ಬಂಡೀಪುರ: ಕಾಡ್ಗಿಚ್ಚಿನಿಂದ ಕಾಡಿನ ರಕ್ಷಣೆಗಾಗಿ ಬುಡಕಟ್ಟು ಜನರ ನೇಮಕ, ತಿಂಗಳ ಸಂಬಳ ಎಷ್ಟು ಗೊತ್ತಾ?
ಚಾಮರಾಜನಗರ, ಜನವರಿ, 11: ಕಾಡಿನ ಕಿರು ಅರಣ್ಯ ಉತ್ಪನ್ನಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಸೋಲಿಗರು ಮತ್ತು ಬುಡಕಟ್ಟು ಜನರಿಗೆ ಸದ್ಯ ಈಗ ಕಾಡ್ಗಿಚ್ಚಿನಿಂದ ಕಾಡನ್ನು ಪಾರು ಮಾಡುವ ಹೊಣೆ ಹೊತ್ತಿದ್ದಾರೆ.
ಸೋಲಿಗರ ಜೀವನಕ್ಕೆ ಬಂಡೀಪುರ ಅರಣ್ಯ ಇಲಾಖೆಯು ನೆರವಾಗಿದ್ದು, ನೂರಾರು ಸೋಲಿಗ ಸಮುದಾಯದ ಜನರಿಗೆ ಬಂಡೀಪುರ ಅರಣ್ಯ ಇಲಾಖೆ 5-6 ತಿಂಗಳ ನೌಕರಿ ನೀಡಿದೆ. ಬರಗಾಲದಲ್ಲಿ ಕೂಲಿಗೆ ಕಷ್ಟ ಪಡುತ್ತಿದ್ದ ಸೋಲಿಗರಿಗೆ ಇದೀಗ ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ವೀಕ್ಷಕರಾಗಿ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದು, ಬೆಂಕಿ ರೇಖೆ ನಿರ್ಮಾಣ, ಹಾಗೂ ಕಾಡ್ಗಿಚ್ಚು ಕಾವಲುಗಾರರಾಗಿ ಸೋಲಿಗರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಂಬಳದ ವಿವರ: ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ 500ಕ್ಕೂ ಹೆಚ್ಚು ಸೋಲಿಗರಿಗೆ ದಿನಗೂಲಿ ಕೆಲಸ ನೀಡಿದ್ದು, ತಿಂಗಳಿಗೆ ಆಜುಮಾಸು 16 ಸಾವಿರ ವೇತನ ಸಿಗುತ್ತಿದೆ. ಈ ಕುರಿತು ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, ಶೇಕಡಾ 100ರಷ್ಟು ಕಾಡ್ಗಿಚ್ಚು ಕಾವಲುಗಾರರನ್ನಾಗಿ ಸ್ಥಳೀಯ ಆದಿವಾಸಿಗಳನ್ನು ನೇಮಕ ಮಾಡಲಾಗಿದೆ ಎಂದರು.
6 ತಿಂಗಳವರೆಗೂ ಉದ್ಯೋಗ: ಡಿಸೆಂಬರ್‌ನಲ್ಲಿ ಬೆಂಕಿ ರೇಖೆ ನಿರ್ಮಾಣ ಮಾಡಲು ನೇಮಕಗೊಂಡ ಬಳಿಕ ಅವರನ್ನೇ ಕಾಡ್ಗಿಚ್ಚು ಕಾವಲುಗಾರರನ್ನಾಗಿ ಮುಂದುವರೆಸಲಾಗುತ್ತದೆ. ಕನಿಷ್ಠ 6 ತಿಂಗಳುಗಳ ತನಕ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮಾಡಲಿದ್ದು, 16 ಸಾವಿರ ಸಂಬಳ ಸಿಗಲಿದೆ. ಬಹಳಷ್ಟು ಮಂದಿ ಬಂಡೀಪುರ ಅರಣ್ಯ ಇಲಾಖೆ ಮೇಲೆ ಅವಲಂಬಿತರಾಗಿದ್ದಾರೆ ಎಂದು ಹೇಳಿದರು.
ಮಳೆಗಾಲ ಆರಂಭವಾಗಿ ಉತ್ತಮ ಮಳೆ ಬರುವವರೆಗೂ ಕೂಡ ಇವರು ಕಾಡ್ಗಿಚ್ಚು ಕಾವಲುಗಾರರಾಗಿ ಕಾರ್ಯ ನಿರ್ವಹಿಸಲಿದ್ದ ಬೆಂಕಿಯಿಂದ ಕಾಡನ್ನು ಪಾರು ಮಾಡಲು ಕಾಡಿನ ಮಕ್ಕಳು ಹೊಣೆ ಹೊತ್ತಿದ್ದಾರೆ.












Click it and Unblock the Notifications