Honnole Bridge: ಶಿಥಿಲಾವಸ್ಥೆಯತ್ತ ಚಾಮರಾಜನಗರ ಹೊನ್ನೊಳೆ ಸೇತುವೆ: ಕುಸಿಯುವ ಮುನ್ನ ಎಚ್ಚರ..!
ಚಾಮರಾಜನಗರ, ಮೇ 30: ಬ್ರಿಟೀಷರು ನಮ್ಮನ್ನು ಬಿಟ್ಟು ಹೋಗಿ ಏಳು ದಶಕವೇ ಕಳೆದು ಹೋಗಿದ್ದು, ಆದರೆ ಅವರು ಅವತ್ತು ನಿರ್ಮಿಸಿದ ಸೇತುವೆಗಳು ಇವತ್ತಿಗೂ ಬಳಕೆಯಾಗುತ್ತಿವೆ. ಅವು ಶಿಥಿಲಾವಸ್ಥೆಯಲ್ಲಿದ್ದರೂ ಅವುಗಳ ಬದಲಿಗೆ ನೂತನ ಸೇತುವೆಗಳನ್ನು ನಿರ್ಮಿಸುವ ಬಗ್ಗೆ ಆಡಳಿತರೂಢರು ಮನಸ್ಸು ಮಾಡದಿರುವುದು ಎಲ್ಲೋ ಒಂದು ಕಡೆ ದುರಂತಕ್ಕೆ ಆಹ್ವಾನ ನೀಡುವಂತೆ ಗೋಚರಿಸುತ್ತಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ ಕಟ್ಟಡ, ಸೇತುವೆ ಕೆಲವು ಕಡೆಗಳಲ್ಲಿ ಕುಸಿದು ನಿಷ್ಪ್ರಯೋಜಕವಾಗಿದ್ದರೆ, ಇನ್ನು ಹಲವೆಡೆಗಳಲ್ಲಿ ಅವುಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈ ಪೈಕಿ ಕಟ್ಟಡಗಳನ್ನು ಸ್ವಲ್ಪ ಮಟ್ಟಿಗೆ ದುರಸ್ತಿ ಮಾಡಿರುವುದು ಸಮಾಧಾನ ತಂದಿದೆ. ಆದರೆ ಸೇತುವೆಗಳು ಶಿಥಿಲಾವಸ್ಥೆಯಲ್ಲಿದ್ದರೂ ಅವುಗಳ ಮೇಲೆಯೇ ವಾಹನ ಸಂಚಾರ ನಡೆಸುತ್ತಿರುವುದು ಮಾತ್ರ ದುರಂತದ ಸಂಗತಿಯಾಗಿದೆ.

ಇದಕ್ಕೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮುಡಿಗುಂಡಂ ಬಳಿ ಕೊಳ್ಳೇಗಾಲ- ಮೈಸೂರು- ಚಾಮರಾಜನಗರ ನಡುವೆ ಸಂಪರ್ಕ ಕಲ್ಪಿಸುವ ಹೊನ್ನೊಳೆ ಸೇತುವೆ ಸಾಕ್ಷಿಯಾಗಿದೆ. ಈ ಸೇತುವೆ ಮೇಲೆ ಸುಮಾರು ಒಂಬತ್ತು ದಶಕಗಳಿಂದ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಇದರ ಭಾರ ಹೊರುವ ಸಾಮರ್ಥ್ಯ ಮಾತ್ರ ಕಡಿಮೆಯಾಗಿಲ್ಲ.
1934ರಲ್ಲಿ ಬ್ರಿಟೀಷರು ನಿರ್ಮಿಸಿದ ಸೇತುವೆ
ಆದರೆ ಇದು ಇನ್ನೆಷ್ಟು ದಿನ ಕಾರ್ಯ ನಿರ್ವಹಿಸುತ್ತದೆಯೋ ಗೊತ್ತಿಲ್ಲ. ಈಗಾಗಲೇ ಶಿಥಿಲಾವಸ್ಥೆಗೆ ತಲುಪಿದೆ. ಇದರ ನಿರ್ವಹಣೆಗೂ ಸಂಬಂಧಿಸಿದವರು ಮುಂದಾಗಿಲ್ಲ. ಪರಿಣಾಮ ಗಿಡಗಂಟಿಗಳನ್ನು ಸುತ್ತುವರಿದಿದೆ. ಇವುಗಳನ್ನು ಕಡಿದು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ. ಇನ್ನು ಈ ಸೇತುವೆಯನ್ನು ಕಲ್ಲುಗಾರೆಯ ಫಿಲ್ಲರ್ ಮೇಲೆ ಕಬ್ಬಿಣದಿಂದ ನಿರ್ಮಿಸಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಗಟ್ಟಿ ಮುಟ್ಟಾಗಿರುವಂತೆ ಭಾಸವಾಗುತ್ತಿದೆ.
