ಗುಂಡ್ಲುಪೇಟೆ: ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವು
ಗುಂಡ್ಲುಪೇಟೆ, ಸೆಪ್ಟೆಂಬರ್ 04 : ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮಲ್ಲಯ್ಯನಪುರ ಗ್ರಾಮದ ನಿವಾಸಿ ದಿವಂಗತ ದೊಡ್ಡಮಾದೇಗೌಡ ಎಂಬುವರ ಪುತ್ರ ಸುರೇಶ್(21) ಎಂಬಾತನೇ ಈಜಾಡಲು ಹೋಗಿ ಮೃತಪಟ್ಟ ದುರ್ದೈವಿ.

ಮಲ್ಲಯ್ಯನಪುರ ಗ್ರಾಮದ ನಿವಾಸಿ ರಮೇಶ್ ಎಂಬುವರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಸುರೇಶ್ ಈಜಾಡುವ ವೇಳೆ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾನೆ.
ಈ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣದಿಂದ ಈ ವಿಚಾರ ಯಾರಿಗೂ ಗೊತ್ತಾಗಲಿಲ್ಲ. ಆದರೆ, ಈಜಲೆಂದು ಸುರೇಶ್ ಹೋಗಿದ್ದನ್ನು ನೋಡಿದ ಕೆಲವರು ಬಹಳ ಹೊತ್ತಾದರೂ ಬಾರದೆ ಇರುವುದರಿಂದ ಸಂಶಯಗೊಂಡು ಕೃಷಿ ಹೊಂಡದತ್ತ ಹೋಗಿ ನೋಡಿದಾಗ ಅಲ್ಲಿ ಸುರೇಶ್‍ನ ಶವ ತೇಲುವುದು ಕಂಡು ಬಂದಿದೆ.












Click it and Unblock the Notifications