ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಕ್ಕಲಿಗರು ಜೆಡಿಎಸ್‌ ಪರ ಎಂದ ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ತಿರುಗೇಟು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ,ಜುಲೈ 20: "40 ಸೀಟ್ ಗೆದ್ದವರಿಗೆ ಅಷ್ಟೊಂದು ಆಸೆ ಇರಬೇಕಾದರೇ 80 ಸೀಟ್ ಗೆದ್ದವರಿಗೆ ಇನ್ನೆಷ್ಟು ಆಸೆ ಇರಬೇಕು?" ಎಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಮಂಗಳವಾರ ಗುಂಡ್ಲುಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಜೆಡಿಎಸ್‌ಗೆ ಅಧಿಕಾರ, ಒಕ್ಕಲಿಗ ಸಮುದಾಯ ಜನತಾದಳದೊಟ್ಟಿಗೇ ಇದೇ. ಕಾಂಗ್ರೆಸ್‌ಗೆ ಅಧಿಕಾರ ಸಿಗಲ್ಲ" ಎಂಬ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ "40 ಸೀಟ್ ಗೆದ್ದೋರಿಗೆ ಅಷ್ಟು ಆಸೆ ಇದೆ,‌ 80 ಸೀಟ್ ಗೆದ್ದೋರಿಗೆ ಇನ್ನೆಷ್ಟು ಆಸೆ ಇರಬೇಕು, ಅವರಿಗೆ ಒಳ್ಳೆಯದಾಗಲಿ" ಎಂದು ತಿವಿದರು.

40 ವರ್ಷ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಸಾಧನೆ ಮೆಲುಕು ಹಾಕಿದ್ರೆ ತಪ್ಪೇನು?: ಡಿಕೆಶಿ ಪ್ರಶ್ನೆ40 ವರ್ಷ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಸಾಧನೆ ಮೆಲುಕು ಹಾಕಿದ್ರೆ ತಪ್ಪೇನು?: ಡಿಕೆಶಿ ಪ್ರಶ್ನೆ

ಇನ್ನು, ಸಿಎಂ ಆಗುವ ಆಸೆ ಇತ್ತೀಚೆಗೆ ಉತ್ಕಟವಾಗಿದೆಯಲ್ಲಾ ಎಂಬ ಪ್ರಶ್ನೆಗೆ ಗರಂ ಆದ ಡಿಕೆಶಿ, "ಕಾಂಗ್ರೆಸ್ ಇತಿಹಾಸ ಗೊತ್ತಾ. ನಾನು ಎಷ್ಟು ಸೀನಿಯರ್ ಇದೀನಿ ಗೊತ್ತಾ. ನಾನು ಯಾರ ವಿರುದ್ಧ ಗೆದ್ದಿದ್ದೀನಿ, ಸೋತಿದ್ದೀನಿ ಗೊತ್ತಾ?. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಗಿದ್ದೀನಿ, ನನ್ನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ತರಬೇಕೆಂಬುದು ನನ್ನ ಅಜೆಂಡಾ, ಮುಖ್ಯಮಂತ್ರಿ ಯಾರಾಗಬೇಕೆಂದು ಹೈಕಮಾಂಡ್‌ ನಿರ್ಧರಿಸಲಿದೆ" ಎನ್ನುವ ಮೂಲಕ ಸಿಎಂ ಆಗುವ ಆಸೆಯನ್ನು ಪರೋಕ್ಷವಾಗಿ ಹೊರಹಾಕಿದರು‌‌‌.

DK Shivakumar Reaction to HD Kumaraswamy Statement of the Vokkaligas Support

ಭ್ರಷ್ಟಾಚಾರದ ರಾಜಧಾನಿ; "ಕರ್ನಾಟಕ ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದೆ, ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶೇ 40ರಷ್ಟು ಕಮೀಷನ್ ಹೊರತಾಗಿಯೂ ನೀರಾವರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯದ ಗೌರವವನ್ನು ಉಳಿಸುವ ಕಾರ್ಯ ಆಗಬೇಕಿದೆ, ಜನರಿಗೆ ಈ ವಿಚಾರ ಮುಟ್ಟಿಸುತ್ತೇವೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಸರ್ಕಾರ ವಿರುದ್ಧ ಜನಧ್ವನಿಯಾಗುವಲ್ಲಿ ಕಾಂಗ್ರೆಸ್ ವಿಫಲ!ಸರ್ಕಾರ ವಿರುದ್ಧ ಜನಧ್ವನಿಯಾಗುವಲ್ಲಿ ಕಾಂಗ್ರೆಸ್ ವಿಫಲ!