ಹಾಗೆನೋಡಿದರೆ ಈ ಸೇತುವೆ ಸುಮಾರು ಒಂಬತ್ತು ದಶಕಗಳ ಹಿಂದೆ ಅಂದರೆ 1934ರಲ್ಲಿ ಬ್ರಿಟೀಷರು ನಿರ್ಮಿಸಿದ ಸೇತುವೆಯಾಗಿದೆ. ಅವತ್ತಿನ ಕಾಲದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಿದ ಈ ಸೇತುವೆ ಮೇಲೆ ಇಲ್ಲಿವರೆಗೆ ಅದೆಷ್ಟು ವಾಹನಗಳು ಹಾದು ಹೋಗಿವೆಯೋ ಗೊತ್ತಿಲ್ಲ. ಜತೆಗೆ ಇದು ಸಂಪರ್ಕದ ಕೊಂಡಿಯಾಗಿ ನಿಂತಿದೆ. ಜತೆಗೆ ಬ್ರಿಟೀಷರು ನಮ್ಮನ್ನಾಳಿದಕ್ಕೆ ಇದೊಂದು ಸಾಕ್ಷಿಯಾಗಿ ನಿಂತಿದೆ.

ಶತಮಾನದತ್ತ ಸಾಗುತ್ತಿರುವ ಸೇತುವೆ
ಅವತ್ತಿನ ಸೇತುವೆ, ಕಟ್ಟಡಗಳೆಲ್ಲವೂ ಒಂದು ರೀತಿಯಲ್ಲಿ ಗತಕಾಲದ ಪಳೆಯುಳಿಕೆಗಳು ಎಂದರೆ ತಪ್ಪಾಗಲಾರದು. ಇವುಗಳು ಶಿಥಿಲಾಸ್ಥೆಗೆ ತಲುಪದಂತೆ ನೋಡಿಕೊಳ್ಳುವುದು ನಮ್ಮ ಜವಬ್ದಾರಿಯಾಗಿದೆ. ಜತೆಗೆ ಅವುಗಳನ್ನು ಸ್ಮಾರಕವಾಗಿ ಮುಂದಿನ ತಲೆಮಾರಿಗೂ ಉಳಿಸಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಆದರೆ ಅದ್ಯಾವುದನ್ನು ಮಾಡದೆ ಹಳೆಯ ಸೇತುವೆಯನ್ನೇ ನಂಬಿರುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಸೇತುವೆ ಇರುವಾಗಲೇ ಹೊಸ ಆಧುನಿಕ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮನಸ್ಸು ಮಾಡಬೇಕಿದೆ.
ಸ್ವಾತಂತ್ಯ ಪೂರ್ವದಲ್ಲಿ ಬ್ರಿಟೀಷರು ನಿರ್ಮಿಸಿರುವ ಹೊನ್ನೊಳೆ ಸೇತುವೆ ಶತಮಾನದತ್ತ ಸಾಗುತ್ತಿದೆ. ಹಿಂದೆಗೆ ಹೋಲಿಸಿದರೆ ಈ ಸೇತುವೆ ಮೇಲೆ ಸಾಗುವ ವಾಹನ ಸಂಖ್ಯೆಗಳು ದುಪ್ಪಟ್ಟಾಗಿವೆ. ಪವಾಡ ಪುರುಷ ಮಲೆ ಮಹದೇಶ್ವರ ಬೆಟ್ಟಕ್ಕೆ ಇದೇ ಮಾರ್ಗವಾಗಿ ತೆರಳಬೇಕಾಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ಅಧಿಕ ಭಾರವನ್ನು ತಡೆದುಕೊಳ್ಳುವುದು ಅನಿವಾರ್ಯವಾಗಿದೆ.
ಸೇತುವೆ ಕುಸಿಯುವ ಮುನ್ನವೇ ಎಚ್ಚರವಿರಲಿ
ಒಂಬತ್ತು ದಶಕಗಳ ಹಿಂದೆ ಅವತ್ತಿನ ಪರಿಸ್ಥಿತಿಗೆ ತಕ್ಕಂತೆ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೀಗ ಯಾವುದೂ ಅವತ್ತಿನಂತಿಲ್ಲ. ಹೀಗಾಗಿ ಈ ಸೇತುವೆ ಸುಸ್ಥಿತಿಯಲ್ಲಿರುವಾಗಲೇ ನೂತನ ಸೇತುವೆ ನಿರ್ಮಾಣ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಸಂಕಷ್ಟ ತಪ್ಪಿದಲ್ಲ. ಇದು ಲೋಕೋಪಯೋಗಿ ಇಲಾಖೆಗೆ ಅಧಿಕಾರಿಗಳಿಗೆ ಗೊತ್ತಿಲ್ಲದ ವಿಚಾರವಲ್ಲ. ಇನ್ನು ಇದರ ಮೇಲೆ ಹಾದು ಹೋಗುವ ಜನಪ್ರತಿನಿಧಿಗಳ ಈ ಬಗ್ಗೆ ಧ್ವನಿ ಎತ್ತರದಿರುವುದು ನೋವಿನ ಸಂಗತಿಯಾಗಿದೆ.

