ಗುಂಡ್ಲುಪೇಟೆಯಲ್ಲಿ ಸಿಲಿಂಡರ್ ಸ್ಫೋಟ; ಒಬ್ಬನ ಸಾವು

ಚಾಮರಾಜನಗರ, ಮೇ 26: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಸ್ಫೋಟಗೊಂಡ ಯುವಕನೋರ್ವ ಸುಟ್ಟು ಕರಕಲಾಗಿರುವ ಗುಂಡ್ಲುಪೇಟೆ ಘಟನೆ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಮಳವಳ್ಳಿ ಗ್ರಾಮದ ಸ್ವಾಮಿ(28) ಮೃತ ದುರ್ದೈವಿ. ಬುಧವಾರ ರಾತ್ರಿ ಕುಡಿದು ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಮನೆ ಮೇಲ್ಛಾವಣಿಯ ಹೆಂಚು ಹಾರಿಹೋಗಿದ್ದು, ಮನೆಯಲ್ಲಿದ್ದ ವಿವಿಧ ವಸ್ತುಗಳು ಸಹ ಸುಟ್ಟು ಹೋಗಿದೆ. ಮೃತ ಯುವಕನು ಮದ್ಯದ ನಶೆಯಲ್ಲಿದ್ದಿದ್ದರಿಂದ ಅವಘಡದಿಂದ ಪಾರಾಗಲಾಗದೇ ಮಲಗಿದ್ದಲ್ಲೇ ಅಸುನೀಗಿದ್ದಾನೆ. ಈತ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು ಅಜ್ಜಿ ಮತ್ತು ಪಾಲಕರು ಬೇರೆ ಮನೆಯಲ್ಲಿ ಇರುತ್ತಿದ್ದರು ಎಂದು ಹೇಳಲಾಗುತ್ತಿದೆ.

Cylinder Blast at Gundlupet Taluk, 1 Person Dies

ಮೃತ ಯುವಕನ ಕುಟುಂಬಕ್ಕೆ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ:

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಾಗೂ ಸಿಲಿಂಡರ್ ಸ್ಫೋಟದಿಂದ ಯುವಕ ಸಾವನ್ನಪ್ಪಿದ್ಧಾನೆ. ಈ ಹಿನ್ನೆಲೆಯಲ್ಲಿ ಚೆಸ್ಕಾಂ ಹಾಗೂ ಗ್ಯಾಸ್ ಕಂಪನಿಯವರು ಕೂಡಲೇ ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಇಲ್ಲದಿದ್ದರೆ ಆಯಾ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಳ್ಳವಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Cylinder Blast at Gundlupet Taluk, 1 Person Dies

ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು:

ಸ್ಫೋಟಗೊಂಡ ಸಿಲಿಂಡರ್ ಭಾರತ್ ಗ್ಯಾಸ್ ಕಂಪನಿಗೆ ಸೇರಿದ್ದು, ಸ್ಥಳಕ್ಕೆ ಕಂಪನಿಯ ಮ್ಯಾನೇಜರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಗುಂಡ್ಲುಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+