ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾವಿಕೆರೆ ಹಾಡಿ ಯುವಕರ ಮೇಲೆ ಅರಣ್ಯ ಸಿಬ್ಬಂದಿ ಹಲ್ಲೆ ಆರೋಪ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್ 28; ಅರಣ್ಯದಲ್ಲಿ ಜೇನು ಕೀಳಲು ಹೋದ ಹಾಡಿ ಯುವಕರ ಮೇಲೆ ಅರಣ್ಯ ಸಿಬ್ಬಂದಿ ಅಮಾನುಷವಾಗಿ ಹಲ್ಲೆ ಮಾಡಿರುವ ಆರೋಪ ಎಚ್.ಡಿ.ಕೋಟೆ ತಾಲೂಕಿನ ಹೆಡಿಯಾಲ ಅರಣ್ಯ ಪ್ರದೇಶದ ಬಾವಿಕೆರೆ ಹಾಡಿಯಲ್ಲಿ ಕೇಳಿ ಬಂದಿದೆ.

ಶುಕ್ರವಾರ ಸಂಜೆ ಹೆಡಿಯಾಲ ಅರಣ್ಯ ಪ್ರದೇಶದ ಬಾವಿಕೆರೆ ಹಾಡಿಯ ಜೇನು ಕುರುಬ ಜನಾಂಗದ 8 ಜನ ಯುವಕರು ಜೇನು ಕೀಳಲು ಅರಣ್ಯಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಜೇನು ಕೀಳುವಾಗ ಬೆಂಕಿ ಹಾಕಿದ್ದು, ಈ ಹೊಗೆಯನ್ನು ಕಂಡ ಅರಣ್ಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಆಗ ಅಧಿಕಾರಿಗಳನ್ನು ಕಂಡ ಯುವಕರು ಕಾಡಿನಲ್ಲಿ ಅವಿತುಕೊಂಡಿದ್ದರಿಂದ ಅವರ ಮೂರು ಬೈಕ್​​ಗಳನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ ಇಲಾಖೆಗೆ ಮರಳಿದ್ದಾರೆ.

ಬೆಂಗಳೂರಿನ ಲೇಡಿ ರೌಡಿ ಶೀಟರ್ ಆಪ್ತರಿಂದ ಮೈಸೂರು ಯುವಕನಿಗೆ ಹಲ್ಲೆ: 80 ಹೊಲಿಗೆಬೆಂಗಳೂರಿನ ಲೇಡಿ ರೌಡಿ ಶೀಟರ್ ಆಪ್ತರಿಂದ ಮೈಸೂರು ಯುವಕನಿಗೆ ಹಲ್ಲೆ: 80 ಹೊಲಿಗೆ

ಆದರೆ, ತಮ್ಮ ಬೈಕ್​ ಹಿಂಪಡೆಯಲು ಅರಣ್ಯ ಇಲಾಖೆಗೆ ಹೋದ ಕುಮಾರ, ಸುರೇಶ, ರಾಮ, ಮಾದ, ಗಣೇಶ, ಕುಮಾರ ಹಾಗೂ ಇಬ್ಬರು ಅಪ್ರಾಪ್ತರನ್ನು ಇಲಾಖೆಯ ಸಿಬ್ಬಂದಿ ಅಮಾನುಷವಾಗಿ ಥಳಿಸಿದ್ದು, ಅದರಲ್ಲಿ 4 ಜನರನ್ನು ತಮ್ಮ ವಶದಲ್ಲೇ ಉಳಿಸಿಕೊಂಡು ಉಳಿದ 4 ಜನರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

Chamarajanagar: Allegation Of Assault On Hadi Youth By Forest Department Staff

ಎಸ್ಪಿ ಭೇಟಿಯಾದ ನೊಂದವರು: ಹೀಗೆ ಅರಣ್ಯ ಸಿಬ್ಬಂದಿಯಿಂದ ಅಮಾನುಷವಾಗಿ ಹಲ್ಲೆಗೊಳಗಾದ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ನಂತರ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರನ್ನು ಭೇಟಿ ಮಾಡಿ ಘಟನೆಯನ್ನು ವಿವರಿಸಿದ್ದಾರೆ. ಇಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಎಸ್ಪಿ ತಿಳಿಸಿದ್ದಾರೆ.

ಬಿಮ್ಸ್ ವೈದ್ಯ‌ನ ಮೇಲೆ ತಡರಾತ್ರಿ ಹಲ್ಲೆ; ವೈದ್ಯಕೀಯ ಸಿಬ್ಬಂದಿಯಿಂದ ಪ್ರತಿಭಟನೆಬಿಮ್ಸ್ ವೈದ್ಯ‌ನ ಮೇಲೆ ತಡರಾತ್ರಿ ಹಲ್ಲೆ; ವೈದ್ಯಕೀಯ ಸಿಬ್ಬಂದಿಯಿಂದ ಪ್ರತಿಭಟನೆ

ಘಟನೆ ಬಗ್ಗೆ ಹಲ್ಲೆಗೊಳಗಾದ ರಾಜು ಹೇಳಿದ್ದೇನು?: ನಾವು ರಾತ್ರಿ ಸಮಯ ಅರಣ್ಯಕ್ಕೆ ಜೇನು ಕೀಳಲು ಹೋದಾಗ, ಅರಣ್ಯ ಇಲಾಖೆ ಅಧಿಕಾರಿಗಳು ಬಂದು ನಮ್ಮ ಬೈಕ್​​ಗಳನ್ನು ಕಿತ್ತುಕೊಂಡು ಹೋದರು. ಬೆಳಗ್ಗೆ ಬೈಕ್ ತೆಗೆದುಕೊಳ್ಳಲು ಹೋದಾಗ ನಮ್ಮನ್ನು ಮನಸೋ ಇಚ್ಛೆ ಥಳಿಸಿದರು. ಗಂಧ ಕದಿಯಲು ಬಂದಿರುವುದಾಗಿ ಒಪ್ಪಿಕೊಳ್ಳುವಂತೆ ಕಿರುಕುಳ ನೀಡಿದರು ಎಂದು ಆರೋಪಿಸಿದ್ದಾನೆ.

English summary
Allegation on forest department staff assault on hadi youths when they went to collect honey at bavikere hadi of hediyala forest area in chamarajanagar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X