ಮೇ 16 ರಿಂದ ಬಂಡೀಪುರದಲ್ಲಿ ಆನೆಗಳ ಗಣತಿ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮೇ 12: ಬಂಡೀಪುರ ಹುಲಿ ಯೋಜನೆಯಲ್ಲಿ ಮೇ 16 ರಿಂದ ಮೇ 19ರವರೆಗೆ ಆನೆ ಗಣತಿ ಕಾರ್ಯ ನಡೆಸಲು ಅರಣ್ಯ ಇಲಾಖೆಯು ಸಿದ್ಧತೆ ನಡೆಸಿದೆ ಎಂದು ಹುಲಿಯೋಜನೆಯ ನಿರ್ದೇಶಕ ಟಿ.ಹೀರಲಾಲ್ ತಿಳಿಸಿದ್ದಾರೆ.

ಮೇ 16ರಿಂದ ಪ್ರಾರಂಭವಾಗುವ ಗಣತಿಗೆ ರಾಜ್ಯದ ವಿವಿಧೆಡೆಗಳಿಂದ 130 ಸ್ವಯಂಸೇವಕರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. 113 ಬೀಟುಗಳನ್ನು ಇದಕ್ಕಾಗಿ ಗುರುತಿಸಲಾಗಿದ್ದು 100 ಸಿಬ್ಬಂದಿ ಗಣತಿಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಬೀಟ್ ನ 5 ರಿಂದ 6 ಕಿ.ಮೀ. ವ್ಯಾಪ್ತಿಗೆ ಒಂದು ಬ್ಲಾಕ್ ಎಂದು ಗುರುತಿಸಿ ಗಣತಿ ಕಾರ್ಯ ನಡೆಯಲಿದೆ.

Elephant census starts in Karnataka from 19th May.

ಮೇ.16ರಂದು ಬಂಡೀಪುರ ಹುಲಿ ಯೋಜನೆಯ ಸ್ವಾಗತ ಕಚೇರಿಯಲ್ಲಿ ಸ್ವಯಂಸೇವಕರಿಗೆ ಸೂಕ್ತ ಸಲಹೆ ಸೂಚನೆ ನೀಡಿ ಅವರೊಂದಿಗೆ ಗಣತಿ ನಡೆಸುವ ಸಲುವಾಗಿ ಪೂರ್ವ ತಯಾರಿ ಹಾಗೂ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಎಲ್ಲಾ ಸ್ವಯಂಸೇವಕರು ರಾತ್ರಿ ವೇಳೆಯಲ್ಲಿ ಅವರು ಗಣತಿ ಮಾಡಲು ನೇಮಕವಾಗಿರುವ ವಲಯದ ಕಳ್ಳಬೇಟೆ ನಿಗ್ರಹದಳದ ಶಿಬಿರಗಳಲ್ಲಿ ಉಳಿಯ ಬೇಕಿದೆ.

ಮರುದಿನ ಮೇ.17ರಂದು ಮುಂಜಾನೆ 6.30ರಿಂದ ಮಧ್ಯಾಹ್ನ 3.30ರವರೆಗೆ ನಡೆಯುವ ಗಣತಿಯಲ್ಲಿ ಪ್ರತಿ ಬ್ಲಾಕ್ ನಲ್ಲಿಯೂ ಅರಣ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರು ತಮಗೆ ಎದುರಾಗುವ ಆನೆಗಳನ್ನು ಲಿಂಗ ಹಾಗೂ ವಯಸ್ಸಿನ ಆಧಾರದ ಮೇಲೆ ದಾಖಲಿಸಿಕೊಳ್ಳುತ್ತಾರೆ.

ಮೇ.18ರಂದು ಆನೆಗಳ ಲದ್ದಿಯನ್ನು ಗುರುತಿಸುವ ಮೂಲಕ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಮೇ.19ರಂದು ಕೆರೆ ಕಟ್ಟೆ ಹಾಗೂ ನೀರಿನ ಮೂಲಗಳ ಬಳಿ ಕಾದು ನೀರು ಕುಡಿಯಲು ಬರುವ ಆನೆಗಳನ್ನು ಗಣತಿ ಮಾಡಲಾಗುತ್ತದೆ. 20ರಂದು ಮಾಹಿತಿಗಳನ್ನು ಗಣತಿ ಸಂದರ್ಭದಲ್ಲಿ ಯಾವುದಾದರೂ ವಿಷಯಗಳು ಕೈಬಿಟ್ಟಿದ್ದರೆ ಮತ್ತು ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ನಿವಾರಿಸಿ ಸ್ವಯಂ ಸೇವಕರಿಂದ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Elephant census will be started in Karnataka from 19th May.
Please Wait while comments are loading...