ಚಾಮರಾಜನಗರ: ಪಿಯು ಪರೀಕ್ಷೆಗೂ ಬಂತು ಬೆಳ್ಳುಳ್ಳಿ.. ಕಬಾಬ್.. ಸ್ನೇಹಿತನಿಗೆ ಕಟೌಟ್ ಹಾಕಿದ ಗೆಳೆಯರು, ಭಾರೀ ವೈರಲ್
ಚಾಮರಾಜನಗರ, ಮಾರ್ಚ್, 01: ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಬೆಳ್ಳುಳ್ಳಿ, ಕಬಾಬ್ ಡೈಲಾಗ್ ಈಗ ಪಿಯು ಪರೀಕ್ಷೆಗೂ ತಗಲಾಕಿಕೊಂಡಿದ್ದು, ಹುಡುಗನ ಫೋಟೋ ಹಾಕಿ ಗೆಳೆಯರು ಬ್ಯಾನರ್ ಹಾಕಿರುವ ಘಟನೆ ಚಾಮರಾಜನಗರದದಲ್ಲಿ ನಡೆದಿದೆ.
ಚಾಮರಾಜನಗರದ ಜೋಡಿ ರಸ್ತೆ ಸಮೀಪ ಕಾಂಪೌಂಡ್ ಒಂದಕ್ಕೆ ಯುವಕನ ಫೋಟೋ ಹಾಕಿ "ಸತತ 4ನೇ ಬಾರಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗೆ ಶುಭಾಶಯಗಳು ಎಂದು ಕೋರಿದ್ದಾರೆ. ಜೊತೆಗೆ, ಫೋಟೋ ಕೆಳಗಡೆ ಬೆಳ್ಳುಳ್ಳಿ, ಕಬಾಬ್ ಎಂದು ಬರೆಯಲಾಗಿದೆ.

ಪಕ್ಕದಲ್ಲೇ "ನಮ್ ಮನ್ಸು ನಮ್ಗೆ ಒಳ್ಳೆದ್ ಮಾಡಿದ್ರೆ, ದೇವರು ಈ ಎಕ್ಸಾಂ ಎಲ್ಲಾ ಏನಕ್ಕೆ ಬೇಕು," ಎಂದು ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ಲೈನ್ ಬರೆದು ಗೆಳೆಯನ ಪಿಯು ಎಕ್ಸಾಂಗೆ ಶುಭಾಶಯ ಕೋರಿದ್ದಾರೆ.
ಸದ್ಯ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫ್ಲೆಕ್ಸ್ ಹಾಕಿರುವವರ ಮಾಹಿತಿ ತಿಳಿದುಬಂದಿಲ್ಲ.
ವಿದ್ಯಾರ್ಥಿ ಮೇಲೆ ಹಲ್ಲೆ: ಖಾಸಗಿ ಬಸ್‌ನಲ್ಲಿ ಪ್ರಯಾಣಿಕರು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದಿಂಡವರ ಮಾರ್ಗದಿಂದ ಹಿರಿಯೂರು ಮಾರ್ಗವಾಗಿ ಬರುವ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಸಣ್ಣ ವಿಚಾರಕ್ಕೆ ವಿದ್ಯಾರ್ಥಿ ಹಾಗೂ ಪ್ರಯಾಣಿಕರ ಮಧ್ಯೆ ಜಗಳವಾಗಿದ್ದು, ಈ ಸಂಬಂಧ ವಿದ್ಯಾರ್ಥಿ ಶಿವರಾಜ್ (17) ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿತ್ತು.
ಹಲ್ಲೆ ನಡೆಸಿದ್ದು ಯಾರು?: ಆದಿವಾಲ ಭೋವಿ ಕಾಲೋನಿಯ ತಿರುಮಲ ನಗರದ ಯೋಗಿ ಮತ್ತು ಸುಧಾಕರ್ ಹಾಗೂ ಇವರ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಡು ರಸ್ತೆಯಲ್ಲೆ ಖಾಸಗಿ ಬಸ್ ನಿಲ್ಲಿಸಿ ವಿದ್ಯಾರ್ಥಿ ಶಿವರಾಜ್ ಮೇಲೆ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪೊಲೀಸರು ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದರು.












Click it and Unblock the Notifications