ಇಂದಿನಿಂದ 3 ದಿನ ಚಾಮರಾಜನಗರ ದಸರಾ: ಉದ್ಘಾಟಕರು ಯಾರು ಹಾಗೂ ಯಾವ್ಯಾವ ಕಾರ್ಯಕ್ರಮಗಳು ಇರಲಿವೆ?
ಚಾಮರಾಜನಗರ, ಅಕ್ಟೋಬರ್, 7: ಈಗಾಗಲೇ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ನು ಇಂದು (ಅಕ್ಟೋಬರ್ 07) ಚಾಮರಾಜನಗರ ದಸರಾಗೆ ಚಾಲನೆ ಸಿಗಲಿದ್ದು, ಇದು ಮೂರು ದಿನಗಳ ಕಾಲ ನಡೆಯಲಿವೆ. ಹಾಗಾದರೆ ದಸರಾ ಉದ್ಘಾಟಕರು ಯಾರು ಹಾಗೂ ಯಾವೆಲ್ಲ ಕಾರ್ಯಕ್ರಮಗಳು ನಡೆಯಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಭಾಗವಾಗಿ ಚಾಮರಾಜನಗರ ಜಿಲ್ಲೆಯಲ್ಲೂ ಚೆಲುವ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಇಂದಿನಿಂದ 9ರವರೆಗೆ ಜಿಲ್ಲಾ ದಸರಾ ನಡೆಯಲಿದೆ. ಇಂದು ಮಧ್ಯಾಹ್ನ 12.15 ಗಂಟೆಗೆ ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯದ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.

ಬಳಿಕ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಉದ್ಯಾನವನದಲ್ಲಿರುವ ಕನ್ನಡ ನಾಡದೇವತೆ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದು, ಜಿಲ್ಲಾ ದಸರಾ ಆರಂಭಗೊಳ್ಳಲಿದೆ. ಮಧ್ಯಾಹ್ನ 12:30ಕ್ಕೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಉದ್ಯಾನವನದಲ್ಲಿ ಚಿತ್ರಸಂತೆ ಉದ್ಘಾಟನೆಯಾಗಲಿದೆ.
ಮಧ್ಯಾಹ್ನ 12:50ಕ್ಕೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಉದ್ಘಾಟನೆ ಹಾಗೂ ಮಧ್ಯಾಹ್ನ 12:45 ಗಂಟೆಗೆ ಮಹಿಳಾ ದಸರಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಪುಷ್ಪ ಪ್ರದರ್ಶನದ ಉದ್ಘಾಟನೆ ನೆರವೇರಲಿದೆ. ಮಧ್ಯಾಹ್ನ 1:15 ಗಂಟೆಗೆ ವರನಟ ಡಾ.ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 1:45 ಗಂಟೆಗೆ ಜಿಲ್ಲಾಡಳಿತ ಭವನದಿಂದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದವರೆಗೆ ಕಲಾತಂಡಗಳೊಂದಿಗೆ ಮುಖ್ಯ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ 3:15ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನೆ ಹಾಗೂ ಮಧ್ಯಾಹ್ನ 3:45 ಗಂಟೆಗೆ ನಗರದ ಸಿಂಹ ಚಿತ್ರಮಂದಿರದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆ ಆಗಲಿದೆ. ಇನ್ನು ಸಂಜೆ 6 ಗಂಟೆಗೆ ನಗರದ ಜನನ ಮಂಟಪದಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ.
ಸಂಜೆ 6:30ಕ್ಕೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಆವರಣ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಜೆ 7:30 ಗಂಟೆಗೆ ಯುವದಸರಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ನಗರದ ಶ್ರೀ ಚಾಮರಾಜೇಶ್ವಸ್ವಾಮಿ ದೇವಾಲಯ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿವೆ.
