ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುರಾಣಿಪೋಡಿನ ವಸತಿ ಶಾಲೆ ಮಕ್ಕಳ್ಳೊಂದಿಗೆ ಆಟ ಆಡಿದ ಮರಿ ಆನೆ; ವಿಡಿಯೋ ವೈರಲ್‌

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ: ತಾಯಿಯಿಂದ ತಪ್ಪಿಸಿಕೊಂಡ ಆನೆಯೊಂದು ಯಳಂದೂರು ತಾಲೂಕಿನ ಪುರಾಣಿಪೋಡಿನ ವಸತಿ ಶಾಲೆಗೆ ಬಂದು ಮಕ್ಕಳೊಟ್ಟಿಗೆ ಆಟ ಆಡಿದ್ದು ಗಮನ ಸೆಳೆದಿದೆ.

ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಮರಿ ಆನೆಯೊಂದು ದಾರಿತಪ್ಪಿ ಪುರಾಣಿಪೋಡಿನ ವಸತಿ ಶಾಲೆಗೆ ಬಂದಿದೆ‌. ಆನೆ ಕಂಡಂದ್ದೇ ತಡ ಖುಷಿಗೊಂಡ ಕಾಡಿನ ಮಕ್ಕಳು ಆನೆಯೊಟ್ಟಿಗೆ ಆಡಿ ನಲಿದಾಡಿದ್ದಾರೆ. ಮನುಷ್ಯರನ್ನೇ ಕಾಣದ ಮರಿ ಆನೆ ಹೊಸ ಸ್ನೇಹಿತರೊಟ್ಟಿಗೆ ನಲಿದಿದ್ದು, ಮಕ್ಕಳು ಕೊಟ್ಟ ಹಾಲನ್ನು ಕುಡಿದು ಅವರೊಂದಿಗೆ ಆಟ ಆಡಿಗೆ. ಬಾಳೆಹಣ್ಣು ತಿನ್ನಿಸಿ 'ಆನೆ ಬಂತೊಂದಾನೆ, ಯಾವೂರ ಆನೆ' ಎಂದು ಹಾಡಿ ಮಕ್ಕಳು ಕುಣಿದು ಕುಪ್ಪಳಿಸಿರುವುದು ವೀಡಿಯೋದಲ್ಲಿ ಸೆರೆ ಆಗಿದೆ.

ಮೈಸೂರು ದಸರಾ ಗಜಪಡೆಯ ಹಿರಿಯಣ್ಣ ಅರ್ಜು‍ನನ ಬಗ್ಗೆ ನಿಮಗೆಷ್ಟು ಗೊತ್ತು?ಮೈಸೂರು ದಸರಾ ಗಜಪಡೆಯ ಹಿರಿಯಣ್ಣ ಅರ್ಜು‍ನನ ಬಗ್ಗೆ ನಿಮಗೆಷ್ಟು ಗೊತ್ತು?

ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಯಳಂದೂರು ವಲಯದ ಸಿಬ್ಬಂದಿ ಬಂದು ಗಸ್ತು ತಿರುಗಿ ತಾಯಿ ಆನೆ ಘೀಳಿಡುತ್ತಿದ್ದನ್ನು ಗಮನಿಸಿ ಈರಣ್ಣ ಕಟ್ಟೆ ಪೋಡಿನ ಬಳಿ ಮರಿ ಆನೆ ತಾಯಿಯನ್ನು ಸೇರುವಂತೆ ಮಾಡಿದ್ದಾರೆ.

baby elephant played with Puranipodi school children; video viral

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷದ ನಡುವೆ, ಬಿಳಿಗಿರಿರಂಗನ ಬೆಟ್ಟ ಸಮೀಪದ ಚಾಮರಾಜನಗರದ ಪುರಾಣಿಪೋಡು ಗ್ರಾಮದಲ್ಲಿ ಆರು ತಿಂಗಳ ಗಂಡು ಮರಿ ಆನೆಯೊಂದು ಬುಡಕಟ್ಟು ಜನಾಂಗದ ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸ್ನೇಹ ಬೆಳೆಸಿದ ಘಟನೆ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಆನೆ ಮರಿ ತನ್ನ ತಾಯಿಯಿಂದ ಬೇರ್ಪಟ್ಟು ಮಾನವ ವಾಸಕ್ಕೆ ಹೊಂದಿಕೊಂಡಿರಬಹುದು. ಕಾಡು ಪ್ರಾಣಿಯು ಮನುಷ್ಯರೊಂದಿಗೆ ಸ್ನೇಹ ಬೆಳೆಸುವುದು ಹಾಗೂ ಅವರಿಂದ ಕಾಳಜಿ ಬಯಸುವುದು ತಮಾಷೆ ವಿಷಯವಲ್ಲ.

