ಚಾಮರಾಜನಗರ: ರೈತರ ಬದುಕು ಕಸಿದ ಒಂಟಿ ಸಲಗ
ಚಾಮರಾಜನಗರ, ನವೆಂಬರ್ 30: ಈ ಬಾರಿ ಉತ್ತಮ ಮಳೆಯಾದ ಕಾರಣ ರೈತರು ಖುಷಿಯಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಜತೆಗೆ ಮಳೆಯಾಶ್ರಿತ ಬೆಳೆಗಳನ್ನು ಕೆಲವರು ಬೆಳೆದಿದ್ದರೆ ಮತ್ತೆ ಕೆಲವು ರೈತರು ನೀರು ಹಾಯಿಸಿ ಬಾಳೆ, ಕಬ್ಬು, ಜೋಳ ಮೊದಲಾದ ಬೆಳೆಗಳನ್ನು ಬೆಳೆದಿದ್ದಾರೆ. ಇನ್ನು ಕೆಲವರು ಹೂವಿಗೂ ಆದ್ಯತೆ ನೀಡಿದ್ದಾರೆ. ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆದಿದ್ದು, ಒಂದಷ್ಟು ಆದಾಯದ ನಿರೀಕ್ಷೆ ಮಾಡಿದ್ದಾರೆ. ಆದರೀಗ ಒಂಟಿ ಸಲಗವೊಂದು ರೈತರ ನಿದ್ದೆಗೆಡಿಸಿದೆ.
ಸಾಮಾನ್ಯವಾಗಿ ಜಿಲ್ಲೆಯ ರೈತರು ಪ್ರತಿವರ್ಷವೂ ಸಂಕಷ್ಟ ಅನುಭವಿಸುವುದು ಹೊಸತೇನಲ್ಲ. ಕೆಲವೊಮ್ಮೆ ಮಳೆ ಕೈಕೊಟ್ಟರೆ, ಮತ್ತೆ ಕೆಲವು ಸಮಯಗಳಲ್ಲಿ ತಾವು ಬೆಳೆದ ಬೆಳೆಗೆ ಉತ್ತಮ ದರ ದೊರೆಯದೆ ನಷ್ಟ ಅನುಭವಿಸುತ್ತಾರೆ. ಆದರೂ ಹತ್ತು ಹಲವು ಸಂಕಷ್ಟಗಳ ನಡುವೆ ಕೃಷಿಯನ್ನು ಬಿಡದೆ ಅದರಲ್ಲೇ ಬದುಕನ್ನು ಕಟ್ಟಿಕೊಂಡು ಬಂದಿರುವ ರೈತರಿಗೆ ದುಡಿಮೆಗೆ ತಕ್ಕಂತಹ ಪ್ರತಿಫಲ ಸಿಗುತ್ತಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಇನ್ನು ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುವ ರೈತರ ಬದುಕು ಮೂರಾಬಟ್ಟೆಯಾಗಿದೆ. ಇಲ್ಲಿನ ರೈತರು ಬಿಸಿಲು, ಚಳಿ, ಮಳೆ ಎಲ್ಲವನ್ನು ಲೆಕ್ಕಿಸದೆ ದುಡಿದು ಬೆಳೆ ಬೆಳೆದರೂ ಅದು ಫಸಲಿಗೆ ಬರುವ ವೇಳೆಗೆ ಕಾಡುಪ್ರಾಣಿಗಳು ಜಮೀನಿಗೆ ನುಗ್ಗಿ ತಿಂದು, ತುಳಿದು ನಾಶ ಮಾಡಿ ಹೋಗುತ್ತವೆ. ಬೆಳೆ ನಷ್ಟವನ್ನು ತುಂಬಿಸಿಕೊಡಬೇಕಾದ ಅರಣ್ಯ ಇಲಾಖೆ ಅಷ್ಟೋ ಇಷ್ಟೋ ನೀಡಿ ಕೈತೊಳೆದು ಕೊಳ್ಳುತ್ತದೆ. ಇದರಿಂದ ಸಾಲ ಮಾಡಿಕೊಂಡು ಬೆಳೆ ಬೆಳೆದ ರೈತನ ಸ್ಥಿತಿ ಮಾತ್ರ ಅಧೋಗತಿಗೆ ಇಳಿದು ಬಿಡುತ್ತದೆ.
ಜಿಲ್ಲೆಯ ಬಹಳಷ್ಟು ರೈತರಿಗೆ ಕೃಷಿ ಮಾಡುವುದು ಸವಾಲ್ ಆಗಿದೆ. ಕಷ್ಟಗಳನ್ನು ಅನುಭವಿಸಿ ಸಾಕಾದ ಸಣ್ಣಪುಟ್ಟ ರೈತರು ಪಟ್ಟಣದತ್ತ ಮುಖ ಮಾಡಿದ್ದು ಕೂಲಿನಾಲಿ ಮಾಡಿದರೂ ಈ ಕಷ್ಟ ಬೇಡಪ್ಪಾ ಎನ್ನುತ್ತಿದ್ದಾರೆ. ಆದರೆ ಕೆಲವರಿಗೆ ಕೃಷಿಯೇ ಜೀವನಾಧಾರವಾಗಿದ್ದು ಅದನ್ನು ಬಿಟ್ಟು ಬದುಕು ಇಲ್ಲ ಎಂಬಂತಾಗಿದೆ. ಹೀಗಾಗಿ ಹೋರಾಡುತ್ತಾ ಬದುಕುತ್ತಿದ್ದಾನೆ. ಆದರೆ ಫಸಲಿಗೆ ಬರುವ ವೇಳೆಗೆ ಕಾಡು ಪ್ರಾಣಿಗಳ ದಾಳಿಯಿಂದಾಗಿ ನಷ್ಟ ಅನುಭವಿಸುವುದು ಮಾಮೂಲಿಯಾಗಿದೆ.

