Heart Attack: ಕೆಂಪನಪುರದಲ್ಲಿ ಪೊಲೀಸರ ದಾಳಿ ಭೀತಿಯಲ್ಲಿ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವು
ಚಾಮರಾಜನಗರ, ಜನವರಿ, 16: ಗಡಿಜಿಲ್ಲೆ ಚಾಮರಾಜನಗರದಲ್ಲಿ ಸಂಕ್ರಾತಿಯಂದು ಸಾವಿನ ಸರಮಾಲೆಯಾಗಿದ್ದು, ವ್ತಕ್ತಿಯೊಬ್ಬರು ಪೊಲೀಸ್ ದಾಳಿ ಭೀತಿಯಲ್ಲಿ ಓಡಿದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ಚಾಮರಾಜನಗರ ತಾಲೂಕಿನ ಕೆಂಪನಪುರದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಕೆಂಪನಪುರ ಗ್ರಾಮದ ಬಸವಣ್ಣ (62) ಮೃತ ದುರ್ದೈವಿ. ಸಂಕ್ರಾತಿ ಹಬ್ಬದ ಹಿನ್ನೆಲೆ ಕೆರೆ ಏರಿ ಸಮೀಪ ಪಾನಗೋಷ್ಟಿ ಮಾಡುತ್ತಿದ್ದ ವೇಳೆ ಪೊಲೀಸರನ್ನು ಕಂಡು ಹೆದರಿ ಓಡಿದ್ದಾರೆ. ಹೆದರಿ ದಿಕ್ಕಾಪಾಲಾಗಿ ಓಡುವಾಗ ಬಸವರಾಜು ಅವರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಂತೇಮರಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಾರ್ಟಿ ಮಾಡುವವರನ್ನು ಜೂಜಾಟ ಆಡುತ್ತಿದ್ದಾರೆಂದು ಪೊಲೀಸರು ಓಡಸಿಕೊಂಡು ಹೋಗಿದ್ದರಿಂದಲೇ ಹೃದಯಾಘಾತದಿಂದ ಬಸವರಾಜು ನಿಧನರಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಹಬ್ಬದ ದಿನ 6 ಮಂದಿ ಸಾವು: ಸಂಕ್ರಾತಿ ಹಬ್ಬದ ಸಡಗರದ ನಡುವೆ ಜವರಾಯ ಅಟ್ಟಹಾಸ ಮೆರೆದಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದ್ದು, ಒಂದೇ ಕುಟುಂಬದ ನಾಲ್ವರು ಅಸುನೀಗಿದ್ದಾರೆ. ಕೊಳ್ಳೇಗಾಲ ಪಾಳ್ಯ ಗ್ರಾಮದ ಸಂತೋಷ(32), ಸೌಮ್ಯ(27) ಹಾಗೂ ನಿತ್ಯಸಾಕ್ಷಿ(4) ಮೃತಪಟ್ಟ ದುರ್ದೈವಿಗಳಾಗಿದ್ದು, ಅಭಿ(9) ಎಂಬ ಮತ್ತೊಂದು ಮಗು ಆಸ್ಪತ್ರೆಯಲ್ಲಿ ಅಸುನೀಗಿದೆ.
ಹಬ್ಬಕ್ಕೆಂದು ಬಟ್ಟೆ ತರಲು ಕೊಳ್ಳೇಗಾಲಕ್ಕೆ ಸಂತೋಷ್ ಕುಟುಂಬ ಬೈಕ್‌ನಲ್ಲಿ ತೆರಳುತ್ತಿದ್ದಾಗ ಜಿನಕನಹಳ್ಳಿ ಸಮೀಪ ಭತ್ತ ಕತ್ತರಿಸುವ ಯಂತ್ರ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ನಿಂದ ನಾಲ್ವರು ಕೆಳಕ್ಕೆ ಬಿದ್ದಿದ್ದು, ಸ್ಥಳದಲ್ಲೇ ಮೂವರು ಅಸುನೀಗಿದ್ದು, ಆಸ್ಪತ್ರೆಯಲ್ಲಿ ಮತ್ತೊರ್ವ ಮಗ ನಿಧನರಾಗಿದ್ದಾರೆ.
ಸದ್ಯ ಈ ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬೈಕ್ ಅಪಘಾತದಲ್ಲಿ ಇಬ್ಬರ ನಿಧನ: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಯುವಕನೋರ್ವ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ದೊಡ್ಡಲಾತ್ತೂರು ಬಳಿ ಸೋಮವಾರ (ಜನರಿ 15) ಸಂಜೆ ನಡೆದಿದೆ.
ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮದ ಶರತ್ (22) ಕೆಂಪನಟ್ಟಿ ಗ್ರಾಮದ ಮದನ್ ಕುಮಾರ್ ಮೃತ ದುರ್ದೈವಿಗಳು. ಪುದುರಾಮಪುರ ಗ್ರಾಮದ ಕುಮಾರ್ ಎಂಬಾತ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಈ ಪ್ರಕರಣ ರಾಮಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications