ಗುಂಡ್ಲುಪೇಟೆ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಳಚಿದ ಚಕ್ರ: ರೊಚ್ಚಿಗೆದ್ದ ಪ್ರಯಾಣಿಕರು ಮಾಡಿದ್ದೇನು?
ಚಾಮರಾಜನಗರ, ಆಗಸ್ಟ್, 29: ಚಲಿಸುತ್ತಿದ್ದ ಸಾರಿಗೆ (KSRTC) ಸಂಸ್ಥೆ ಬಸ್‌ನ ಮುಂಬದಿ ಚಕ್ರ ಕಳಚಿದ್ದು, ಈ ವೇಳೆ ಅದೃಷ್ಟವಶಾತ್ ಪ್ರಯಾಣಿಕರು ಪಾರಾದ ಘಟನೆ ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಸಮೀಪ ಇಂದು (ಆಗಸ್ಟ್ 29) ನಡೆದಿದೆ. ಇನ್ನು ಬಳಿಕ ಪ್ರಯಾಣಿಕರು ಸಾರಿಗೆ ಸಂಸ್ಥೆ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ.
ಬಾಚಹಳ್ಳಿ-ಗುಂಡ್ಲುಪೇಟೆ ಮಾರ್ಗದಲ್ಲಿ ಸಂಚರಿಸುವ ಬಸ್ ಇದಾಗಿದ್ದು, ಕೋಡಹಳ್ಳಿ ಸಮೀಪ ಬಸ್‌ನ ಮುಂಬದಿ ಚಕ್ರದ ರಾಡ್ ಕಟ್ಟಾಗಿ ಅವಾಂತರ ಸೃಷ್ಟಿಸಿದೆ. ಈ ವೇಳೆ ಬಸ್‌ನಲ್ಲಿ ವಿದ್ಯಾರ್ಥಿಗಳು, ಪ್ರಯಾಣಿಕರು ಸೇರಿ 55ಕ್ಕೂ ಅಧಿಕ ಮಂದಿ ಇದ್ದರು ಎಂದು ತಿಳಿದುಬಂದಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್‌ಗಳನ್ನು ನಿರ್ವಹಣೆ ಮಾಡುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಹಳೇ ಡಕೋಟಾ ಬಸ್‌ಗಳನ್ನು ಗ್ರಾಮಾಂತರ ಪ್ರದೇಶಕ್ಕೆ ನಿಯೋಜನೆ ಮಾಡಿದ್ದಾರೆ ಎಂದು ಪ್ರಯಾಣಿಕರು ಸ್ಥಳೀಯರು ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದರು.
ನಜ್ಜುಗುಜ್ಜಾದ ವಿದ್ಯಾರ್ಥಿ ಕಾಲು: ನಜ್ಜುಗುಜ್ಜಾದ ಖಾಸಗಿ ಶಾಲಾ ವಾಹನದ ಚಕ್ರ ಹರಿದು ವಿದ್ಯಾರ್ಥಿಯೊರ್ವನ ಬಲಗಾಲು ನಜ್ಜುಗುಜ್ಜಾಗಿರುವ ಘಟನೆ ಗೋಪಾಲಪುರ ಗ್ರಾಮದಲ್ಲಿ ಶನಿವಾರ (ಆಗಸ್ಟ್ 17) ನಡೆದಿದೆ. ಗೋಪಾಲಪುರ ಗ್ರಾಮದ ಸಿದ್ದಪ್ಪ ಎಂಬುವವರ ಮಗ ಕನ್ನೇಗಾಲ ಗ್ರಾಮದಲ್ಲಿರುವ ವಿದ್ಯಾ ಅಮೃತ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಹೃತ್ವಿಕ್(8) ಎಂಬಾತನ ಕಾಲಿಗೆ ತೀವ್ರ ಪೆಟ್ಟಾಗಿದೆ.
ಗೋಪಾಲಪುರ ಗ್ರಾಮದಲ್ಲಿ ಶನಿವಾರ ಬೆಳಗಿನ ತರಗತಿಗೆ ತೆರಳಲು ತನ್ನ ಶಾಲಾ ವಾಹನಕ್ಕಾಗಿ ಕಾಯುತ್ತಾ ಸೇತುವೆ ಮೇಲೆ ಕುಳಿತಿದ್ದ. ಈ ವೇಳೆ ಸೇಂಟ್ ಜಾನ್ ಖಾಸಗಿ ಶಾಲಾ ವಾಹನದ ಚಾಲಕ ಗಾಡಿಯನ್ನು ರಿವರ್ಸ್ ತೆಗೆಯುತಿದ್ದ. ಈ ವೇಳೆ ರಸ್ತೆ ಕಿರಿದಾದ ಕಾರಣ ವಾಹನದ ಹಿಂಬದಿ ಚಕ್ರವು ವಿದ್ಯಾರ್ಥಿಯ ಬಲಗಾಲಿನ ಮೇಲೆ ಹರಿದಿದೆ.
ಘಟನೆಯಲ್ಲಿ ಬಾಲಕನ ಕಾಲು ನಜ್ಜುಗುಜ್ಜಾಗಿದ್ದು, ಕೂಡಲೇ ಸ್ಥಳೀಯರು ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ರವಾನಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಸಬ್ ಇನ್ಸ್‌ಪೆಕ್ಟರ್ ಸಾಹೇಬಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲಾ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications