬಾರ್ ಮಾಲೀಕನಿಗೆ ನೋಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications