ಚಾಮರಾಜನಗರ ಜನರ ಬಗ್ಗೆ ನಟ ಡಾಲಿ ಧನಂಜಯ್, ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಹೀಗೆ ಹೇಳ್ಬಿಟ್ರು
Chamarajanagar Dasara 2024: ಈಗಾಗಲೇ ಮೈಸೂರು ದಸರಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ. ಇನ್ನು ಚಾಮರಾಜನಗರ ಜಿಲ್ಲಾ ದಸರಾಗೆ ಬುಧವಾರ ಸಂಜೆ ವರ್ಣರಂಜಿತ ತೆರೆ ಬಿದ್ದಿತು. ನಟ ರಾಕ್ಷಸ ಡಾಲಿ ಧನಂಜಯ, ಬಿಗ್ ಬಾಸ್ -10ರ ವಿನ್ನರ್ ಕಾರ್ತಿಕ್ ಮಹೇಶ್, ಗಾಯಕ ಜಸ್ಕರನ್ ಸಿಂಗ್ ಭಾಗಿಯಾಗಿದ್ದರು.
ಬಡವ ರಾಸ್ಕಲ್ ಹಾಡಿನ ಮೂಲಕ ವೇದಿಕೆಗೆ ಗ್ರಾಂಡ್ ಎಂಟ್ರಿ ಕೊಟ್ಟ ಡಾಲಿ ಧನಂಜಯ್, ಚಾಮರಾಜನಗರದಲ್ಲಿ ನನಗೆ ಸಿಕ್ಕಿರುವ ಪ್ರೀತಿ ದೊಡ್ಡದು, ಬಡವ ರಾಸ್ಕಲ್ ಚಿತ್ರ ಬಿಡುಗಡೆಯಾದಾಗ ರ‍್ಯಾಲಿ ಮಾಡಿದ್ದಾಗ ಪ್ರತಿ ಹಳ್ಳಿಯಲ್ಲೂ ವಿಶೇಷ ಪ್ರೀತಿ ಕೊಟ್ಟಿದ್ದನ್ನು ಮರೆಯಲಾರೆ ಎಂದರು.

ಕಲಾವಿದರಿಗೆ ಅಭಿಮಾನಿಗಳು ತೋರುವ ಪ್ರೀತಿ ನಮಗೆ ಬಹಳಷ್ಟು ಎನರ್ಜಿ ಕೊಡುತ್ತದೆ. ಚಾಮರಾಜನಗರ ಅಣ್ಣಾವ್ರನ್ನು ಕೊಟ್ಟಿದೆ, ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರನ್ನು ಕೊಟ್ಟಿದೆ ಎಂದು ಸ್ಮರಿಸಿದರು.
ಇನ್ನು ಅಂಕಲ್‌ನ ಹೊಡಿತಿನಿ ಸುಬ್ಬಿ, ಜಿಂಗೋದ ಕ್ರಾಂತಿಯ ತೋಟ ಎಂಬ ಡೈಲಾಗ್‌ಗಳನ್ನು ಹೇಳಿ ಅಭಿಮಾನಿಗಳನ್ನು ಹುಚ್ಚೆದ್ದು ಶಿಳ್ಳೆ ಹಾಕುವಂತೆ ಮಾಡಿದರು.
ಬಿಗ್ ಬಾಸ್- 10ರ ಸೀಸನ್‌ನ ವಿಜೇತ ಕಾರ್ತಿಕ್ ಮಹೇಶ್ ಕೂಡ ಭಾಗಿಯಾಗಿದ್ದರು. ಕಾರ್ತಿಕ್ ಮಹೇಶ್ ಅವರ ತವರು ಜಿಲ್ಲೆ ಚಾಮರಾಜನಗರ ಆಗಿದ್ದು, ಚಾಮರಾಜನಗರದ ಯಾವುದೇ ಕೆಲಸ, ಪ್ರವಾಸೋದ್ಯಮ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿದರು. ಮುಂಬರುವ ರಾಮರಸ ಚಿತ್ರವನ್ನು ನೋಡಿ. ನಮ್ಮೂರಿನ ಜನರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಸ್ಯಾಂಡಲ್ ವುಡ್ ನೈಟ್ಸ್: ಹಳ್ಳಿ ಹುಡುಗಿ ಪ್ಯಾಟೆಗೆ ಬಂದ್ರು ಖ್ಯಾತಿಯ ಐಶ್ವರ್ಯ ನಿರೂಪಣೆಯಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮ ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಗಾಯಕ ಹೇಮಂತ್, ಜಸ್ಕರನ್ ಸಿಂಗ್ ಸಂಗೀತ ಯುವಕರನ್ನು ಮೋಡಿ ಮಾಡಿತು.












Click it and Unblock the Notifications