ಹನೂರು: ಆನೆಗೆ ಅಲರ್ಜಿಯಾದ್ರೆ.. ಪ್ರವಾಸಿಗರಿಗೆ ಫೋಟೋ, ವಿಡಿಯೋ ಚಿಂತೆ

ಚಾಮರಾಜನಗರ, ಸೆಪ್ಟೆಂಬರ್‌, 23: ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಣಿಗಳು ಹಾವಳಿ ಮಾಡುತ್ತಲೇ ಇರುತ್ತದೆ. ಇನ್ನು ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಇದೀಹ ಪಾಪಾ ಆನೆಯೊಂದಕ್ಕೆ ಮೈ ತುಂಬಾ ಕಡಿತ ಉಂಟಾಗಿ ಹಿತವೆನಿಸುವಷ್ಟು ತುರಿಸಿಕೊಂಡು ಪ್ರವಾಸಿಗರಿಗೆ ಮುದ ನೀಡಿದ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಫಾರಿಯಲ್ಲಿ ನಡೆದಿದೆ.

ಸಫಾರಿ ನಡೆಸುವ ವೇಳೆ ಆನೆ ಕಂಡ ಪ್ರವಾಸಿಗರು ಜೀಪ್ ನಿಲ್ಲಿಸಿದ್ದಾರೆ. ಬಳಿಕ, ಪಾಪ ಆನೆಗೆ ಮುಖ, ಕಾಲು, ಹೊಟ್ಟೆ ಹೀಗೆ ಮೈ ತುಂಬಾ ಕಡಿತ ಉಂಟಾಗಿದೆ. ಈ ವೇಳೆ ಆನೆ ಮರವೊಂದರ ಬುಡಕ್ಕೆ ಮುಖವಿಟ್ಟು ಉಜ್ಜಿಕೊಂಡಿದೆ‌‌. ಇಷ್ಟು ಸಾಲದೆಂಬಂತೆ ಮಲಗಿಯೂ ತುರಿಸಿಕೊಂಡು ಮೈ ಮೇಲೆ ಮಣ್ಣು ಸುರುವಿಕೊಂಡು ರಿಲಾಕ್ಸ್ ಆಗಿದೆ. ಇನ್ನು ಹೀಗೆ ತುರಿಸಿಕೊಳ್ಳುತ್ತಿದ್ದ ಆನೆ ಕಂಡ ಸಫಾರಿಗರು ಆ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದ ಘಟನೆ ನಟೆದಿದೆ.

Allergy to elephant Tourists captured Photo and video in PG Palya Safari

ಇದನ್ನು ಗಮನಿಸಿದ್ರೆ, ಅಜ್ಜಿಗೆ ಅರಿವೆ ಚಿಂತೆಯಾದ್ರೆ, ಮಗಳಿಗೆ ಅದರ ಚಿಂತೆ ಎನ್ನುವಂತಾಗಿದೆ ಪ್ರವಾಸಿಗರ ಪಾಡು. ಆನೆ ಮೊದ್ಲೆ ಏನೋ ಅಲರ್ಜಿ ರೀತಿಯಾಗಿ ಅದರಿಂದ ಸುದಾರಿಸಿಕೊಳ್ಳಲು ಮರ, ಮಣ್ಣಿಗೆ ತನ್ನ ಮೈಯನ್ನು ಉಜ್ಜಿಕೊಂಡಿದೆ. ಇದನ್ನು ಕಂಡ ಪ್ರವಾಸಿಗರು ಸುಮ್ಮನಿರಲಾರದೇ ಕ್ಯಾಮೆರಾಗಳಲ್ಲಿ ಈ ದೃಶ್ಯವನ್ನು ಕ್ಲಿಕಿಸಿಕೊಂಡಿದ್ದಾರೆ. ಅಷ್ಟು ಸಾಲದೆಂಬಂತೆ ಈ ದೃಶ್ಯಗಳನ್ನು ಸಾಮಾಜಿಕ ಜಾಲತಣಗಳಲ್ಲಿ ಹರಿಬಿಡುವ ಕೆಲಸವನ್ನು ಮಾಡಿದ್ದಾರೆ.

ಯಾರಾದರೂ ಕಷ್ಟದಲ್ಲಿದ್ದರೆ, ಅವರಿಗೆ ಸಹಾರ ಮಾಡಬೇಕು. ಇಲ್ಲ ಸುಮ್ಮನಿದ್ದುಬಿಡಬೇಕು. ಇವೆರಡನ್ನು ಬಿಟ್ಟು ಕಷ್ಟವನ್ನು ನೋಡಿ ಸುಖ ಪಡುವುದಲ್ಲದೆ, ಹೀಯಾಳಿಸುವ ಕೆಲಸ ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಗಳು ಸಾಮಾನ್ಯವಾಗಿ ಬಂದೇ ಬರುತ್ತದೆ.

ರಸ್ತೆಗಿಳಿದು ಗಜರಾಜ ದಾಂಧಲೆ: ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಆಗಾಗ ಪ್ರಾಣಿಗಳು ಹಾವಳಿ ಮಾಡುತ್ತಲೇ ಇರುತ್ತವೆ. ಹಾಗೆಯೇ ಇದೀಗ ಕಾಡಾನೆಯೊಂದು ಆಹಾರ ಅರಸಿ ರಸ್ತೆಗಿಳಿದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ಜಿಲ್ಲೆಯ ಗಡಿಭಾಗವಾದ ತಮಿಳುನಾಡಿನ‌ ತಾಳವಾಡಿ ಸಮೀಪ ಇತ್ತೀಚೆಗಷ್ಟೇ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದಿಢೀರ್‌ ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ ಕಬ್ಬಿನ ಲಾರಿ ಅಡ್ಡಗಟ್ಟಿದೆ. ಇನ್ನು ಆನೆ ಕಂಡು ಹೌಹಾರಿರುದ ವಾಹನ ಸವಾರರು ರಸ್ತೆಯ ಎರಡೂ ಬದಿಗಳಲ್ಲೂ ವಾಹನ ನಿಲ್ಲಿಸಿ ಆನೆ ಪಕ್ಕಕ್ಕೆ ಸರಿಯುವ ತನಕ ಕಾದಿದ್ದು, ಅರ್ಧ ತಾಸಿಗಿಂತಲೂ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಕಬ್ಬಿನ ಲಾರಿಗೆ ಟಾರ್ಪಾಲ್ ಸುತ್ತಿದ್ದರೂ ಬಿಡದ ಕಾಡಾನೆ ಟಾರ್ಪಾಲ್ ಕಿತ್ತು ಬಿಸಾಡಿ ಕಬ್ಬಿನ ಜಲ್ಲೆಗಳಲ್ಲಿ ಸವಿದಿದೆ. ಇನ್ನು ಆನೆ ಸಮೀಪವೇ ಇದ್ದರೂ ಬೈಕ್ ಸವಾರರು ಆನೆ ಬಳಿಯೇ ನಿಂತು ಹುಚ್ಚಾಟ ಮೆರೆದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ತುಂಬಿಕೊಂಡು ಹೋಗುವ ಲಾರಿಗಳೇ ಕಾಡಾನೆಯ ಟಾರ್ಗೆಟ್ ಆಗಿದ್ದು, ಆಗಾಗ್ಗೆ ರಸ್ತೆಗಿಳಿದು ಕಬ್ಬು ವಸೂಲಿ ಮಾಡಲಿದೆ. ಆನೆಗೆ ಊಟವಾದರೇ ವಾಹನ ಸವಾರರಿಗೆ ಪ್ರಾಣ ಸಂಕಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+