ತನಗೆ ಸಿಕ್ಕಿದ 2.3 ಲಕ್ಷ ಮೌಲ್ಯದ ಚಿನ್ನದ ಸರ ವಾಪಾಸ್ ನೀಡಿ ಮದುವೆ ಸಂಭ್ರಮ ಹೆಚ್ಚಿಸಿದ ಮಹಾತಾಯಿ

ಚಾಮರಾಜನಗರ, ಆಗಸ್ಟ್‌ 23 : ಮದುವೆ ಮನೆಯಲ್ಲಿ ಸಿಕ್ಕಂತಹ ಚಿನ್ನದ ಸರವನ್ನು ಕಳೆದುಕೊಂಡ ಮಹಿಳೆಗೆ ಮಹಾತಾಯಿಯೊಬ್ಬರು ನೀಡಿರುವ ಮಾನವೀಯ ಘಟನೆ ನಗರದಲ್ಲಿ ಇಂದು ನಡೆದಿದೆ.

ಚಾಮರಾಜನಗರ ಪಟ್ಟಣದ ರಾಮಸಮುದ್ರ ಬಡಾವಣೆಯ ನಿವಾಸಿ ರವೀಶ್ ಪುತ್ರಿ ಅನ್ನಪೂರ್ಣ ಮತ್ತು ಗುರುಪ್ರಸಾದ್ ವಿವಾಹವು ಚಾಮರಾಜನಗರದ ನಂದಿಭವನದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ರಾಮಸಮುದ್ರದವರೇ ಆದ ಬ್ರಿಜೇಶ್ ಕುಮಾರ್ ಪತ್ನಿ ಭಾನುಮತಿ ಕೂಡ ನಂದಿ ಭವನಕ್ಕೆ ಮದುವೆಗೆಗಾಗಿ ಆಗಮಿಸಿದ್ದರು. ಸಡಗರದ ಓಡಾಟದಲ್ಲಿ 42 ಗ್ರಾಂ ತೂಕದ ಸುಮಾರು 2 ಲಕ್ಷದ 30 ಸಾವಿರ ಮೌಲ್ಯದ ಚಿನ್ನದ ಜನಜಂಗುಳಿ ನಡುವೆ ಕಳೆದುಕೊಂಡಿದ್ದಾರೆ.‌

ಚಿನ್ನದ ಸರ ಕಳೆದುಕೊಂಡ ಮಹಿಳೆ ಭಾನುಮತಿ ಆತಂಕಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಾ ಕಳೆದುಕೊಂಡ ಚಿನ್ನದ ಸರದ ಹುಡುಕಾಟ ನಡೆಸುತ್ತಿದ್ದಾಗ ಇದನ್ನು ಗಮನಿಸಿದ ರಾಮಸಮುದ್ರದ ಗೃಹಿಣಿ ನಿರ್ಮಲಾ ನಾಗರಾಜು ಚಿನ್ನದ ಸರ ತನಗೆ ಸಿಕ್ಕಿದೆ ಎಂದು ಚಿನ್ನದ ಸರ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

A Woman Returns 2.3 Lakh Value Gold Chain Found at Marriage House in Chamarajanagar

ಈಗಿನ ಕಾಲದಲ್ಲಿ ನೂರುರೂಪಾಯಿ‌ ಸಿಕ್ಕಿದರೆ ಸಾಕು ಯಾರಿಗೂ ತಿಳಿಯದ ಹಾಗೆ ಬಚ್ಚಿಟ್ಟುಕೊಳ್ಳುವ ಸ್ವಾರ್ಥಿಗಳ ನಡುವೆ ಇಂತಹ " ಮಹಾತಾಯಿ" ಯ ಕರುಣಾಮಯಿ ಕಾರ್ಯಕ್ಕೆ ಮದುವೆಮನೆಯಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಟಿಕೆಟ್‌ ಆಕಾಂಕ್ಷೆಗಳಿಗೆ ಶಾಸಕ ನರೇಂದ್ರ ಸವಾಲ್
ಯಾವ ಊರಲ್ಲಿ ತಾನು ಅಭಿವೃದ್ಧಿ ಮಾಡಿಲ್ಲ, ಯೋಜನೆಗಳ‌ ಕಾಮಗಾರಿ ನಡೆಸಿಲ್ಲ ಎಂದು ಜನರು ಹೇಳಿದರೇ ಅಂದೇ ರಾಜಕೀಯ ನಿವೃತ್ತಿಯಾಗುತ್ತೇನೆ. ಕ್ಷೇತ್ರ ವ್ಯಾಪ್ತಿಯ 478 ಹಳ್ಳಿಗಳ ಪೈಕಿ ಯಾವುದಾದರೂ ಒಂದು ಗ್ರಾಮದಲ್ಲಿ ಶಾಸಕರು ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದರೇ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಹನೂರು ಶಾಸಕ ಆರ್.ನರೇಂದ್ರ ಎಂದು ಸವಾಲೆಸೆದಿದ್ದಾರೆ.

A Woman Returns 2.3 Lakh Value Gold Chain Found at Marriage House in Chamarajanagar

ಹನೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ದೇಗುಲವೊಂದಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಮುಖಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಪ್ರಚಾರ ನಡೆಸುತ್ತಿದ್ದಾರೆ, ಅಭಿವೃದ್ಧಿ ಅಕಾಶ ತೋರುತ್ತಿದ್ದಾರೆ. ಇವರಿಗೆ ಕ್ಷೇತ್ರದ ವಿಸ್ತೀರ್ಣವೆಷ್ಟು, ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಹಳ್ಳಿಗಳಿವೆ.? ಎಂದು ಹೇಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಕ್ಷೇತ್ರದಲ್ಲಿ 478 ಹಳ್ಳಿಗಳಿದ್ದು ಜಾಗೇರಿ ಯಿಂದ ಪ್ರಾರಂಭವಾಗಿ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದ ವರೆಗೆ 172 ಕಿಲೋಮೀಟರ್ ವಿಸ್ತೀರ್ಣವಿದೆ. ಕೊಳ್ಳೇಗಾಲದಿಂದ ರಾಜಧಾನಿ ಬೆಂಗಳೂರಿಗೆ 140 ಕಿ.ಮೀ ದೂರವಿದೆ. ನನ್ನ ಕ್ಷೇತ್ರ 172 ಕಿಮೀ ವ್ಯಾಪ್ತಿ ಇದೆ. ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು 5 ವರ್ಷಗಳ ಸಮಯ ಬೇಕು. ನಮ್ಮದು ವಿಶೇಷವಾದ ಕ್ಷೇತ್ರ, ಪ್ರತಿದಿನ ಜನರ ಮಧ್ಯೆ ನಿಂತು ಕೆಲಸ ಮಾಡುವ ಜನಪ್ರತಿನಿಧಿಗಳಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ ಎಂದು ಚುನಾವಣೆಗೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿಗಳಿಗೆ ಪರೋಕ್ಷವಾಗಿ ಕುಟುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+