Get Updates
Get notified of breaking news, exclusive insights, and must-see stories!

ಚಾಮರಾಜನಗರದಲ್ಲಿ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರ ಕಲರವ: ಲಕ್ಷ ಲಕ್ಷ ಆದಾಯ

ಚಾಮರಾಜನಗರ, ಜನವರಿ 06: ಈ ಬಾರಿ ಬಂಡೀಪುರ ಸೇರಿದಂತೆ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳತ್ತ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಹಚ್ಚಹಸಿರಿನ ಬನದಲ್ಲಿ ವಿಹರಿಸುತ್ತಾ ಪ್ರಾಣಿಗಳನ್ನು ಹತ್ತಿರದಿಂದ ನೋಡಿ ಖುಷಿಪಡುವ ಸಲುವಾಗಿಯೇ ಪ್ರಾಣಿಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಮತ್ತು ಆಗಮಿಸುತ್ತಿರುವುದು ಎದ್ದು ಕಾಣಿಸುತ್ತಿದೆ. ಬಹುತೇಕ ಪ್ರವಾಸಿಗರು ನಗರ ಪ್ರದೇಶದವರಾಗಿದ್ದು, ತಮ್ಮೆಲ್ಲ ಜಂಜಾಟವನ್ನು ಬದಿಗೊತ್ತಿ ಅರಣ್ಯ ಪ್ರದೇಶದ ಪ್ರಶಾಂತತೆಯನ್ನು ಸವಿಯಲೆಂದೇ ಬರುತ್ತಿರುವುದು ಗಮನಾರ್ಹವಾಗಿದೆ.

ಇಲ್ಲಿಗೆ ಬರುವ ಪ್ರವಾಸಿಗರ ಪೈಕಿ ಬಹುತೇಕರು ಅರಣ್ಯದೊಳಗಿನ ಸುಂದರ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲು ಮುಂದಾದರೆ, ಕೆಲವರು ಅರಣ್ಯ ಪ್ರದೇಶದಲ್ಲಿ ಸಫಾರಿ ವೇಳೆ ಏನಾದರೂ ವಿಶೇಷತೆ ಗೋಚರಿಸುತ್ತಾ? ಎಂಬ ಅನ್ವೇಷಣೆಗಾಗಿ ಬರುತ್ತಾರೆ. ಇಲ್ಲಿನ ಪ್ರಾಣಿಗಳ ವಿಶೇಷತೆಗಳು ಹೊರ ಬರುತ್ತಿರುವುದು ಪ್ರಾಣಿಪ್ರಿಯರು ಸಫಾರಿ ವೇಳೆ ಹಿಡಿದ ದೃಶ್ಯಗಳಿಂದಾಗಿ ಮತ್ತು ಅವುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಜನರನ್ನು ತಲುಪುತ್ತಿವೆ. ಇತ್ತೀಚೆಗೆ ಹುಲಿ ಸೇರಿದಂತೆ ವನ್ಯ ಪ್ರಾಣಿಗಳನ್ನು ಸೆರೆಹಿಡಿಯಲೆಂದೇ ಆಗಮಿಸುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿದೆ.

Chamarajanagara Forest Sees Surge In Tourism Revenue

ವರ್ಷದಿಂದ ವರ್ಷಕ್ಕೆ ಬಂಡೀಪುರದ ಹುಲಿಸಂರಕ್ಷಿತಾರಣ್ಯಕ್ಕೆ ಹೆಚ್ಚಿನವರು ಭೇಟಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿನ ಹುಲಿಗಳ ಅಪರೂಪದ ದೃಶ್ಯಗಳು ಸಫಾರಿಗೆ ತೆರಳಿದ ಪ್ರವಾಸಿಗರಿಂದಲೇ ವೈರಲ್ ಆಗುತ್ತಿವೆ. ಇದೆಲ್ಲದರ ನಡುವೆ ಇಲ್ಲಿ ಏನಾದರೂ ವಿಶೇಷತೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಬಹುದೆಂಬ ಬಯಕೆ ಹೊತ್ತು ಬರುವ ಪ್ರಾಣಿ ಪ್ರಿಯರೇ ಹೆಚ್ಚಾಗಿದ್ದಾರೆ. ಆದರೆ ಮುಂದಿನ ದಿನಗಳು ಬೇಸಿಗೆಯಾಗಿರುವುದರಿಂದ ಗಿಡಮರಗಳು, ಕುರುಚಲು ಕಾಡುಗಳೆಲ್ಲವೂ ಒಣಗಿ ಹೋಗುವುದರಿಂದ ಈಗಿನ ಹಸಿರು ಪ್ರಪಂಚನ್ನು ನೋಡುವುದು ಕಷ್ಟವಾಗಲಿದೆ. ಹೀಗಾಗಿಯೇ ಈ ಸಮಯದಲ್ಲಿ ಹೆಚ್ಚಿನವರು ಬಂಡೀಪುರದ ಸುಂದರತೆಯನ್ನು ಕಣ್ತುಂಬಿಕೊಳ್ಳಲು ಮುಂದಾಗಿದ್ದಾರೆ.

ವರ್ಷಾಂತ್ಯದಲ್ಲಿ ಬಂಡೀಪುರಕ್ಕೆ ಭೇಟಿ ನೀಡಿದವರ ಸಂಖ್ಯೆ ದೊಡ್ಡಮಟ್ಟದಲ್ಲಿತ್ತಲ್ಲದೆ, ಮೂರೇ ದಿನದಲ್ಲಿ ಸುಮಾರು 26,77,309 ರೂಪಾಯಿ ಆದಾಯ ಪಡೆದಿರುವುದು ವಿಶೇಷವಾಗಿದೆ. ಇನ್ನು ಬಂಡೀಪುರ ಸೇರಿದಂತೆ ಇತರೆ ಅರಣ್ಯಗಳಿಗೆ ಪ್ರವಾಸಿಗರು ಭೇಟಿ ನೀಡಲು ಕಾರಣವಿದೆ. ಚಾಮರಾಜನಗರ ಜಿಲ್ಲೆ ಕೇರಳ ಮತ್ತು ತಮಿಳುನಾಡಿಗೆ ಹೊಂದಿಕೊಂಡಿದ್ದು, ಹೊರ ರಾಜ್ಯಗಳಿಗೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ಪ್ರವಾಸಿಗರು ಇಲ್ಲಿ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಮುಂದೆ ಸಾಗುತ್ತಾರೆ. ಹೀಗಾಗಿಯೇ ಚಾಮರಾಜನಗರ ಜಿಲ್ಲೆಯ ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿರುವುದನ್ನು ಕಾಣಬಹುದಾಗಿದೆ.

ಜತೆಗೆ ಪ್ರವಾಸಿಗರು ಅರಣ್ಯ ಮತ್ತು ವನ್ಯಪ್ರಾಣಿಗಳನ್ನು ನೋಡಲು ಅರಣ್ಯ ಇಲಾಖೆ ಶುಲ್ಕದೊಂದಿಗೆ ಅವಕಾಶ ಮಾಡಿಕೊಡುತ್ತಿರುವುದು ಇಲಾಖೆಗೆ ಆದಾಯ ತರಲು ಸಹಕಾರಿಯಾಗಿದೆ. ಅದರಲ್ಲೂ ವರ್ಷಾಂತ್ಯದಲ್ಲಿ ಸಾಲು ಸಾಲು ರಜೆಯಿದ್ದ ಕಾರಣ ಪ್ರವಾಸಿಗರು ದಂಡು ದಂಡಾಗಿ ಇಲ್ಲಿಗೆ ಆಗಮಿಸಿರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ಮೂಲಗಳ ಪ್ರಕಾರ ವರ್ಷಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಅದರಂತೆ ಮೂರೇ ದಿನದಲ್ಲಿ 26,77,309ರೂ.ನಷ್ಟು ಆದಾಯ ಬಂದಿದೆ. ಡಿ.29ರಂದು 10,03800 ರೂ., ಡಿ.30ರಂದು 10,02,200, ಡಿ.31ರಂದು 6,71,309 ರೂ. ಸಂಗ್ರಹವಾಗಿದೆ.

Chamarajanagara Forest Sees Surge In Tourism Revenue

ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಉತ್ತಮ ಪ್ರತಿಕ್ರಿಯೆ

ವರ್ಷಾಂತ್ಯದಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಿ.ಜಿ ಪಾಳ್ಯ ಅರಣ್ಯ ಪ್ರದೇಶಕ್ಕೂ ಪ್ರವಾಸಿಗರು ಭೇಟಿ ನೀಡಿರುವುದು ವಿಶೇಷವಾಗಿದೆ. ಆ ಮೂಲಕ ಪ್ರವಾಸಿಗರನ್ನು ಸೆಳೆಯಲು ಈ ಅರಣ್ಯ ಪ್ರದೇಶವೂ ತಯಾರಾಗಿದೆ. ಅರಣ್ಯ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ, ಡಿ.28ರಲ್ಲಿ ವಯಸ್ಕರು ಮತ್ತು ಮಕ್ಕಳು ಸೇರಿ 57 ಜನ, ಡಿ.29ರಲ್ಲಿ 62, ಡಿ.30ರಲ್ಲಿ 33, ಡಿ.31ರಲ್ಲಿ 51 ಪ್ರವಾಸಿಗರು ಇಲ್ಲಿ ಸಫಾರಿ ಮಾಡಿದ್ದಾರೆ. ಇದರಿಂದ ಡಿ.28ರಲ್ಲಿ 23,400 ರೂ., ಡಿ.29ರಲ್ಲಿ 24,400 ರೂ., ಡಿ.30ರಲ್ಲಿ 13,000 ರೂ., ಡಿ.31ರಲ್ಲಿ 19,600 ರೂ. ಆದಾಯ ಹರಿದುಬಂದಿದೆ. ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿರುವ ಗೋಪಿನಾಥಂ ಸಫಾರಿಗೆ ಡಿಸೆಂಬರ್ ತಿಂಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಫಾರಿಯಿಂದ 65 ಸಾವಿರ ರೂ. ಆದಾಯ ಬಂದಿದೆ. ಇದೇ ರೀತಿ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಕೆ.ಗುಡಿಯ ಸಫಾರಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಚಾಮರಾಜನಗರದಲ್ಲಿರುವ ಎಲ್ಲ ಅರಣ್ಯಪ್ರದೇಶಗಳು ತನ್ನದೇ ಆದ ವಿಶೇಷತೆಗಳಿಂದ ಗಮನಸೆಳೆಯುತ್ತಿವೆ. ಅದರಲ್ಲೂ ಬಂಡೀಪುರ ಮತ್ತು ಬಿಳಿಗಿರಿರಂಗನಬೆಟ್ಟವು ಹುಲಿಸಂರಕ್ಷಿತಾರಣ್ಯವಾಗಿವೆ. ಪ್ರವಾಸಿಗರು ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಮಾಡಲು ಆಗಮಿಸುವ ಮುನ್ನ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಬಹುಮುಖ್ಯವಾಗಿದೆ. ಜತೆಗೆ ಅರಣ್ಯ ಪ್ರದೇಶಗಳಲ್ಲಿ ತೆರಳುವಾಗಿ ಅರಣ್ಯ ಇಲಾಖೆಯ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ಅದನ್ನು ಮೀರಿ ಹುಚ್ಚಾಟವಾಡಿದರೆ ತಕ್ಕ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+