ಬಂಡೀಪುರದಲ್ಲಿ ವೀಕ್ಷಕರನ್ನು ಪುಳಕಗೊಳಿಸಿದ ಪಕ್ಷಿಗಳು

ಚಾಮರಾಜನಗರ, ಫೆಬ್ರವರಿ 08; ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿದ್ದ ಪಕ್ಷಿ ಗಣತಿ ಯಶಸ್ವಿಯಾಗಿ ಕೊನೆಗೊಂಡಿದೆ. ಪಕ್ಷಿಗಣತಿಯಲ್ಲಿ ಪಾಲ್ಗೊಂಡಿದ್ದ 90ಕ್ಕೂ ಹೆಚ್ಚು ಪಕ್ಷಿಪ್ರೇಮಿಗಳು ಹಲವು ಅಪರೂಪದ ಪಕ್ಷಿಗಳನ್ನು ಗುರುತಿಸಿ ಖುಷಿ ಪಟ್ಟರು.

ಹಸಿರ ಕಾನನದ ಮರ, ಕೆರೆ ಹೀಗೆ ಹಲವು ಕಡೆಗಳಲ್ಲಿ ಕಾಣಿಸಿಕೊಂಡ ಪಕ್ಷಿಗಳು ತಮ್ಮ ವಿಭಿನ್ನ ಚೆಲುವು ಮತ್ತು ಕೂಗಾಟದ ಮೂಲಕ ಪಕ್ಷಿ ಗಣತಿಯಲ್ಲಿ ಪಾಲ್ಗೊಂಡ ಸ್ವಯಂ ಸೇವಕರನ್ನು ಪುಳಕಗೊಳಿಸಿದವು.

ಪಕ್ಷಿಗಳ ಗಣತಿ ಸಂದರ್ಭ ಅರಣ್ಯದಲ್ಲಿ ಹೆಜ್ಜೆ ಹಾಕಿದವರಿಗೆ ಕೆಲವು ಅಪರೂಪದ ಪಕ್ಷಿಗಳಾದ ಮಟ ಪಕ್ಷಿ (ರೂಫಸ್ ಟ್ರಿಪೀ), ಅಯೊರಾ, ಕಂಚುಗಾರ ಹಕ್ಕಿ, ಸ್ಟಾರ್ಲಿಂಗ್, ಬುಲ್ ಬುಲ್ ಪ್ಲೈ ಕ್ಯಾಚರ್, ಗ್ರೇ ಟಿಟ್ ಸೇರಿದಂತೆ 20ಕ್ಕೂ ಹೆಚ್ಚು ಪ್ರಬೇಧದ ಹಕ್ಕಿಗಳು ದರ್ಶನ ನೀಡಿದವು.

Bird Census In Bandipur Tiger Reserve Concludes

ತಮಗೆ ವೀಕ್ಷಿಸಲು ಸಿಕ್ಕ ಪಕ್ಷಿಗಳ ಫೋಟೋ ತೆಗೆದು, ಗಾತ್ರ, ಬಣ್ಣ, ಲಕ್ಷಣಗಳನ್ನು ಗುರುತಿಸಿ ಮಾಹಿತಿಗಳನ್ನು ತಜ್ಞರು ದಾಖಲು ಮಾಡಿಕೊಂಡಿದ್ದು, ನಂತರ ಅವುಗಳನ್ನು ವಿಶ್ಲೇಷಿಸಲಿದ್ದಾರೆ. ಹಿಂದೆ ಯಾವೆಲ್ಲ ಪ್ರಭೇದದ ಪಕ್ಷಿಗಳು ಕಂಡು ಬಂದಿವೆ ಎಂಬ ದಾಖಲೆಗಳನ್ನು ಕೂಡ ಪರಿಶೀಲಿಸಿ ದಾಖಲು ಮಾಡಲಿದ್ದಾರೆ.

ಇನ್ನು ಈ ಕುರಿತಂತೆ ಪಕ್ಷಿಗಳ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ವನ್ಯಜೀವಿ ಛಾಯಾಗ್ರಾಹಕ ಆರ್. ಕೆ. ಮಧು ಅವರು ಮಾತನಾಡಿ, "ಪಕ್ಷಿಗಳನ್ನು ಗುರುತಿಸುವುದು ಸುಲಭವಲ್ಲ. ಅವುಗಳ ಬಗ್ಗೆ ಅಧ್ಯಯನ ಮಾಡಿರುವವರಿಗೆ ಮಾತ್ರ ಸಾಧ್ಯ. ಕೆಲವು ಗುಬ್ಬಚ್ಚಿ ಗಾತ್ರದ ಹಕ್ಕಿಗಳಂತೆ ಇರುತ್ತದೆ. ಬಣ್ಣ ಲಕ್ಷಣಗಳು ಒಂದೇ ರೀತಿಯಲ್ಲಿ ಇರುತ್ತವೆ. ಆದರೆ, ಭಿನ್ನ ಪ್ರಭೇದಗಳಿಗೆ ಸೇರಿರುತ್ತವೆ" ಎಂದು ಮಾಹಿತಿ ನೀಡಿದರು

Bird Census In Bandipur Tiger Reserve Concludes

ಇದೇ ವೇಳೆ ಪಕ್ಷಿಗಳ ಗಣತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳು ಅಭಿನಂದನಾ ಪತ್ರಗಳನ್ನು ವಿತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+