ಇಂಡಿಗನತ್ತದಲ್ಲಿ ಮರು ಮತದಾನಕ್ಕೆ ಕ್ಷಣಗಣನೆ-ಪೊಲೀಸ್ ಬಂದೋಬಸ್ತ್ ಹೇಗಿದೆ?
ಚಾಮರಾಜನಗರ, ಏಪ್ರಿಲ್, 28: ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ (ಏಪ್ರಿಲ್ 29) ಲೋಕಸಭಾ ಚುನಾವಣೆಯ ಮರು ಮತದಾನ ನಡೆಯಲಿದ್ದು, ಚುನಾವಣಾ ಸಿಬ್ಬಂದಿ ಇವಿಎಂ ಹಾಗೂ ಚುನಾವಣಾ ಸಾಮಗ್ರಿ ಹಿಡಿದು ತೆರಳಿದ್ದಾರೆ.
ಹನೂರಿನ ಮಸ್ಟರಿಂಗ್ ಕೇಂದ್ರವಾದ ಕ್ರಿಸ್ತರಾಜ ಶಾಲೆಯಿಂದ ಚುನಾವಣಾ ಸಿಬ್ಬಂದಿ ಮರು ಮತದಾನಕ್ಕೆ ತೆರಳಿದ್ದಾರೆ. ಮತಗಟ್ಟೆ 146ರಲ್ಲಿ ನಡೆಯಲಿರುವ ಮರು ಮತದಾನಕ್ಕೆ ಪಿಆರ್‌ಒ ಆಗಿ ಕೆ.ವೆಂಕಟೇಶ್, ಎಪಿಆರ್‌ಒ ಆಗಿ ಎಸ್.ಮಹಾದೇವಸ್ವಾಮಿ, ಪೊಲೀಂಗ್ ಆಫಿಸರ್‌ಗಳಾಗಿ ಎಸ್.ಚಂದ್ರ, ಕೆ.ಎಸ್.ಮಹಾದೇವಸ್ವಾಮಿ, ಕೆ.ಮಹೇಶ್ ಅವರನ್ನು ನಿಯೋಜನೆ ಮಾಡಲಾಗಿದೆ.

ಗಲಾಟೆಯಾಗಿದ್ದ ಶಾಲೆಯಲ್ಲೇ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಗ್ರಾಮದಲ್ಲಿ ಪೊಲೀಸರು ಮೊಕ್ಕಾಂಂ ಹೂಡಿದ್ದಾರೆ. ಅಲ್ಲದೆ ಮತದಾನ ಕುರಿತು ಟಾಂಟಾಂಂ ಮಾಡಿ ಜಾಗೃತಿ ಮೂಡಿಸಲಾಗಿದೆ. ಇಂಡಿಗನತ್ತ ಮತ್ತು ಮೆಂದಾರೆ ಸೇರಿ ಮತಗಟ್ಟೆ 146ರಲ್ಲಿ 528 ಮತದಾರರು ಇದ್ದಾರೆ.
ಮತಗಟ್ಟೆ ಧ್ವಂಸ: ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಸಹ ಮಾಡಲಾಗಿತ್ತು. ಇದರ ನಡುವೆಯೇ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿತ್ತು.
ಮೂಲಸೌಕರ್ಯಕ್ಕೆ ಆಗ್ರಹಿಸಿ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ 5 ಗ್ರಾಮಗಳ ಜನರು ಮತದಾನ ಬಹಿಷ್ಕಾರ ಮಾಡಿದ್ದರು. ಬಳಿಕ ಅಧಿಕಾರಿಗಳು ಮನವೊಲಿಕೆಗೆ ತೆರಳಿದ್ದ ವೇಳೆ ತಾವು ಮತದಾನ ಮಾಡಲ್ಲವೆಂದು ಗ್ರಾಮಸ್ಥರೆಲ್ಲ ಸೇರಿ ಮತಗಟ್ಟೆಯನ್ನು ಧ್ವಂಸ ಮಾಡಿದ್ದಾರೆ.
ಘಟನೆಗೆ ಕಾರಣವೇನು?: ಮಲೆ ಮಹದೇಶ್ವರ ಗ್ರಾಮ ಪಂಚಾಯಿತಿಗೆ ಸೇರಿದ ಇಂಡಿಗನತ್ತ, ಮೆಂದಾರೆ ,ತುಳಿಸಿಕರೆ, ತೇಕಣೆ, ಪಡಸಲನತ್ತ ಈ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದೆ ಮತದಾರರು ದೂರ ಉಳಿದಿದ್ದರು.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತುಳಿಸಿಕರೆಯ 480 ಮತದಾರರು, ಇಂಡಿಗನತ್ತ ಪೋಡಿನ 528 ಮತದಾರರು, ಪಡಸಲನತ್ತ ಪೋಡಿನ 298 ನಿವಾಸಿಗಳು ಮತದಾನದಿಂದ ದೂರ ಉಳಿದಿದ್ದರು. ತಮಗೆ ಮೂಲಸೌಕರ್ಯ ಕೊಡಬೇಕು ಇಲ್ಲದಿದ್ದರೇ ತಾವು ಮತ ಹಾಕುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ವಿಚಾರ ಅರಿತ ಪೊಲೀಸ್ ಸಿಬ್ಬಂದಿ, ಚುನಾವಣಾ ಅಧಿಕಾರಿಗಳು ಮತದಾರರನ್ನು ಮನವೊಲಿಸಲು ತೆರಳಿದ್ದರು. ಈ ವೇಳೆ ಕೆಲವರನ್ನು ಮತದಾನಕ್ಕೆ ಮನವೊಲಿಸಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆ ಧ್ಚಂಸ ಮಾಡಿ, ಇವಿಎಂ ಹೊಡೆದು ಹಾಕಿ, ಕಲ್ಲು ತೂರಿದ್ದಾರೆ. ಈ ವೇಳೆ ಅಲ್ಲಿದ್ದ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಲ್ಲದೆ, ಮತಗಟ್ಟೆಯ ಬಾಗಿಲು, ಮೇಜು-ಕುರ್ಚಿ, ಇವಿಎಂ ಯಂತ್ರ ಇತರೆ ಪರಿಕರಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚುವ ಯತ್ನ ಮಾಡಿದ್ದಾರೆ. ಇನ್ನು ಈ ಘಟನೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಎಎಸ್ಪಿ ಉದೇಶ್ ಭೇಟಿ ಕೊಟ್ಟಿದ್ದಾರೆ.












Click it and Unblock the Notifications