ಚಾಮರಾಜನಗರ: ಹಾಲಿನ ದರ ಏಕಾಏಕಿ ಇಳಿಸಿದ ಒಕ್ಕೂಟದ ವಿರುದ್ಧ ರೈತರ ಪ್ರತಿಭಟನೆ
ಚಾಮರಾಜನಗರ, ನವೆಂಬರ್ 12: ಚಾಮರಾಜನಗರ ಜಿಲ್ಲೆಯ ಕುದೇರು ಹಾಲು ಉತ್ಪಾದಕರ ಸಹಕಾರ ಸಂಘವು ರೈತರಿಂದ ಪಡೆಯುವ ಹಾಲಿಗೆ ಒಂದು ರೂಪಾಯಿಯನ್ನು ಕಡಿಮೆ ಮಾಡಿರುವುದನ್ನ ಖಂಡಿಸಿ ತಾಲೂಕು ಕಚೇರಿ ಮುಂಭಾಗದಲ್ಲೊ ನೂರಾರು ರೈತರು ಜಮಯಿಸಿ ಪ್ರತಿಭಟನೆ ನಡೆಸಿದರು. ಏಕಾಏಕಿ ಕಡಿಮೆ ಮಾಡಿರುವ ಹಾಲಿನ ದರವನ್ನು ಕೂಡಲೇ ಏರಿಸುವಂತೆ ರೈತರು ಆಗ್ರಹಿಸಿದ್ದಾರರ.
ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ ಚಾಮುಲ್ ಏಕಾಏಕಿ ಹಾಲಿನ ದರ ಏರಿಕೆ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇಲ್ಲಿನ ಅಧಿಕಾರಿ ವರ್ಗ ಹಾಗೂ ನಿರ್ದೇಶಕರ ವೈಫಲ್ಯದಿಂದ ರೈತರ ಹಾಲಿನ ದರ ಕಡಿಮೆ ಮಾಡಿರುವುದು ಎಷ್ಟು ಸರಿ. ಬೇರೆ ಜಿಲ್ಲೆಯಲ್ಲಿ ಒಂದು ದರ ನಮ್ಮ ಜಿಲ್ಲೆಯಲ್ಲಿ ಒಂದು ದರ ಒಕ್ಕೂಟದ ವತಿಯಿಂದ ತಾರತಮ್ಯದ ನೀತಿ ಎಂದು ಕಟುವಾಗಿ ಟೀಕಿಸಿದ್ದಾರೆ.

ಹಾಲು ಒಕ್ಕೂಟದಲ್ಲಿ ಉತ್ಪಾದನೆ ಮಾಡಿದ ಉತ್ಪಾನ್ನಗಳಿಗೆ ಒಂದು ನಿಗದಿ ಮಾಡಿರುವ ಒಕ್ಕೂಟ, ರೈತರ ಹಾಲಿನ ದರ ಏಕಾಏಕಿ ಕಡಿತ ಮಾಡಿರುವುದು ಖಂಡನೀಯ ಎಂದರು. ಅಲ್ಲದೇ ರೈತರ ಹಿತ ದೃಷ್ಟಿಯಿಂದ ಕಡಿತ ಮಾಡಿರುವ 1 ರೂ ದರವನ್ನು ಮತ್ತೆ ಸೇರಿಸಬೇಕು ಎಂದು ಹಾಲು ಒಕ್ಕೂಟದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಈ ಬಳಿಕ ಚಾಮುಲ್ ಅಧ್ಯಕ್ಷ ವೈ ಸಿ ನಾಗೇಂದ್ರ ಮಾತನಾಡಿ. ಹಾಲು ಒಕ್ಕೂಟದ ಹಿತದೃಷ್ಟಿಯಿಂದ ರೈತರ ಹಾಲಿನ ದರದಲ್ಲಿ ಒಂದು ರೂಪಾಯಿ ಕಡಿತ ಮಾಡಬೇಕಾಗಿದೆ ವಿನಃ, ಯಾವುದೇ ದುರುದ್ದೇಶ ಇಲ್ಲ. ಈಗಾಗಲೇ ನಮ್ಮ ಹಾಲು ಒಕ್ಕೂಟ ನಷ್ಟದಲ್ಲಿದ್ದು, ಮುಂಬರುವ ದಿನಗಲ್ಲಿ ಈ ದರವನ್ನು ಪರಿಷ್ಕರಣೆ ಮಾಡಿ ರೈತರಿಗೆ ಸೂಕ್ತ ದರ ನೀಡಲಾಗುವುದು. ರೈತರ ಸಹಕಾರ ನಮ್ಮ ಹಾಲು ಒಕ್ಕೂಟಕ್ಕೆ ಅತ್ಯಗತ್ಯ ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗುರು ಪ್ರಸಾದ್, ಮಾಡ್ರಹಳ್ಳಿ ಮಹದೇವಪ್ಪ, ಹೊನ್ನೂರು ಮಹದೇವಸ್ವಾಮಿ, ಹೆಗ್ಗವಡೀಪುರ ಮಹದೇವಸ್ವಾಮಿ, ಶಿವಪ್ರಸಾದ್, ಅಲಹಳ್ಳಿ ಮಹೇಶ್, ವಿಜಯ್, ಲೋಕೇಶ್ ಚಿಕ್ಕಣ್ಣ, ಫಣಿರಾಜ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.












Click it and Unblock the Notifications