ಚಾಮರಾಜನಗರ: "ಹಣ್ಣುಗಳ ರಾಜ"ನ ಮೇಲೆ ಕಣ್ಣಾಕಿದ ಸಲಗ-ವಿಡಿಯೋ ವೈರಲ್
ಚಾಮರಾಜನಗರ, ಜೂನ್, 01: ಮಾವಿನ ಸೀಸನ್ ಬಂತೆಂದರೆ ಸಾಕು ಎಂತಹವರ ಬಾಯಲ್ಲೂ ನೀರು ಬರುವುದರುವುದ ಸಾಮಾನ್ಯ. ಅದರಲ್ಲೂ, ಈ ಹಣ್ಣಿನ ರಾಜನನ್ನು ಕಂಡರೇ ನನಗೂ ಇಷ್ಟ ಎಂಬಂತೆ ಆನೆಯೊಂದು ಮರ ಹತ್ತಿ ಮಾವು ಸವಿದ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ತಾಳವಾಡಿಯಲ್ಲಿ ಮುಂಜಾನೆ ನಡೆದಿದ್ದಿ, ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ನಟರಾಜು ಎಂಬವವರ ತೋಟಕ್ಕೆ ಆಗಮಸಿದ ಆನೆಯೊಂದು ಎರಡು ಕಾಲು ಮೇಲಕ್ಕೆತ್ತಿ ಮಾವಿನ ಗೊಂಚಲನ್ನು ಬೀಳಿಸಿ ಬಳಿಕ, ಒಂದಾದ ಮೇಲೆ ಒಂದರಂತೆ ಮಾವು ತಿಂದಿದೆ. ಇನ್ನು, ಆನೆ ಮಾವು ತಿನ್ನುವುದನ್ನು ಕಂಡ ಹೌಹಾರಿದ ಕುಟುಂಬ ಶಬ್ಧ ಮಾಡಿ ಆನೆಯನ್ನು ಓಡಿಸಿದ್ದಾರೆ.

ಒಟ್ಟಿನಲ್ಲಿ ಮಾವಿನ ಹಣ್ಣಿನ ಆಸೆ ಗಜರಾಜನಿಗೂ ಬಂದಿದ್ದು, ಇದರಿಂದ ತೋಟದ ಮಾಲೀಕರಿಗೆ ಬೆಳೆಹಾನಿ ನಷ್ಟದ ಬೀತಿ ಉಂಟಾಗಿದೆ.
ರಿಲ್ಯಾಕ್ಸ್ ಮೂಡ್‌ಗೆ ಜಾರಿದ "ವ್ಯಾಘ್ರ" ಫ್ಯಾಮಿಲಿ: ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಕ್ಯಾಮರಾಗೆ ಹುಲಿ ಕುಟುಂಬ ರಿಲ್ಯಾಕ್ಸ್ ಮೂಡ್‌ಗೆ ಜಾರಿರುವ ದೃಶ್ಯ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಬಂಡೀಪುರದ ಸಫಾರಿ ಜೋನಿನ ಬಾರ್ಡರ್ ರೋಡ್ ಎಂಬಲ್ಲಿ ತೊರೆ ಸಮೀಪ ಹುಲಿ ಕುಟುಂಬ ಜಾಲಿ ನಿದ್ರೆಗೆ ಜಾರಿದ ವೀಡಿಯೋವನ್ನು ಪ್ರವಾಸಿಗರು ಸೆರೆ ಹಿಡಿದಿದ್ದು, ಈ ದೃಶ್ಯಗಳು ಭಾರೀ ವೈರಲ್ ಆಗುತ್ತಿವೆ.
ತಾಯಿ ಹುಲಿ ಹಾಗೂ ಎರಡು ಮರಿ ಹುಲಿಗಳು ಮಲಗಿ ನಿದ್ರಿಸುತ್ತಿದ್ದರೆ, ಗಂಡು ಹುಲಿ ಎಚ್ಚರವಾಗಿ ಅತ್ತಿತ್ತ ಕಣ್ಣಾಡಿಸುವುದು ಸೆರೆಯಾಗಿದೆ. ಒಟ್ಟಿನಲ್ಲಿ ಟೈಗರ್ ಫ್ಯಾಮಿಲಿಯನ್ನು ಕಣ್ಣಾರೆ ಕಂಡ ಪ್ರವಾಸಿಗರು ರೋಮಾಂಚಿತರಾಗಿದ್ದಾರೆ. ಮತ್ತ ಕೆಲವರು ಭಯಗೊಂಡ ಘಟನೆಯೂ ನಡೆದಿದೆ.
ಅಮ್ಮನಿಗಾಗಿ ಹಾತೊರೆಯುತ್ತಿದೆ ಚಿರತೆ ಮರಿ: ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬವರ ಕಬ್ಬಿನ ಗದ್ದೆಯಲ್ಲಿ ತನ್ನ ಮರಿ ಬಿಟ್ಟು ಚಿರತೆ ಓಡಿ ಹೋಗಿದ್ದು, ಎರಡನೇ ದಿನವೂ ತಾಯಿ ಚಿರತೆ ಸೆರೆ ಕಾರ್ಯಾಚರಣೆ ಮುಂದುವರೆದಿದೆ.
ಗುರುವಾರ (ಮೇ 30) ಮಧ್ಯಾಹ್ನ ಮರಿ ಚಿರತೆಯು ತಾಯಿಗಾಗಿ ಹಾತೊರೆಯುತ್ತಿದ್ದ ದೃಶ್ಯ ಕಂಡುಬಂದಿತು. ಬೇಟೆ ಹುಡುಕಿಕೊಂಡು ತಾಯಿ ಚಿರತೆ ತೆರಳಿರುವ ಸಾಧ್ಯತೆಯಿದ್ದು, ಮರಿಗಾಗಿ ವಾಪಾಸ್ ಬರಲಿದೆ ಎಂಬ ಖಚಿತತೆಯೊಂದಿಗೆ ಅರಣ್ಯ ಇಲಾಖೆ ಬೋನಿರಿಸಿದೆ. ಇನ್ನು, ಚಿರತೆ ಮರಿ ಪತ್ತೆಯಾಗಿರುವುದರಿಂದ ಜಮೀನುಗಳಿಗೆ ರೈತರು ತೆರಳು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications