Hogenakkal Falls: ಕೇವಲ ಎರಡೇ ದಿನದಲ್ಲಿ ಹೊಗೆನಕಲ್‌ನಲ್ಲಿ ನೀರಿನ ಒಳಹರಿವು ಇಷ್ಟೊಂದು ಕುಸಿತ
ಚಾಮರಾಜನಗರ, ಮಾರ್ಚ್, 15: ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ಕಾವೇರಿಯು ಜಲವೈಯ್ಯಾರ ಸೃಷ್ಟಿಸುವ ಹೊಗೆನಕಲ್ ಜಲಪಾತದಲ್ಲಿ ದಿಢೀರ್ ನೀರಿನ ಮಟ್ಟ ಹೆಚ್ಚಾಗಿ ಈಗ ಮತ್ತೇ ಇಳಿಕೆ ಕಂಡಿದೆ.
ಇನ್ನೂ ಇದೀಗ ರಾಜ್ಯದ ಕೆಲವೆಡೆ ಮಳೆ ಆರಂಭವಾಗಿದ್ದು, ಕಾವೇರಿ ಜಲನಯನ ಪ್ರದೇಶದಲ್ಲೂ ಕೂಡ ಮಳೆಯಾಗುವ ಮುನ್ಸೂಚನೆ ಇದೆ. ಇದರಿಂದ ಮತ್ತೆ ಹೊಗೆನಕಲ್ ಕಾವೇರಿ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ.

ಇನ್ನು ತಮಿಳುನಾಡಿನ ಬಿಳಿಗುಂಡ್ಲು ಸಿಬ್ಬಂದಿ ಮಾಹಿತಿ ಪ್ರಕಾರ, ಬುಧವಾರ 4 ಸಾವಿರ ಘನ ಅಡಿಗೆ ಏರಿತ್ತು. ಗುರುವಾರ 2,800 ಘನಅಡಿ ಇದ್ದ ನೀರಿನ ಮಟ್ಟ ಈಗ 1,200ಕ್ಕೆ ಇಳಿದಿದೆ. ಹೊಗೆನಕಲ್‌ನಲ್ಲಿ ದಿಢೀರ್ ನೀರಿನ ಮಟ್ಟ ಏರಿಕೆ ಕಂಡು ಸ್ಥಳೀಯರು, ಪ್ರವಾಸಿಗರೇ ಆಶ್ಚರ್ಯಕ್ಕಳಗಾಗಿದ್ದಾರೆ. ಅಲ್ಲದೆ ಜೊತೆಗೆ ಈ ವೇಳೆ ಜಲವೈಯ್ಯಾರವನ್ನು ಕಣ್ತುಂಬಿಕೊಂಡಿದ್ದಾರೆ.
ಇಂದು ಕೂಡ ಕೊಡಗು ಮತ್ತು ದಕ್ಷಿಣ ಕನ್ನಡದ ಜಿಲ್ಲೆಯ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ಮುನ್ಸೂಚನೆ ಇದೆ.
ಮಂಜಿನ ನಗರಿ ಮಡಿಕೇರಿ, ಭಾಗಮಂಡಲ, ವಿರಾಜಪೇಟೆ ಮತ್ತು ದಕ್ಷಿಣ ಕನ್ನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರ್ಚ್ 20ರ ನಂತರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನು ಹೊರತುಪಡಿಸಿ ಇನ್ನೂ ರಾಜ್ಯದ ಬೇರೆ ಬೇರೆ ಕಡೆ ಒಣಹವೆ ಮುಂದುವರೆಯಲಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಷ್ಣಾಂಶ ಹೆಚ್ಚಿರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ ಎನ್ನುವ ಮುನ್ಸೂಚನೆ ಇದೆ.
