ಚಾಮರಾಜನಗರ: ಆನೆಯಿಂದ ಬಚಾವಾದ ಇಬ್ಬರಿಗೆ ₹25,000 ದಂಡ-ಅಸಲಿ ಕಾರಣ ಏನು?
ಚಾಮರಾಜನಗರ, ಫೆಬ್ರವರಿ, 22: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಮೀರಿ ಕಾರು ನಿಲ್ಲಿಸಿ ಕೆಳಗಿಳಿದು ಆನೆ ದಾಳಿಗೆ ಒಳಗಾಗಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ವಿಚಾರಣೆ ನಡೆಸಿ 25,000 ರೂಪಾಯಿ ದಂಡ ವಿದ್ಯಾರ್ಥಿಗಳು ವಿಧಿಸಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮೂಲೆಹೊಳೆ ವಲಯದಲ್ಲಿ ಫೆಬ್ರವರಿ 1ರಂದು ಕಾರು ಬಿಟ್ಟು ಮೂತ್ರ ವಿಸರ್ಜನೆಗೆಂದು ಇಳಿದಿದ್ದ ಇಬ್ಬರ ಮೇಲೆ ಏಕಾಏಕಿ ಕಾಡಾನೆ ಅಟ್ಟಾಡಿಸಿದ ಘಟನೆ ನಡೆದಿತ್ತು.

ಕಾರೊಂದರಿಂದ ಇಳಿದ ಇಬ್ಬರನ್ನು ಹೆಣ್ಣಾನೆಯೊಂದು ಅಟ್ಟಿಸಿಕೊಂಡು ಬರುತ್ತದೆ. ಇಬ್ಬರ ಪೈಕಿ ಒಬ್ಬರು ಕೆಳಗೆ ಬೀಳುತ್ತಾರೆ. ಆನೆ, ಅವರನ್ನು ಕಾಲಿನಲ್ಲಿ ತುಳಿಯಲು ಯತ್ನಿಸುತ್ತದೆ. ಅದೃಷ್ಟವಶಾತ್ ಅದರ ಕಾಲು ಅವರ ದೇಹಕ್ಕೆ ತಾಗುವುದಿಲ್ಲ. ಹೆದ್ದಾರಿಯಲ್ಲಿ ಸಂಚರಿಸುವಾಗ ಆನೆ ಸೇರಿದಂತೆ ಇತರ ಪ್ರಾಣಿಗಳು ರಸ್ತೆ ಬದಿಯಲ್ಲಿ ಕಾಣಸಿಗುತ್ತವೆ. ಆಗ ವಾಹನಗಳನ್ನು ನಿಲ್ಲಿಸಬಾರದು ಎಂಬ ಸೂಚನೆ ಇದ್ದರೂ, ನಿಯಮ ಮೀರಿ ವಾಹನಗಳ ನಿಲ್ಲಿಸಿ ಪ್ರಾಣಿ ಪೋಟೋ ತೆಗೆಯಲು ಮುಂದಾಗುತ್ತಾರೆ. ಈ ಹಿಂದೆಯೂ ಈ ಹೆದ್ದಾರಿಯಲ್ಲಿ ಇಂತಹ ಪ್ರಕರಣಗಳು ನಡೆದಿವೆ.
ಮಾಧ್ಯಮದಲ್ಲಿ ವರದಿ ಆಧರಿಸಿ ಬಂಡೀಪುರ ಎ.ಸಿ.ಎಫ್ ಹಾಗೂ ಮೂಲೆಹೊಳೆ ಆರ್.ಎಫ್.ಓ ವಿಚಾರಣೆ ನಡೆಸಿ ಆಂದ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿಗಳಿಗೆ 25 ಸಾವಿರ ರೂಪಾಯಿ ದಂಡ ಹಾಕಿದ್ದಾರೆ ಎಂದು ಸಿ.ಎಫ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಭೂಪೇಂದ್ರ ಯಾದವ್ ಹೇಳಿದ್ದೇನು?: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾನವ ಹಾಗೂ ವನ್ಯಜೀವಿ ಸಂಘರ್ಷ ಕುರಿತು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅರಣ್ಯಧಿಕಾರಿಗಳಿಂದ ಮಾಹಿತಿ ಪಡೆದರು.