ಮೇಲ್ನೋಟಕ್ಕೆ ಸೇತುವೆ ಸುಸ್ಥಿತಿಯಲ್ಲಿದೆ ಎಂಬಂತೆ ಕಂಡು ಬಂದರೂ ಸೇತುವೆಯ ಕೆಳಭಾಗದಲ್ಲಿ ತಡೆಗೋಡೆಗಳು ಬಿರುಕು ಬಿಟ್ಟಿವೆ. ಸೇತುವೆಯನ್ನು ಹೊತ್ತು ನಿಂತ ಫಿಲ್ಲರ್ ಗಳನ್ನು ಗಿಡಗಂಟಿಗಳು ಸುತ್ತುವರೆದಿವೆ. ಸೇತುವೆಗೆ ಬಳಸಲಾದ ಕಬ್ಬಿಣಗಳು ತುಕ್ಕು ಹಿಡಿದಿವೆ. ಹೀಗಾಗಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಸೇತುವೆಗೆ ಹಾನಿಯಾಗುವ ಸಾಧ್ಯತೆ ಜಾಸ್ತಿಯಿದೆ. ಆದ್ದರಿಂದ ಸಂಬಂಧಿಸಿದವರು ಇದರತ್ತ ಗಮನಹರಿಸುವುದು ಅಗತ್ಯವಾಗಿದೆ.
2018ರಲ್ಲಿ ಕುಸಿದು ಬಿದ್ದ ವೆಸ್ಲಿ ಸೇತುವೆ
ಈ ಹಿಂದೆ 2018ರಲ್ಲಿ ಕೊಡಗಿನಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕೆಆರ್ ಎಸ್ ಜಲಾಶಯಕ್ಕೆ ಲಕ್ಷಾಂತರ ಕ್ಯುಸೆಕ್ ನೀರು ಹರಿದು ಬಂದ ಸಂದರ್ಭ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಡಲಾಗಿತ್ತು. ಹೀಗಾಗಿ ಕಾವೇರಿ ಧುಮ್ಮಿಕ್ಕಿ ಹರಿದ ಪರಿಣಾಮ ನೀರಿನ ರಭಸಕ್ಕೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಬಳಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ವೆಸ್ಲೀ ಸೇತುವೆ ಕೊಚ್ಚಿ ಹೋಗಿತ್ತು. ಈ ವೆಸ್ಲಿ ಸೇತುವೆಯನ್ನು ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪ ಭರಚುಕ್ಕಿಗೆ ತೆರಳುವ ಮಾರ್ಗ ಮಧ್ಯೆ ಸುಮಾರು ಎರಡು ಶತಮಾನದ ಹಿಂದೆ ಕಲ್ಲುಕಂಬದಿಂದ ನಿರ್ಮಿಸಲಾಗಿತ್ತು.
ಈ ಸೇತುವೆ ಎಷ್ಟು ಪ್ರಸಿದ್ಧಿ ಹೊಂದಿತ್ತು ಎಂದರೆ ಸಾರ್ವಜನಿಕರು, ಪ್ರವಾಸಿಗರು ಇದರ ಮೇಲೆ ನಡೆದುಕೊಂಡು ಹೋಗಿ ಖುಷಿಪಡುತ್ತಿದ್ದರು. ಹಲವು ಸಿನಿಮಾಗಳಲ್ಲಿ ಇದರ ಬಳಕೆಯಾಗಿತ್ತು. ಅಂತಹ ಸೇತುವೆಯನ್ನು ದುರಸ್ಥಿ ಮಾಡಿ ಸುಸ್ಥಿತಿಯಲ್ಲಿಟ್ಟುಕೊಳ್ಳದ ಕಾರಣ ಅದು ಶಿಥಿಲಾವಸ್ಥೆಯಲ್ಲಿತ್ತು. ಹೀಗಿರುವಾಗಲೇ ಕೆಆರ್ ಎಸ್ ನಿಂದ ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಹೊರಬಿಟ್ಟ ಪರಿಣಾಮ ನೀರಿನ ರಭಸಕ್ಕೆ ಕುಸಿದು ಹೋಗಿತ್ತು. ಹೀಗೆಯೇ ಹೊನ್ನೊಳೆ ಸೇತುವೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಇದು ಶಿಥಿಲಾವಸ್ಥೆಗೆ ತಲುಪಿ ಕುಸಿದು ಬಿದ್ದರೂ ಅಚ್ಚರಿಯಿಲ್ಲ. ಅದಕ್ಕೂ ಮುನ್ನ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications