ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ; ಯಾರಾದರೂ ನಿಲ್ಲಬಹುದು, ಪಕ್ಷದ ತೀರ್ಮಾನಕ್ಕೆ ಬದ್ಧ; ಡಿಕೆಶಿ

ಚಾಮರಾಜನಗರ, ಸೆಪ್ಟೆಂಬರ್ 14: ಕೆಪಿಸಿಸಿ ಚುನಾವಣೆ ಸಂಬಂಧ ಶೀಘ್ರವೇ ಸದಸ್ಯರ ಸಭೆ ಕರೆಯಲಿದ್ದು ಪಿಆರ್‌ಒ ಆಗಿರುವ ತಮಿಳಿನಾಡಿನವರಾದ ನಾಸಿಫ್ ಸೆಪ್ಟೆಂಬರ್‌ 16 ರಂದು ಸಭೆ ನಡೆಸಲಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಸದಸ್ಯರೊಂದಿಗೆ ಮಾತನಾಡಲಿದ್ದಾರೆ. ಯಾರಾಬೇಕಾದರೂ ಚುನಾವಣೆಗೆ ನಿಲ್ಲಬಹುದು, ಈ ತಿಂಗಳ 20ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಭಾರತ್‌ ಜೋಡೋ ಕಾರ್ಯಕ್ರಮದ ಪರಿಶೀಲನೆಗೆ ಆಗಮಿಸಿದ್ದ ವೇಳೆ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನೀವೇ ಮುಂದುವರಿಯಲು ಬಯಸುತ್ತೀರಾ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಚುನಾವಣೆಗೆ ಯಾರು ಬೇಕಾದರೂ ನಿಲ್ಲಬವುದು, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ತಾನು ಬದ್ಧ. ಕಳೆದ ಮೂರು ವರ್ಷಗಳಲ್ಲಿ ತನ್ನ ಶಕ್ತಿ ಮೀರಿ ಪಕ್ಷದ ಕೆಲಸ ಮಾಡಿದ್ದೇನೆ. ಗೆದ್ದಿರುವ ಸದಸ್ಯರು ಯಾರನ್ನು ಬಯಸುತ್ತಾರೋ ಅವರೇ ತೀರ್ಮಾನ ಮಾಡಿಕೊಳ್ಳುತ್ತಾರೆ. ನಂತರ ಎಐಸಿಸಿ ಚುನಾವಣೆ ನಡೆಯಬೇಕಿದೆ, ಈ ತಿಂಗಳೊಳಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಕಲಾಪದ ಬಗ್ಗೆ ಮಾತನಾಡಿ, ಇವಾಗ ನಡೆಯುತ್ತಿರುವುದು ಒಳ್ಳೆಯದು, ನಾವು ಅದನ್ನೇ ಬಯಸಿದ್ದೆವು. ಅಲ್ಲಿ ಚರ್ಚೆ ಮಾಡಲು ಬೇರೆಯವರಿಗೆ ವಹಿಸಿ ಬಂದಿದ್ದೇವೆ. ನಾನು ಪಕ್ಷದ ಅಧ್ಯಕ್ಷನಾಗಿರುವುದರಿಂದ ಭಾರತ್‌ ಜೋಡೋ ಕಾರ್ಯಕ್ರಮದ ಜವಾಬ್ದಾರಿ ನನ್ನ ಮೇಲಿದೆ ಅದಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದರು.

Anyone can compete for KPCC President Election: DK Shivakumar

ನಳಿನ್ ಕುಮಾರ್ ಸೇರಿ ಬಿಜೆಪಿಯವರು ಮಳೆ ಅವಾಂತರ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕಾಂಗ್ರೆಸ್ ಕಾರಣ ಎನ್ನುತ್ತಿದ್ದಾರೆ ಎಂದು ಕೇಳಿದ್ದಕ್ಕೆ, ಕಳೆದ ಮೂರು ವರ್ಷಗಳಿಂದ ಏನು ಮಾಡುತ್ತಿದ್ದರು, ಅವರ ಬಾಯಿ ಏನಾಗಿತ್ತು? ಅವರ ಪೆನ್ನು- ಕಣ್ಣಿಗೆ ಏನಾಗಿತ್ತು? ಮೂರು ವರ್ಷದಿಂದ ಏನು ಮಾಡುತ್ತಿದ್ದರು, ತಪ್ಪು ಮಾಡಿದ್ರೆ ಹಗ್ಗ ಹಿಡಿದು ಗಲ್ಲಿಗೆ ಆಗಬೇಕಿತ್ತು. ಆಗ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದರು.

ಭಾರತ್ ಜೋಡೋ ಯಾತ್ರೆಗೆ ಅತ್ಯುತ್ತಮ ಬೆಂಬಲ

ಇಡೀ ದೇಶಕ್ಕೆ ಇದು ದೊಡ್ಡ ಐಕ್ಯತಾ ಯಾತ್ರೆಯಾಗಿದೆ, ಚಾಮನರಾಜನಗರದ ಗುಂಡ್ಲುಪೇಟೆಯಿಂದ ಕೇರಳಕ್ಕೆ ಪ್ರವಾಸ ಹೋಗಲಿದೆ. ನಾನು ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಭೇಟಿ ಕೊಟ್ಟು, ಇದರ ಉದ್ದೇಶ ತಿಳಿಸುತ್ತಿದ್ದೇನೆ. ವಿಧಾನಸಭೆ ಕಲಾಪ ನಡೆಯುತ್ತಿದ್ದರೂ ಸಹಾ, ವಿಪಕ್ಷ ನಾಯಕರಿಗೆ ಜವಾಬ್ದಾರಿ ವಹಿಸಿ ನಾನು ಇಲ್ಲಿಗೆ ಬಂದಿದ್ದೇನೆ.

ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆಗೆ ಜನ ಭಾರಿ ಬೆಂಬಲ ನೀಡುತ್ತಿದ್ದಾರೆ. ಆ ಯಾತ್ರೆಗೆ ಪಕ್ಷಾತೀತವಾಗಿ ಭಾಗವಹಿಸಲು ಅವಕಾಶ ನೀಡಿದ್ದೇವೆ. ಮಹಿಳಾ ಸಂಘಟನೆ, ಯುವ ಸಂಘಟನೆ ಹಾಗೂ ರೈತ ಸಂಘಟನೆ ಬೆಂಬಲ ನೀಡುತ್ತಿದ್ದಾರೆ. ಅವರೆಲ್ಲಾ ರಾಹುಲ್‌ ಗಾಂಧಿ ಜೊತೆಗೆ ಹೆಜ್ಜೆ ಹಾಕಲಿದ್ದಾರೆ. ಪ್ರತಿ ದಿನ ಇಬ್ಬರು ಶಾಸಕರು ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+