ಶಾಲೆಯ ಮಕ್ಕಳೊಂದಿಗೆ ಆತವಾಡಿದ ಮರಿ ಆನೆ
ಯಳಂದೂರು ತಾಲೂಕಿನ ಬುಡಕಟ್ಟು ಜನಾಂಗದವರ ವ್ಯಾಪ್ತಿಯ ಗ್ರಾಮವೊಂದರ ಶಾಲಾ ಪ್ರದೇಶದಲ್ಲಿ ಈ ಆನೆಯ ಮರಿ ಓಡಾಡುತ್ತಿರುವುದು ಪತ್ತೆ ಆಗಿತ್ತು. ಇದರೊಂದಿಗೆ ಮಕ್ಕಳು ಮತ್ತು ವಯಸ್ಕರು ಆಟವಾಡುತ್ತಾ ಅದಕ್ಕೆ ತಿಂಡಿ ತಿನಿಸುಗಳನ್ನು ತಿನ್ನಿಸುತ್ತಿರುವ ದೃಶ್ಯ ಕಂಡುಬಂದಿದೆ. ಇದಕ್ಕೆ ಬಾಳೆಹಣ್ಣು ಮತ್ತು ಇತರ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆನೆ ಮರಿ ತುಂಬಾ ಸಂತೋಷವಾಗಿದ್ದರೂ, ಅಂತಹ ಸಾಮೀಪ್ಯ ಅಪರೂಪ ಎಂದು ಚಾಮರಾಜನಗರದ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದರು. ತನ್ನ ತಾಯಿ ಆನೆಯೊಂದಿಗೆ ಸೇರಿಸಲು ಪ್ರಯತ್ನಿಸುತ್ತಿರುವ ಅರಣ್ಯಾಧಿಕಾರಿಗಳು ಆನೆಯ ಮರಿಯನ್ನು ಕರೆದೊಯ್ದಿದ್ದಾರೆ.

ಗಜಪಡೆ ಅರಮನೆಗೆ ಪ್ರವೇಶ... ಶ್ರೀರಾಮ, ಸುಗ್ರೀವ, ಪಾರ್ಥಸಾರಥಿಗೆ ಇದು ಮೊದಲ ದಸರಾಗಜಪಡೆ ಅರಮನೆಗೆ ಪ್ರವೇಶ... ಶ್ರೀರಾಮ, ಸುಗ್ರೀವ, ಪಾರ್ಥಸಾರಥಿಗೆ ಇದು ಮೊದಲ ದಸರಾ

ಮಲೆನಾಡು ಭಾಗಗಳಲ್ಲಿ ಆನೆಗಳ ಹಾವಳಿ
ಇನ್ನು ಇತ್ತೀಚೆಗೆ ಮಲೆನಾಡಿನ ಭಾಗಗಳಲ್ಲಿ ಆನೆಗಳು ಗೀಳಿಗಿಡುವುದನ್ನು ನೋಡಿದ್ದೇವೆ. ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿ ರಂಪಾಟಕ್ಕಿಡುತ್ತಿದ್ದವು. ಕೆಲವು ಕಡೆಗಳಲ್ಲಿ ದಾಳಿ ಮಾಡಿ ಮನುಷ್ಯರ ಜೀವವನ್ನೇ ಬಲಿ ಪಡೆದುಕೊಂಡಿವೆ. ಇದಕ್ಕೆ ಬೇಸತ್ತ ಜನರು ಅರಣ್ಯ ಇಲಾಖೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ನೋಡಿದ್ದೇವೆ. ಆನೆಗಳ ದಾಳಿಯಿಂದ ಅರಣ್ಯ ಇಲಾಖೆ ಹಾಗೂ ಜಮೀನುದಾರರ ನಡುವೆ ಸಂಘರ್ಷಗಳು ಸಾಮಾನ್ಯ ಆಗಿಬಿಟ್ಟಿದೆ. ಇದರಲ್ಲಿಯೂ ಪುಟ್ಟ ಮರಿ ಆನೆಯೊಂದು ದಾರಿ ತಪ್ಪಿ ಚಾಮರಾಜರಾನಗರದ ಶಾಲೆಯೊಂದಕ್ಕೆ ಆಗಮಿಸಿರುವುದು ವಿಶೇಷ ಆಗಿದೆ. ಆ ಮರಿ ಆನೆ ಶಾಲೆಗೆ ಸುಮ್ಮನೆ ಭೇಟಿ ಕೊಟ್ಟಿರಲಿಲ್ಲ, ಬದಲಾಗಿ ಮಕ್ಕಳೊಂದಿಗೆ ಆಟ ಆಡಿ ನಲಿದಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗಿದೆ. ಈ ಮರಿ ಆನೆಯೊಂದಿ ಮಕ್ಕಳು ಕೂಡ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೇ ತಾವು ತಂದಿದ್ದ ತಿಂಡಿಗಳನ್ನು ಮರಿ ಗಜರಾಜನಿಗೆ ಕೊಟ್ಟು ಆನಂದಿಸಿರುವುದು ಗಮನ ಸೆಳೆದಿದೆ.

baby elephant played with Puranipodi school children; video viral

ಹೀಗೊಂದು ಅಪರೂಪದ ದೃಶ್ಯ ಕಂಡು ಬಂದಿದ್ದು, ಯಳಂದೂರು ತಾಲೂಕಿನ ಪುರಾಣಿಪೋಡಿನ ವಸತಿ ಶಾಲೆಯಲ್ಲಿ. ಗಜರಾಜ ಮಕ್ಕಳ ಜೊತೆಗೆ ದಿನವಿಡೀ ಆಟವಾಡಿದ್ದು ಭಾರಿ ಸದ್ದು ಮಾಡುತ್ತಿದೆ. ಈ ಅಪರೂಪದ ದೃಶ್ಯಕ್ಕೆ ಮನಸೋತ ನೆಟ್ಟಿಗರು ಸಂತೋಷವನ್ನು ಹೊರಹಾಕುತ್ತಲೇ ಇದ್ದಾರೆ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮರಿ ಆನೆಯನ್ನು ತಾಯಿ ಬಳಿ ಸೇರಿಸುವಲ್ಲಿ ಯಶಸ್ವಿ ಆಗಿದ್ದಾರೆ.

English summary
baby elephant played with children of residential school in Puranipodi of Yalandur taluk, attracted attention. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X