ಇದೆಲ್ಲದರ ನಡುವೆ ಗುಂಡ್ಲುಪೇಟೆ ತಾಲೂಕಿನ ಕೆಲವು ಗ್ರಾಮಗಳಿಗೆ ಹೊಸದೊಂದು ಸಂಕಷ್ಟ ಶುರುವಾಗಿದೆ. ಕಾರಣ ತಾಲ್ಲೂಕಿನ ನೇನೆಕಟ್ಟೆ, ಮಂಚಹಳ್ಳಿ, ಹಸಗೂಲಿ ಗ್ರಾಮದ ವ್ಯಾಪ್ತಿಯಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಂಡು ರೈತರ ಜಮೀನಿಗೆ ನುಗ್ಗಿ ಫಸಲನ್ನು ತಿಂದು ತುಳಿದು ನಾಶ ಮಾಡುತ್ತಿದೆ. ಸಲಗ ಧೈತ್ಯವಾಗಿರುವುದರಿಂದ ಅದು ಯಾವಾಗ ಎಲ್ಲಿ ದಾಳಿ ಮಾಡಿ ಬಿಡುತ್ತದೆಯೋ ಎಂಬ ಭಯದಲ್ಲಿ ರೈತರು ಜಮೀನಿನ ಕಡೆಗೆ ತೆರಳಲು ಭಯಪಡುತ್ತಿದ್ದಾರೆ.
ಸದ್ಯ ಹಸಗೂಲಿ ಗ್ರಾಮದ ಮಹದೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗುತ್ತಿರುವ ಈ ಒಂಟಿ ಸಲಗ ಜಮೀನಿನಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ತಿಂದು ತುಳಿದು ಎಲ್ಲೆಂದರಲ್ಲಿ ಅಡ್ಡಾಡುತ್ತಾ ನಾಶ ಮಾಡುತ್ತಿದೆ.
ಈ ಸಲಗ ಕಾಣಿಸಿಕೊಂಡ ಬಳಿಕ ರೈತರು ಭಯಗೊಂಡಿದ್ದು, ಮನೆಯಿಂದ ಹೊರ ಬಂದು ಜಮೀನಿನತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ರೈತರಿಗೆ ಜಮಿನಿನಲ್ಲಿ ನೀರು ಹಾಯಿಸಲು, ಕೆಲಸ ಮಾಡಲು ಭಯ ಶುರುವಾಗಿದೆ. ಈ ಒಂಟಿ ಸಲಗವು ಕಳೆದ ಒಂದು ವಾರದಿಂದ ನೇನೆಕಟ್ಟೆ, ಶೆಟ್ಟಹಳ್ಳಿ, ಮಂಚಹಳ್ಳಿ, ಹಸಗೂಲಿ ಗ್ರಾಮಗಳ ಸುತ್ತಮುತ್ತ ಮೊಕ್ಕಾಂ ಹೂಡಿದ್ದು, ಅರಣ್ಯ ಇಲಾಖೆಯವರು ಅದನ್ನು ಸೆರೆಹಿಡಿದು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ನೆನೆಕಟ್ಟೆ ಗ್ರಾಮದ ನಿವಾಸಿ ಪುನೀತ್ ಎಂಬುವರು ಮಾತನಾಡಿ ನಮ್ಮ ಜಮೀನಿನಲ್ಲಿ ಬೆಳೆದಿದ್ದ ಅವರೆಕಾಳು, ಹುರುಳಿ ಇನ್ನಿತರ ಫಸಲುಗಳನ್ನು ಒಂಟಿ ಸಲಗ ನಾಶ ಮಾಡಿದ್ದು ಇದೀಗ ದಿಕ್ಕು ತೋಚದಂತಾಗಿದೆ ಆದ್ದರಿಂದ ಅರಣ್ಯ ಇಲಾಖೆಯವರು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಒಟ್ಟಾರೆ ಅರಣ್ಯದಿಂದ ನಾಡಿನತ್ತ ಮುಖ ಮಾಡಿರುವ ಒಂಟಿ ಸಲಗ ಕಂಡ, ಕಂಡ ರೈತರ ಜಮೀನುಗಳಿಗೆ ನುಗ್ಗಿ ಸಿಕ್ಕ ಫಸಲುಗಳನ್ನು ತಿನ್ನುತ್ತಾ ಓಡಾಡುತ್ತಿದ್ದರೆ, ರೈತರು ಕಷ್ಟಪಟ್ಟು ದುಡಿದ ಬೆಳೆಗಳು ನಾಶವಾಗುತ್ತಿರುವುದನ್ನು ನೋಡಿ ಕಣ್ಣೀರಿಡುತ್ತಿದ್ದಾರೆ. ಈ ಸಮಯದಲ್ಲಿ ಅರಣ್ಯದಿಂದ ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳು ನಾಡಿನತ್ತ ಬರುವುದು ಸಾಮಾನ್ಯವಾಗಿದ್ದು ಅವುಗಳ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ. ಇಲ್ಲದೆ ಹೋದರೆ ಇದು ಮುಂದುವರೆಯುತ್ತಲೇ ಇರುತ್ತದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications