ಗುಂಡ್ಲುಪೇಟೆ: ಪೇಸ್‌ಬುಕ್‌ ಪೋಸ್ಟರ್‌ನಲ್ಲಿ ಯತೀಂದ್ರ ಸಿದ್ದರಾಮಯ್ಯರನ್ನು ಟೀಕಿಸಿದ ಯುವಕ-ಮುಂದೇನಾಯ್ತು?

ಚಾಮರಾಜನಗರ, ನವೆಂಬರ್, 10: ಕಳಪೆ ಕಾಮಗಾರಿ ಎಂದು ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಇದರಿಂದ ಕೋಪಗೊಂಡ ಶಾಸಕ‌ ಕರೆಮಾಡಿ ಆ ಯುವಕನಿಗೆ ತರಾಟೆ ತೆಗೆದುಕೊಂಡ ಆಡಿಯೋ ಇದೀಗ ಭಾರೀ ವೈರಲ್ ಆಗಿದೆ. ಹಾಗಾದರೆ ಆ ಶಾಸಕ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ಲ್ಯಾಂಡ್ ಆರ್ಮಿ ಅವರಿಂದ ಕಳಪೆ ಕಾಮಗಾರಿ ನಡೆಸುತ್ತಿದ್ದು, ಯತೀಂದ್ರ ಸಿದ್ದರಾಮಯ್ಯ ಪರ ಗುತ್ತಿಗೆದಾರನಾದರೇ ಮೂಗುದಾರ ಇಲ್ಲವೇ.? ದುಡ್ಡು ಹೊಡೆಯುವ ಹುನ್ನಾರ ಎಂದು ಅಂಕಹಳ್ಳಿ ಗ್ರಾಮದ ಮಹೇಂದ್ರ ಎಂಬ ಯುವಕ ಪೋಸ್ಟ್ ಮಾಡಿದ್ದರು.

Gundlupet Young man who criticized Yathindra Siddaramaiah in Facebook poster viral

ಫೇಸ್ ಬುಕ್‌ನಲ್ಲಿ ಯುವಕ ಹಾಕಿದ್ದ ಈ ಪೋಸ್ಟ್ ನೋಡಿದ ಶಾಸಕ ಗಣೇಶ್ ಪ್ರಸಾದ್, ಯತೀಂದ್ರ ಸಿದ್ದರಾಮಯ್ಯ ಪರ ಗುತ್ತಿಗೆದಾರ ಎಂದು ಪೋಸ್ಟ್ ಮಾಡಿರುವುದಕ್ಕೆ ಆಕ್ಷೇಪ ಹೊರಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ.

"ನೀನು ನನ್ನ ಬಗ್ಗೆ ಪೋಸ್ಟ್ ಹಾಕ್ಕೋ, ಕಳಪೆ ಕಾಮಗಾರಿ ಅಂಥಾ ಹಾಕ್ಕೋ, ಅಧಿಕಾರಿಗಳು ರಿಪೋರ್ಟ್ ಹಾಕುತ್ತಾರೆ. ಆದರೆ, ಯತೀಂದ್ರ ಹೆಸರನ್ನು ಯಾಕೆ ಹಾಕಿದ್ದೀಯಾ.? ನಿಮಗೆ ಅಭಿವೃದ್ಧಿ ಕಾರ್ಯ ಕಂಡು ಸಹಿಸುವುದಕ್ಕೆ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಶಾಸಕ ಮತ್ತು ಯುವಕನ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.

ಅರೆಬೆತ್ತಲೆ ಪ್ರತಿಭಟನೆ: ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ಹಾಗೂ ರಾಜ ಭವನಗಳನ್ನು ಕೇಂದ್ರ ಬಿ.ಜೆ.ಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಡಿಎಸ್ಎಸ್ ಜಿಲ್ಲಾ ಸಮಿತಿ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ಲೋಕಾಯುಕ್ತ ಪೊಲೀಸರು, ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಮೇಲೆ ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆ ಅವರು ರಾಜೀನಾಮೆ ಕೊಡಬೇಕೆಂದು ಬಿ.ಜೆ.ಪಿ. ನಾಯಕರು ಹೋರಾಟ ಪ್ರಾರಂಭಿಸಿದ್ದಾರೆ.

ಈ ಹೋರಾಟದ ತಾರ್ಕಿಕ ಅಂತ್ಯ ಯಾರ್ಯಾರ ಮನೆ ಬಾಗಿಲು ತಟ್ಟಬಹುದೆಂಬ ಕನಿಷ್ಠ ಸಾಮಾನ್ಯ ಜ್ಞಾನವಾದರೂ ಈ ನಾಯಕರಿಗಿದೆಯೇ? ಕೇಂದ್ರ ಬಿಜೆಪಿ ಸರ್ಕಾರ ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಪಡಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವ ಸರ್ಕಾರವನ್ನು ದುರ್ಬಲಗೊಳಿಸಲು ಮುಡಾಪ್ರಕರಣದಲ್ಲಿ ಚುನಾಯಿತ ಸರ್ಕಾರ ಪತನಗೊಳಿಸಲು ಬಿಜೆಪಿ, ಜೆಡಿಎಸ್ ನಡೆಸುತ್ತಿರುವ ಷಡ್ಯಂತ್ರ ಎಂದರು.

ಎಫ್.ಐ.ಆರ್. ಆಗಿರುವ ಕಾರಣಕ್ಕೆ ರಾಜೀನಾಮೆ ನೀಡಬೇಕೆಂದು ಮಾನದಂಡವನ್ನು ನಿಗದಿಪಡಿಸಿದರೆ ಸಿದ್ದರಾಮಯ್ಯ ನವರು ಮಾತ್ರವಲ್ಲ, ಕೇಂದ್ರ ಸರ್ಕಾರದ ಸಚಿವರ ಸಂಪುಟದಲ್ಲಿ ಸಚಿವರು ಕನಿಷ್ಠ 23-24 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಉನ್ನತ ಅಧಿಕಾರದಲ್ಲಿದ್ದು, ರಾಜಧರ್ಮವನ್ನು ಮರೆತು ಜಾತಿ ಜಾತಿಧರ್ಮದ ಹೆಸರಲ್ಲಿ ಜನಾಂಗೀಯ ಹತ್ಯೆಗಳನ್ನು ತಡೆಯಲು ವಿಫಲರಾಗಿದ್ದಾರೆ ಎಂದು ದೂರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+