ಬಂಡೀಪುರದಲ್ಲಿ 10 ವರ್ಷ ವಯಸ್ಸಿನ ಹೆಣ್ಣು ಹುಲಿ ಸಾವು

Posted By:
Subscribe to Oneindia Kannada

ಎಚ್.ಡಿ.ಕೋಟೆ, ಫೆಬ್ರವರಿ 11: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹೆಡಿಯಾಲ ವನ್ಯಜೀವಿ ವಲಯದ ಕೋಡಹಳ್ಳ ಸಮೀಪದ ಬಳ್ಳೂರು ಹುಂಡಿ ಪ್ರದೇಶದಲ್ಲಿ ಹೆಣ್ಣು ಹುಲಿಯ ಮೃತದೇಹ ಶನಿವಾರ ಪತ್ತೆಯಾಗಿದೆ. ಕಾದಾಟದಲ್ಲಿ ಮೃತಪಟ್ಟಿರಬಹುದೆಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿಗೆ ಅಂದಾಜು ಹತ್ತು ವರ್ಷ ಪ್ರಾಯವಿದ್ದು, ಕಳೆದ ಮೂರು ದಿನಗಳ ಹಿಂದೆಯೇ ಮೃತಪಟ್ಟಿದ್ದು, ಹುಲಿಯ ಕುತ್ತಿಗೆ ಮತ್ತು ಭುಜದ ಭಾಗದಲ್ಲಿ ಗಾಯಗಳಾಗಿದ್ದು, ಇದು ಕಾದಾಟದ ವೇಳೆ ಇನ್ನೊಂದು ಹುಲಿ ದಾಳಿ ಮಾಡಿ ಹೊಡೆದ್ದರಿಂದ ಆದ ಗಾಯವಾಗಿದ್ದು, ಹೊಡೆತದಿಂದ ಮೂಳೆ ಮುರಿದಿರುವುದು ಕಂಡು ಬಂದಿದೆ. ಕಾದಾಟದ ವೇಳೆ ಆದ ಗಾಯದಿಂದ ತೀವ್ರ ರಕ್ತಸ್ರಾವವಾಗಿ ಹುಲಿಯು ಮೃತಪಟ್ಟಿದೆ ಎನ್ನಲಾಗಿದೆ.

A tigress found dead in Yedeyala forest range Bandipur

ಹುಲಿ ಸಾವನ್ನಪ್ಪಿ ಮೂರು ದಿನವಾಗಿದ್ದರೂ ಬೆಳಕಿಗೆ ಬಂದಿರಲಿಲ್ಲ. ಶನಿವಾರದಂದು ಅರಣ್ಯ ಸಿಬ್ಬಂದಿಗಳು ಗಸ್ತಿನಲ್ಲಿ ಇದ್ದಾಗ ದುರ್ವಾಸನೆ ಬಂದಿದ್ದು, ಅದರಂತೆ ಶೋಧ ಕಾರ್ಯ ಕೈಗೊಂಡಾಗ ಹುಲಿಯ ಮತದೇಹ ಪತ್ತೆಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಎಸಿಎಫ್ ಕೆ.ಪರಮೇಶ್, ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜ್ ಮತ್ತು ಸಿಬ್ಬಂದಿ ತೆರಳಿ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಹುಲಿ, ಚಿರತೆ, ಆನೆಗಳು ಸಾವನ್ನಪ್ಪುತ್ತಿದ್ದು ಆತಂಕ ಸೃಷ್ಠಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 10 year old tigress was found dead at Yedeyala forest range in Bandipurreservoir in Chamarajanagara district today. Forest officials suspected that a territorial fight may becaused for the death
Please Wait while comments are loading...