ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bird survey 2023: BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನವರಿ 26ರಿಂದ ಪಕ್ಷಿಗಳ ಗಣತಿ, ನೋಂದಣಿ ವಿವರ ಇಲ್ಲಿದೆ

|
Google Oneindia Kannada News

ಚಾಮರಾಜನಗರ, ಜನವರಿ, 17: ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನವರಿ 26ರಿಂದ 29ರವರೆಗೆ ಪಕ್ಷಿಗಳ ಗಣತಿ ನಡೆಯಲಿದೆ. 2011ರವರೆಗೆ ಈ ಅರಣ್ಯದಲ್ಲಿ 274 ಪ್ರಭೇದದ ಹಕ್ಕಿಗಳನ್ನು ಗುರುತಿಸಲಾಗಿತ್ತು. 2012ರಲ್ಲಿ ಪಕ್ಷಿಗಳ ಗಣತಿ ನಡೆದಿದ್ದು, ಈ ಗಣತಿಯಲ್ಲಿ 8 ಹೊಸ ಪ್ರಬೇಧಗಳನ್ನು ಗುರುತಿಸಲಾಗಿತ್ತು. ಹೀಗೆಯೇ ಇಲ್ಲಿಯವರೆಗೂ 282 ಪ್ರಬೇಧದ ಹಕ್ಕಿಗಳು ಕಂಡುಬಂದಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವೀಕೆಂಡ್ ಪ್ರವಾಸ: ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ರೆಸಾರ್ಟ್‌ಗಳುವೀಕೆಂಡ್ ಪ್ರವಾಸ: ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ರೆಸಾರ್ಟ್‌ಗಳು

ಹಾಗೆಯೇ 2021ರ ಜನವರಿಯಲ್ಲಿ ಬಿಳಿಗಿರಿ ರಂಗನಬೆಟ್ಟದಲ್ಲಿ 3 ದಿನಗಳ ಕಾಲ ಹಕ್ಕಿ ಹಬ್ಬ ನಡೆದಿತ್ತು. ಈ ಸಂದರ್ಭದಲ್ಲಿ ಪಕ್ಷಿಗಳ ವೀಕ್ಷಣೆ, ಅವುಗಳ ಬಗ್ಗೆ ವಿಚಾರಗೋಷ್ಠಿ, ಬಿಆರ್‌ಟಿ ಅರಣ್ಯದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಇನ್ನು 2012ರಲ್ಲಿಯೂ ಹಕ್ಕಿಗಳ ಗಣತಿ ನಡೆದಿತ್ತು. ಇದೀಗ ಮತ್ತೆ ಹೊಸ ಪ್ರಬೇಧದ ಹಕ್ಕಿಗಳು ಇವೆಯೇ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ಈ ವರ್ಷ ಸಮೀಕ್ಷೆ ನಡೆಸಲಾಗುತ್ತಿದೆ.

Chamarajanagar: Bird survey at BRT from january 26th, Here see details

ನೋಂದಣಿ ಮಾಡಿಕೊಳ್ಳುವ ವಿವರ
ಈಗಾಗಲೇ ಭಾನುವಾರದಿಂದಲೇ (ಜನವರಿ 15) ನೋಂದಣಿಗೆ ಅವಕಾಶ ನೀಡಲಾಗಿದ್ದು, ಜನವರಿ 18ರವರೆಗೂ ನೋದಂಣಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಕ್ಷಿ ತಜ್ಞರು, ಪಕ್ಷಿಗಳ ಗಣತಿ, ಪಕ್ಷಿ ವೀಕ್ಷಣೆಯಲ್ಲಿ ಅನುಭವ ಹೊಂದಿರುವವರಿಗೆ ಅವಕಾಶ ನೀಡಲಾಗುವುದು. 50ರಿಂದ 70 ಜನರಿಗೆ ಮಾತ್ರ ಅವಕಾಶ ನೀಡುವ ಬಗ್ಗೆ ಯೋಚಿಸಿದ್ದೇವೆ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ, ಡಿಸಿಎಫ್ ದೀಪ್ ಜೆ.ಕಾಂಟ್ರಾಕ್ಟರ್ ಮಾಹಿತಿ ನೀಡಿದ್ದಾರೆ.

Chamarajanagar: Bird survey at BRT from january 26th, Here see details

ಹೊಸ ಪ್ರಬೇಧದ ಹಕ್ಕಿಗಳ ಮಾಹಿತಿ ಸಂಗ್ರಹ
ನೋಂದಣಿ ಮಾಡಿಕೊಂಡವರು ವಿವಿಧ ತಂಡಗಳಲ್ಲಿ ಪೂರ್ವ ನಿರ್ಧಾರಿತ ಮಾರ್ಗಗಳಲ್ಲಿ ಅರಣ್ಯದಲ್ಲಿ ಸುತ್ತಾಡಿ ಪಕ್ಷಿಗಳ ವಿವರಗಳನ್ನು ದಾಖಲಿಸಲಿದ್ದಾರೆ. ಈ ಹಿಂದೆ ಗುರುತಿಸಲಾಗಿರುವ ಪಕ್ಷಿಗಳ ಪಟ್ಟಿಯನ್ನು ಮೊದಲೇ ಅವರಿಗೆ ನೀಡಲಾಗುವುದು. ಹೊಸ ಪ್ರಬೇಧದ ಹಕ್ಕಿ ಕಂಡು ಬಂದರೆ ಮಾತ್ರ ಅದರ ಮಾಹಿತಿಯನ್ನು ದಾಖಲು ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಜನಗಣತಿ ನಡೆಯುವುದನ್ನು ನಾವು ನೋಡಿದ್ದೇವೆ. ಆದರೆ ಪಕ್ಷಗಳ ಗಣತಿಯೂ ನಡೆಯುತ್ತಲೇ ಇದೆ. ತುಂಬಾ ವರ್ಷಗಳಿಂದ ಪಕ್ಷಗಳ ಗಣತಿ ನಡೆಯುತ್ತಿದ್ದು, ಇಲ್ಲಿ ಹೊಸಪ್ರಬೇಧದ ಹಕ್ಕಿಗಳನ್ನು ಗುರುತಿಸಲಾಗುವುದು.

English summary
Chamarajanagar: Bird survey at BRT from january 26th to 29th, Here see registration details, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X