ಯುವ ದಸರಾ ಉದ್ಘಾಟಕರು ಯಾರು?: ಅಕ್ಟೋಬರ್ 7ರಂದು ಸಂಜೆ 6:30 ರಿಂದ 7:30 ಗಂಟೆಯವರೆಗೆ ನಗರದ ಅವತಾರ್ ಡಾನ್ಸ್ ಇವೆಂಟ್ಸ್ ತಂಡದವರಿಂದ ನೃತ್ಯವೈಭವ ನಡೆಯಲಿದೆ. ಸಂಜೆ 7:30 ಗಂಟೆಗೆ ಟಗರು ಪಲ್ಯ ಚಿತ್ರದ ನಿರ್ದೇಶಕ, ನಟ ನಾಗಭೂಷಣ್ ಅವರಿಂದ ಯುವ ದಸರಾ ಉದ್ಘಾಟನೆಗೊಳ್ಳಲಿದ್ದು, ಸ್ಥಳೀಯ ಕಲಾವಿದರಿಂದ ರಾತ್ರಿ 10:30 ಗಂಟೆಯವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 8ರಂದು ಸಂಜೆ 7ರಿಂದ 8 ಗಂಟೆಯವರೆಗೆ ಮಿಮಿಕ್ರಿ ಗೋಪಿ ಮತ್ತು ತಂಡದವರಿಂದ ಕಾರ್ಯಕ್ರಮ, 8ರಿಂದ 10 ಗಂಟೆಯವರೆಗೆ ಹಾಸ್ಯ ಕಲಾವಿದರಾದ ಲೋಕೇಶ್ ಬಸವಟ್ಟಿ, ಗಾಯಕರಾದ ಪ್ರಗತಿ ಬಡಿಗೇರಾ ಅವರಿಂದ ಕಾರ್ಯಕ್ರಮ, ಬಳಿಕ ಕಾಮಿಡಿ ಕಿಲಾಡಿಗಳು, ಗಿಚ್ಚಿ ಗಿಲಿಗಿಲಿ, ಮಜಾಭಾರತ ಕಲಾವಿದರಿಂದ ಹಾಸ್ಯಸಂಜೆ ಕಾರ್ಯಕಮ ನಡೆಯಲಿದೆ.
ಅಕ್ಟೋಬರ್ 9ರಂದು ಸಂಜೆ 6ರಿಂದ 7 ಗಂಟೆಯವರೆಗೆ ನಟ ಡಾಲಿ ಧನಂಜಯ ಹಾಗೂ ಕಳೆದ ಬಾರಿಯ ಬಿಗ್‍ಬಾಸ್ ಸೀಸನ್-10ರ ವಿಜೇತ ಕಾರ್ತಿಕ್ ಮಹೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 7ರಿಂದ 10 ಗಂಟೆಯವರೆಗೆ ಹೆಸರಾಂತ ಚಲನಚಿತ್ರ ಗಾಯಕರಾದ ಕೃಷ್ಣಂ ಪ್ರಣಯಂ ಸಖಿ ಚಿತ್ರದ ಜನಪ್ರಿಯ ಗೀತೆ "ಜೇನ ದನಿಯೋಳೆ ಮೀನ ಕಣ್ಣೋಳೆ" ಗೀತೆಯ ಗಾಯಕ ಜಸ್ ಕರಣ್ ಸಿಂಗ್, ಹೇಮಂತ್, ಚೈತ್ರ, ದಿವ್ಯಾ ರಾಮಚಂದ್ರ ಅವರಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ.
-
Holiday Plan: ಉದ್ಯೋಗಿಗಳಿಗೆ ರಜೆ ಹಬ್ಬ: ಪ್ಲ್ಯಾನ್ ಮಾಡಿದ್ರೆ ಮಾರ್ಚ್ನಲ್ಲಿ ಎರಡು ಬಾರಿ ಪಡೆಯಬಹುದು ಸತತ 5 ದಿನಗಳ ಹಾಲಿಡೇ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್‍ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ












Click it and Unblock the Notifications