Karnataka Rain: ಭಾರಿ ಮಳೆಗೆ ಹೊಳೆಯಂತಾದ ಕೃಷಿ ಜಮೀನುಗಳು

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿ‌ನ ಆಲತ್ತೂರು, ದೇಶಿಪುರ ಸುತ್ತಮುತ್ತ ಧಾರಾಕಾರ ಮಳೆ‌ ಬಿದ್ದಿದ್ದು ಚಾಮರಾಜನಗರದಲ್ಲಿ ಕೂಡ ಸಾಧಾರಣ ಮಳೆಯಾಗಿದೆ.

ಆಲತ್ತೂರು, ಬರಗಿ, ಹೊಂಗಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ‌ ಗಂಟೆಗಟ್ಟಲೇ ಸುರಿದ ಮಳೆಗೆ ಸಣ್ಣ ಪುಟ್ಟ ಕೆರೆ, ಕಟ್ಟೆಗಳಿಗೆ ನೀರು ಬಂದಿದೆ. ಜಮೀನಿ‌ನ ಓಣಿಗಳಲ್ಲಿ ಮಳೆಯ ನೀರು ಕಾಲುವೆಯಂತೆ ಹರಿದಿದೆ.

Heavy Rain in Chamarajanagara Causes Waterlogging in Agricultural Fields

ಹೊಂಗಳ್ಳಿ ಬಳಿಯ ಮೊಗೆ ಕೆರೆ, ಚನ್ನಪ್ಪನ‌ಕಟ್ಟೆಯಲ್ಲಿ ಮಳೆ ನೀರು ಬಂದು ಕೋಡಿ ಬಿದ್ದಿದೆ. ಬರಗಿ ಕೆರೆಗೆ ನೀರಿನ ಹರಿವು ಹೆಚ್ಚಾಗಿದೆ.

ಕೃಷಿ ಜಮೀನಿಗೆ ನುಗ್ಗಿದ ನೀರು

ಮಳೆ ರಭಸಕ್ಕೆ ಈರುಳ್ಳಿ, ಅರಿಶಿನ, ಹತ್ತಿ ಪೈರು ಕೊಚ್ಚಿ ಹೋಗಿದ್ದು ರೈತನ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ಮಳೆ ಬಾರದೆ ಸಂಕಷ್ಟ ಅನುಭವಿಸಿದ್ದ ರೈತ, ಈಗ ಮಳೆ ಬಂತು ಖುಷಿಪಡಬೇಕೋ ಅಥವಾ ಬೆಳೆ ಹಾಳಾಯ್ತಲ್ಲ ಎಂದು ಮರುಗಬೇಕೋ ತಿಳಿಯದಂತಾಗಿದ್ದಾನೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಸೋಮವಾರದಂದು ಕೂಡ ಚಾಮರಾಜನಗರಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕೂಡ ಮಳೆಯ ಅಬ್ಬರ ಜೋರಾಗಿದೆ. ಹುಣಸೂರು ತಾಲೂಕಿನ ಕೊತ್ತೆಗಾಲದಲ್ಲಿ ಭಾರಿ ಮಳೆಯಿಂದಾಗಿ 300 ಎಕರೆಯಲ್ಲಿ ಬೆಳೆದಿದ್ದ ತಂಬಾಕು ಜಲಾವೃತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+