"ಸಿದ್ದರಾಮಯ್ಯ ಸಿಎಂ, ಡಿಕೆಶಿ ಸಿಎಂ ಎಂಬ ಘೋಷಣೆಗಳಿಂದ ಪಕ್ಷಕ್ಕೆ ಹೊಡೆತವಲ್ಲವೇ ಎಂಬುದಕ್ಕೆ ಉತ್ತರಿಸಿ, ಅವರವರ ಆಸೆ ಅವರು ಹೇಳುತ್ತಾರೆ, ನಾನು ಎಷ್ಟು ಅಂತಾ ಬೈಯ್ಯಲಿ, ಎಷ್ಟು ಅಂತಾ ಬುದ್ಧಿವಾದ ಹೇಳಲಿ, ಅಭಿಮಾನಿಗಳಿಗೆ ಒಂದೊಂದು ಆಸೆ ಇರತ್ತದೆ. ಹೇಳಿಕೊಳ್ಳುತ್ತಾರೆ" ಎಂದರು.

ಬಿರಿಯಾನಿ ತಿಂದು 24 ಮಂದಿ ಅಸ್ವಸ್ಥ; ಹುಟ್ಟುಹಬ್ಬದ ಬಿರಿಯಾನಿ ತಿಂದು 24 ಮಂದಿ ಅಸ್ವಸ್ಥರಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಅರೇಪಾಳ್ಯ ಗ್ರಾಮದಲ್ಲಿ ನಡೆದಿದೆ. ಸಂತೋಷ್ ಕುಮಾರ್ ಎಂಬವರ ಪುತ್ರನಿಗೆ ಸೋಮವಾರ ಹುಟ್ಟುಹಬ್ಬ ನಡೆದಿದ್ದು ಬಿರಿಯಾನಿ ಮಾಡಿಸಿದ್ದರಂತೆ.

ಮಂಗಳವಾರ ಉಳಿದಿದ್ದ ಬಿರಿಯಾನಿಯನ್ನು ತೋಟದ ಕೂಲಿಯಾಳುಗಳಿಗೆ ಸಂತೋಷ್ ತಂದು ಕೊಟ್ಟಿದ್ದು ಅದನ್ನು ಸೇವಿಸಿದ 24 ಮಂದಿ ಅಸ್ವಸ್ಥರಾಗಿದ್ದಾರೆ. ತಂಗಳು ಬಿರಿಯಾನಿ ತಿಂದಿದ್ದ ಕೂಲಿ ಕಾರ್ಮಿಕರಿಗೆ ವಾಂತಿ, ಭೇದಿಯಾಗಿದ್ದು ಪುಟ್ಟ ಲಕ್ಷಮ್ಮ, ಮೇಘನಾಣ ಲಾವಣ್ಯ, ಕಮಲ, ಯಶವಂತ್ ಸೇರಿದಂತೆ 24 ಜನ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಸಕ ಎನ್. ಮಹೇಶ್ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

Recommended Video

ದಿನೇಶ್ ಕಾರ್ತಿಕ್ ಇಂದು ವಿರಾಟ್ ಕೊಹ್ಲಿ ಮುಂದಿನ ಶತಕದ ಬಗ್ಗೆ ಭವಿಷ್ಯ ನುಡಿದಿದ್ದಾರೆ | *Cricket | OneIndia

English summary
KPCC president D. K. Shivakumar reaction for H. D. Kumaraswamy statement of the vokkaligass support only for JD(S). and he said, Those who won 40 seats should have desire, But we won 80 seats, so have more desire than them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X