Get Updates
Get notified of breaking news, exclusive insights, and must-see stories!

ಕಾವೇರಿ ಕಿಚ್ಚು: ಚಾಮರಾಜನಗದಲ್ಲಿ ತಮಿಳುನಾಡು ವಾಹನಗಳಿಗೆ ಮೆಟ್ನಲ್ಲಿ ಹೊಡ್ದು ವಾಪಸ್‌ ಕಳ್ಸಿದ ಪ್ರತಿಭಟನಾಕಾರರು

ಚಾಮರಾಜನಗರ, ಸೆಪ್ಟೆಂಬರ್‌, 29: ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಈ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಾಗೆಯೇ ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ ಕ್ಷಣ ಕ್ಷಣಕ್ಕೂ ತೀವ್ರ ಸ್ವಾರೂಪ ಪಡೆಯುತ್ತಲೇ ಇದ್ದು, ಪ್ರತಿಭಟನಾಕಾರರು ಜಿಲ್ಲೆಗೆ ಆಗಮಿಸುಬ ಮತ್ತು ಇಲ್ಲಿಂದ ತೆರಳುವ ತಮಿಳುನಾಡು ವಾಹನಗಳಿಗೆ ಕಾಲಿನಲ್ಲಿ ಒದ್ದು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರಿಂದ ತಮಿಳುನಾಡು ಮೂಲದ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.

ಚಾಮರಾಜನಗರದಲ್ಲಿ ತೀವ್ರಗೊಂಡ ಪ್ರತಿಭಟನೆ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದೆಂದು ಕರೆಕೊಟ್ಟಿರುವ ಕರ್ನಾಟಕ ಬಂದ್‌ಗೆ ಚಾಮರಾಜನಗರ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿಭಟನೆ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಲೇ ಇದೆ. ಇನ್ನು ನಗರದ ಸತ್ಯಮಂಗಲಂ ರಸ್ತೆಯಲ್ಲಿರುವ ಸಿದ್ಧಾರ್ಥ ಚಿತ್ರಮಂದಿರಕ್ಕೆ ನುಗ್ಗಿದ ಕಬ್ಬು ಬೆಳೆಗಾರರು ರಾಘವ ಲಾರೆನ್ಸ್ ಅಭಿನಯದ "ಚಂದ್ರಮುಖಿ-2" ಚಿತ್ರದ ಪೋಸ್ಟರ್ ಅನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.

Cauvery dispute: Protesters ban Tamil Nadu vehicles in Chamarajanagar

ಕಾವೇರಿ ಕ್ಯಾತೆ ನಿಲ್ಲಿಸದಿದ್ದರೇ ತಮಿಳು ಚಿತ್ರಗಳು ಪ್ರದರ್ಶನ ಮಾಡುವಂತಿಲ್ಲ ಎಂದು ಆಕ್ರೋಶಗೊಂಡು ತಮಿಳು ಚಿತ್ರದ ಪೋಸ್ಟರ್‌ಗಳನ್ನು ಹರಿದುಹಾಕಿ ತಮಿಳುನಾಡು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇನ್ನು, ಸತ್ಯಮಂಗಲಂ ರಸ್ತೆಯಲ್ಲಿ ಪ್ರತಿಭಟಿಸುತ್ತಿದ್ದ ಉಡಿಗಾಲ ಮಂಜುನಾಥ್ ಎಂಬವರು ಹಸಿರು ಟವೆಲ್‌ನಿಂದ ನೇಣು ಬಿಗಿದುಕೊಳ್ಳು ಯತ್ನಿಸಿ ಅಸ್ವಸ್ಥರಾಗಿದ್ದಾರೆ. ಇನ್ನು, ಪೊಲೀಸ್ ಜೀಪ್ ನಲ್ಲೇ ಅವರನ್ನು ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.

ತಮಿಳುನಾಡು ವಾಹನವೊಂದನ್ನು ಕಂಡ ಪ್ರತಿಭಟನಾಕಾರರು ಉದ್ರಿಕ್ತರಾಗಿ ಕಾರಿಗೆ ಒದ್ದು ಆಕ್ರೋಶ ಹೊರಹಾಕಿದ ಘಟನೆ ಚಾಮರಾಜನಗರ ಹೊರವಲಯದಲ್ಲಿ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

ಕರ್ನಾಟಕಕ್ಕೆ ಬಾರದ ತಮಿಳುನಾಡು ವಾಹನಗಳು

ಚಾಮರಾಜನಗರದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಧರ್ಮಪುರಿ ಜಿಲ್ಲಾಡಳಿತ ಟಿಎನ್ ನೋಂದಣಿ ವಾಹನಗಳನ್ನು ಕರ್ನಾಟಕಕ್ಕೆ ಕಳುಹಿಸದೇ ನಿರ್ಬಂಧ ಹೇರಿದೆ. ಬಣ್ಣಾರಿ ಚೆಕ್ ಪೋಸ್ಟ್‌ನಲ್ಲಿ ಕಿಲೋ ಮೀಟರ್‌ಗಟ್ಟಲೇ ಸರಕು ತುಂಬಿದ ವಾಹನಗಳು, ಕಾರುಗಳು ಸರತಿ ಸಾಲಿನಲ್ಲಿ ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ತಮಿಳುನಾಡು ಗಡಿಯಾದ ಚಾಮರಾಜನರ ತಾಲೂಕಿನ ಪುಣಜನೂರು ಮತ್ತು ಎಲ್ಲೆಕಟ್ಟೆ ಬಳಿ ಎರಡೂ ರಾಜ್ಯದ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಹೀಗೆ ಕಾವೇರಿ ಕಿಚ್ಚು ಚಾಮರಾಜನಗರದಲ್ಲಿ ಜೋರಾಗಿದ್ದು, ಬೆಳಗ್ಗೆಯಿಂದ ಹತ್ತಾರು ಸಂಘಟನೆಗಳು ನಿರಂತರವಾಗಿ ಧರಣಿ ನಡೆಸುತ್ತಿವೆ. ಮಧ್ಯಾಹ್ನವಾದರೂ ಸಾರಿಗೆ ಸಂಸ್ಥೆ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆಗಳು, ಅಂಗಡಿಗಳು, ಹೋಟೆಲ್‌ಗಳು ಕ್ಲೋಸ್‌ ಆಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+