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾಹಿತಿ ಪಡೆದ ನಂತರ ಮಾತನಾಡಿದ ಅವರು, ಅರಣ್ಯ ಸಚಿವರು, ಕಾಡು ಪ್ರಾಣಿಗಳಿಗೆ ಕರ್ನಾಟಕ, ಕೇರಳ, ತಮಿಳುನಾಡಿ ಎಂಬ ಎಲ್ಲೇ ಇರುವುದಿಲ್ಲ. ಹಾಗಾಗಿ ಆನೆಗಳನ್ನು ಯಾವ ಪ್ರದೇಶದಲ್ಲಿ ಬಿಟ್ಟಿದ್ದೇವೆ ಎಂಬುದನ್ನು ಪರಿಗಣಿಸದೆ, ವನ್ಯ ಪ್ರಾಣಿಗಳನ್ನು ಅರಣ್ಯಧಿಕಾರಿಗಳು ರಕ್ಷಿಸುವ ಕೆಲಸ ಮಾಡಬೇಕು. ಜೊತೆಗೆ ವನ್ಯಜೀವಿಗಳು ಅರಣ್ಯದಿಂದ ನಾಡಿನತ್ತ ಬರದಂತೆ ರೈಲ್ವೆ ಬ್ಯಾರಿಕೇಡ್‌ಗಳನ್ನು ಸಮರ್ಪಕವಾಗಿ ನಿರ್ಮಾಣ ಮಾಡಬೇಕೆಂದು ಸೂಚಿಸಿದರು.
ನೀಲಗಿರಿ ಅರಣ್ಯ ಶ್ರೇಣಿಯು ಕೇರಳ, ಕರ್ನಾಟಕ ಹಾಗೂ ತಮಿಳುನಾಡು ಮೂರು ರಾಜ್ಯಗಳ ಅರಣ್ಯ ಗಡಿ ಹಂಚಿಕೊಂಡಿದೆ. ಈ ಕಾರಣದಿಂದ ಅರಣ್ಯದ ಜೊತೆಗೆ ವನ್ಯಜೀವಿಗಳ ಸಂರಕ್ಷಣೆಯನ್ನು ಅಧಿಕಾರಿಗಳು ಮಾಡಬೇಕೆಂದು ತಿಳಿಸಿದರು. ಬಂಡೀಪುರ ಅರಣ್ಯಧಿಕಾರಿ ಡಾ.ಪಿ.ರಮೇಶ್ ಕುಮಾರ್ ಮಾತನಾಡಿ, ಬಂಡೀಪುರ ಅಭಯಾರಣ್ಯವು ಹುಲಿ ಸಂತತಿಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ಆನೆ ಗಣತಿಯಲ್ಲಿ ಮೊದಲ ಸ್ಥಾನ ಲಭಿಸಿದೆ.
ಜೊತೆಗೆ ಯುವಮಿತ್ರ, ರೈತ ಮಿತ್ರ ಸೇರಿದಂತೆ ಇನ್ನಿತರ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವರು, ಅರಣ್ಯಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಈ ಸಂಧರ್ಭದಲ್ಲಿ ಪಿಸಿಸಿಎಫ್ ಸುಭಾಷ್ ಮಲ್ಕಡೆ, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿಪ್ರಿಯಾ, ಅರಣ್ಯ ಇಲಾಖೆಯ ಎಡಿಜಿಪಿ ಯಾದವ್, ಜಿತೇಂದ್ರ ಸಿಂಗ್ ಸೇರಿದಂತೆ ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications