Get Updates
Get notified of breaking news, exclusive insights, and must-see stories!

Breaking News: ಚಾಮರಾಜನಗರ ಕಾಡಿಗೆ ಬೆಂಕಿ, ನೂರಾರು ಎಕರೆ ಸುಟ್ಟು ಭಸ್ಮ! ಅರಣ್ಯ ಇಲಾಖೆ ಅನುಮಾನ

ಚಾಮರಾಜನಗರ, ಫೆಬ್ರವರಿ 25: ಬೇಸಿಗೆ ಬಂತೆಂದರೆ ಸಾಕು ನಾಲ್ಕು ತಿಂಗಳು ಅರಣ್ಯ ಇಲಾಖೆಗೆ ಕಾಡ್ಗಿಚ್ಚಿನ ಭಯ ಆವರಿಸುತ್ತದೆ. ಎಷ್ಟೇ ಜಾಗರೂಕರಾಗಿದ್ದರೂ ಕಾಡು, ಪರಿಸರ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿಬಿಡುತ್ತದೆ. ಇದೀಗ ಇಂಥದ್ದೆ ಘಟನೆ ಚಾಮರಾನಗರ ವ್ಯಾಪ್ತಿಯ ಕಾಡಿನಲ್ಲಿ ನಡೆದಿದೆ. ಮಹದೇಶ್ವರ ಮತ್ತು ಕಾವೇರಿ ವನ್ಯಧಾಮದಲ್ಲಿ ಬೆಂಕಿ ಕಾಣಿಸಿಕೊಂಡು, ನೂರಾರು ಎಕರೆ ಅರಣ್ಯ ಸುಟ್ಟು ಭಸ್ಮವಾಗಿದೆ.

ಮೈಸೂರು ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಘಟನೆ ಮಾಡುವ ಮುನ್ನವೇ ಚಾಮರಾಜನಗರದ ನೂರಾರು ಎಕರೆ ಪ್ರದೇಶದಲ್ಲಿ ಕಾಡಿಗೆ ಬೆಂಕಿ ಹೊತ್ತಿಕೊಂಡಿದೆ. ವ್ಯಾಪಕ ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಿಗೆ ವಿಸ್ತರಿಸುತ್ತಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮುಳುಗಿದೆ. ಬೆಂಕಿ ನಂದಿಸುವ ಕಾರ್ಯ ಕಷ್ಟಸಾಧ್ಯ ಅಂತಲೂ ಹೇಳಲಾಗುತ್ತಿದೆ. ಬೆಂಕಿಗೆ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ.

Chamarajanagar Fire Incident Kaveri and Mahadeshwara s Hundreds of Acres Forest Burnt by Fire

ಅರೇ ಬೆಂಕಿ ನಂದಿಸುವುದು ಅಗ್ನಿಶಾಮಕದ ದಳದವರಲ್ಲವೇ ಅಂತ ನೀವು ಕೇಳಬಹುದು. ಆದರೆ ಅರಣ್ಯ ಪ್ರದೇಶದಲ್ಲಿ ದಾರಿ ಯಾವ ಕಡೆ ಇರುತ್ತದೆ. ಎಲ್ಲಿಂದ ಹೋಗಿ ಎಲ್ಲಿಗೆ ಕೂಡುತ್ತದೆ. ಅಪಾಯಕಾರಿ ಸ್ಥಳ ಎಲ್ಲವು ಅರಣ್ಯ ಸಿಬ್ಬಂದಿಗೆ ಗೊತ್ತಿರುತ್ತದೆ. ಹೀಗಾಗಿ ಅರಣ್ಯಕ್ಕೆ ಬೆಂಕಿ ಬಿದ್ದಾಗ, ನಾಡಿನಲ್ಲಿ ಅಗ್ನಿ ಶಾಮಕ ಸಿಬ್ಬಂದಿಯಂತೆ ಕಾಡಿನಲ್ಲಿ ಬೆಂಕಿ ಆರಿಸುವುದು ಕಷ್ಟ. ಹೀಗಾಗಿ ಅರಣ್ಯ ಇಲಾಖೆಯವರೇ ಬೆಂಕಿ ನಂದಿಸಬೇಕು. ಆ ಕಾರ್ಯ ಮಹದೇಶ್ವರ ಮತ್ತು ಕಾವೇರಿ ವನ್ಯಧಾಮದಲ್ಲಿ ನಡೆಯುತ್ತಿದೆ.

ಹೂಗ್ಯಂ, ಪಿಜಿ ಪಾಳ್ಯ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ನಾಲ್ಕನೇ ಬಾರಿಗೆ ಇಂಥದ್ದೊಂದು ಘಟನೆ ನಡೆದಿದೆ. ಯಾರೋ ಬೇಕು ಅಂತಲೇ ಕಿಡಿಗೇಡಿಗಳು ದುರುದ್ದೇಶಪೂರ್ವವಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.

Chamarajanagar Fire Incident Kaveri and Mahadeshwara s Hundreds of Acres Forest Burnt by Fire

ಬಿಸಿಲಿನ ವಾತಾವರಣ ಹೆಚ್ಚಿರುವ ಕಾರಣ ಬೆಂಕಿ ಬೇರೆ ಬೇರೆ ಒಣ ಪ್ರದೇಶಗಳಿಗೆ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣದಿಂದಾಗಿ ಬೆಂಕಿ ಆರಿಸುವುದು ಅಷ್ಟು ಸುಲಭವಾಗಿರುವುದಿಲ್ಲ. ಚಾಮರಾಜನಗರಕ್ಕೆ, ಇಲ್ಲಿನ ಬಿಆರ್ ಹಿಲ್ಸ್, ಕೆ.ಗುಡಿ, ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಅಗತ್ಯ ಎಚ್ಚರಿಕೆ ವಹಿಸಿದ್ದರೂ ಸಹಿತ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+