ನೀರಿನ ಘಟಕಗಳ ನಿಷ್ಕ್ರಿಯ: ಬೆಂಗಳೂರಿನಲ್ಲಿ ಎದುರಾಗಿರುವ ನೀರಿನ ಬಿಕ್ಕಟ್ಟಿನ ಮಧ್ಯೆ, ಬೇಸಿಗೆಯ ನೀರಿನ ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳು ನಾನಾ ಕ್ರಮಗಳನ್ನು ಯೋಜಿಸುತ್ತಿದ್ದಾರೆ. ಆದರೂ ಪಾಲಿಕೆ ಸ್ಥಾಪಿಸಿದ ಹಲವಾರು ಕುಡಿಯುವ ನೀರಿನ ಘಟಕಗಳು ನಿಷ್ಕ್ರಿಯಗೊಂಡಿವೆ. ನೀರಿನ ಅಲಭ್ಯತೆಯಿಂದಾಗಿ ಖಾಸಗಿ ಆರ್‌ಒ ಕುಡಿಯುವ ನೀರಿನ ಘಟಕಗಳು ಮುಚ್ಚಲ್ಪಟ್ಟಿವೆ. ಈ ನೀರಿನ ಘಟಕಗಳಲ್ಲಿ ಹೆಚ್ಚಿನವು ಬೋರ್‌ವೆಲ್‌ಗಳಿಂದ ನೀರನ್ನು ಪಡೆಯುತ್ತವೆ. ಇದೀಗ ಬೋರ್‌ವೆಲ್ ಬತ್ತಿ ಹೋಗಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ಕುಡಿಯುವ ನೀರನ್ನು ಒದಗಿಸಲು ಬೆಂಗಳೂರಿನಲ್ಲಿ 600ಕ್ಕೂ ಹೆಚ್ಚು ನೀರಿನ ಘಟಕಗಳನ್ನು ಸ್ಥಾಪಿಸಿದೆ. ಇಲ್ಲಿ ನಿವಾಸಿಗಳು ಕೇವಲ ₹5ಕ್ಕೆ 20 ಲೀಟರ್ ನೀರನ್ನು ಪಡೆಯಬಹುದು.
ಪಟ್ಟಣಗೆರೆ ನಿವಾಸಿ ಮನೋಜ್‌ಕುಮಾರ್ ಮಾತನಾಡಿ, ಕಳೆದ ಕೆಲವು ದಿನಗಳಿಂದ ನಮ್ಮ ಭಾಗದಲ್ಲಿ ಆರ್‌ಒ ಪ್ಲಾಂಟ್ ಕೆಲಸ ಮಾಡುತ್ತಿಲ್ಲ. ಪಾಲಿಕೆ ಸ್ಥಾಪಿಸಿರುವ ಆರ್‌ಒ ವಾಟರ್ ಪ್ಲಾಂಟ್‌ಗಳು ಖಾಲಿ ಬಿದ್ದಿರುವುದನ್ನು ನೋಡಿದರೆ ಬೇಸರ ಆಗುತ್ತದೆ. ನಮಗೆ ಶುದ್ಧ ಕುಡಿಯುವ ನೀರಿನ ಪ್ರವೇಶದ ಅಗತ್ಯವಿದೆ. ಕಾರ್ಯನಿರ್ವಹಿಸದ ನೀರಿನ ಘಟಕಗಳು ನಮ್ಮ ಸಂಕಟಗಳನ್ನು ಹೆಚ್ಚಿಸುತ್ತವೆ ಎಂದಿದ್ದಾರೆ.
"ಆರ್.ಆರ್.ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಅಭಾವ ಉಂಟಾಗಿ ನೀರಿನ ಪಡಿತರ ವ್ಯವಸ್ಥೆ ಜಾರಿಗೆ ಬಂದಿದೆ. ಒಬ್ಬ ವ್ಯಕ್ತಿಗೆ ಮಾತ್ರ ಒಂದು ಕ್ಯಾನ್ ಎಂಬ ಸಂದೇಶದೊಂದಿಗೆ ಪೋಸ್ಟರ್ ಅನ್ನು ಹಾಕಲಾಗಿದೆ. ಹಿಂದೆ ಅವರು ಮೂರಕ್ಕಿಂತ ಹೆಚ್ಚು ನೀರಿನ ಕ್ಯಾನ್‌ಗಳನ್ನು ಒದಗಿಸುತ್ತಿದ್ದರು. ಆದರೆ, ಕಳೆದ ವಾರದಿಂದ ಒಬ್ಬ ವ್ಯಕ್ತಿಗೆ ಕೇವಲ ಒಂದು ಕ್ಯಾನ್‌ಗೆ ಸೀಮಿತಗೊಳಿಸಿದ್ದಾರೆ. ನೀರಿನ ಸಮಸ್ಯೆಯಿಂದಾಗಿ ನಮ್ಮ ಮನೆಗಳಿಗೆ ನೆಂಟರನ್ನು ಮನೆಗೆ ಕರೆಯುವುದು ಕಷ್ಟಕರವಾಗಿದೆ" ಎಂದು ಆರ್.ಆರ್.ನಗರ ನಿವಾಸಿ ವಿಜಯಪ್ರಸಾದ್ ಹೇಳಿದರು.












Click it and Unblock the Notifications