ಚಾಮರಾಜನಗರಕ್ಕೆ ಸಿದ್ದರಾಮಯ್ಯ ಆಗಮನ, ಅಧಿಕಾರಿಗಳಲ್ಲಿ ನಡುಕ.!
ಕಾರ್ಯಕ್ರಮ ಖಾಸಗಿಯಾದರೂ ಮೈಸೂರಿನಲ್ಲೆ ವಾಸ್ತವ್ಯ ಹೂಡಿರುವ ಎಷ್ಟೋ ಅಧಿಕಾರಿಗಳು ರೈಲಿನಲ್ಲಿ ಮುಂಜಾನೆಯೇ ಚಾಮರಾಜನಗರಕ್ಕೆ ಬಂದಿಳಿದಿದ್ದಾರೆ. ಅವರ ಭೇಟಿಯಿಂದ ಅಧಿಕಾರಿಗಳಲ್ಲಿ ನಡುಕ ಉಂಟಾಗಿದೆ .
ಚಾಮರಾಜನಗರ, ಮೇ 14: ಖಾಸಗೀ ಕಾರ್ಯಕ್ರಮ ನಿಮಿತ್ತ ಮುಖ್ಯಮಂತ್ರಿ ಸಿದ್ದಾರಾಮಯ್ಯ ಇಂದು ಚಾಮರಾಜನಗರ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅವರ ಭೇಟಿಯಿಂದ ಅಧಿಕಾರಿಗಳಲ್ಲಿ ನಡುಕ ಉಂಟಾಗಿದೆ .
ಜೆ.ಎಸ್.ಎಸ್ ಆಸ್ಪತ್ರೆ ಹಾಗೂ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವದ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.

ಕಾರ್ಯಕ್ರಮ ಖಾಸಗಿಯಾದರೂ ಮೈಸೂರಿನಲ್ಲೆ ವಾಸ್ತವ್ಯ ಹೂಡಿರುವ ಎಷ್ಟೋ ಅಧಿಕಾರಿಗಳು ರೈಲಿನಲ್ಲಿ ಮುಂಜಾನೆಯೇ ಚಾಮರಾಜನಗರಕ್ಕೆ ಬಂದಿಳಿದಿದ್ದಾರೆ. ಅಪ್ಪಿತಪ್ಪಿ ಯಾವುದಾದರೂ ಇಲಾಖೆಯಲ್ಲಿನ ಮಾಹಿತಿ ಕೇಳಿದರೆ ಕ್ಷಣ ಮಾತ್ರದಲ್ಲಿ ಕೊಡುವಂತಾಗಬೇಕು ಇಲ್ಲವಾದರೆ ಅಧಿಕಾರಿಯನ್ನೇ ಅಮಾನತು ಮಾಡುವಂತೆ ಸ್ಥಳದಲ್ಲೆ ಆದೇಶ ನೀಡಿ ಬಿಡುತ್ತಾರೆ ಎಂಬ ಭಯದಿಂದ ಓಡೋಡಿ ಬಂದಿದ್ದಾರೆ.

ಇಂದು ರೈಲು ನಿಲ್ದಾಣಕ್ಕೆ ಭೇಟಿ ನೀಡಿದರೆ ಸಾಲುಗಟ್ಟಿ ನಿಂತ ಸರ್ಕಾರಿ ವಾಹನಗಳು ಕಂಡು ಬಂತು. ಆಗ ಅಧಿಕಾರಗಳ ಈ ಕಳ್ಳಾಟ ಹೊರಬಂದಿದೆ.












Click it and Unblock the Notifications