ಪುಣ್ಯಕ್ಷೇತ್ರ ಮಲೆ ಮಾದಪ್ಪನ ಬೆಟ್ಟದಲ್ಲಿ 193 ಲೀಟರ್‌ ಅಕ್ರಮ ಮದ್ಯ ವಶ, ಆರೋಪಿಗಳನ್ನು ಬಗ್ಗುಬಡಿದ ಪೊಲೀಸ್ ಪಡೆ

ಚಾಮರಾಜನಗರ, ಸೆಪ್ಟೆಂಬರ್‌, 02: ಪ್ರಸಿದ್ಧ ಯಾತ್ರಸ್ಥಳ, ಪುಣ್ಯ ಕ್ಷೇತ್ರವಾದ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ ಘಟನೆ ಇಂದು (ಸೆಪ್ಟೆಂಬರ್‌ 2) ನಡೆದಿದೆ.

ಬಾಬು ಪೂಜಾರಿ, ಎನ್‌.ಕುಮಾರ್, ಮಹೇಶ್, ಮಹಾದೇವಿ ಬಂಧಿತ ಆರೋಪಿಗಳು‌‌‌‌. ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದ ಮಾಹಿತಿ ಮೇರೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹಾಗೂ ಅಬಕಾರಿ ಡಿಸಿ ನಾಗಶಯನ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ 5 ಪ್ರಕರಣ ದಾಖಲಿಸಿದ್ದಾರೆ. ಮೂವರು ಪರಾರಿ ಆಗಿದ್ದಾರೆ ಎಂದು ತಿಳಿದುಬಂದಿದೆ.

193 liters illegal liquor seized in Male Mahadeshwara Hill

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ರಸ್ತೆಯಲ್ಲಿ ಬರುವ ಸಿದ್ದಪ್ಪ ಹಾಗೂ ರಾಜಪ್ಪ ಎಂಬುವರ ಮನೆಯಲ್ಲಿ ವಿವಿಧ ಕಂಪನಿಯ ಅಕ್ರಮ ಮಧ್ಯ 13 ಬಾಕ್ಸ್ , ಕುಮಾರ್ ಮನೆಯಲ್ಲಿ ಒಂದು ಬಾಕ್ಸ್ ಮತ್ತು 30 ಪೌಚ್, ಮೂರನೇ ಪ್ರಕರಣವಾದ ಬಾಬು ಪೂಜಾರಿ ಅಡ್ಡೆ ಮೇಲೆ ದಾಳಿ ಮಾಡಿ ಎರಡು ಬಾಕ್ಸ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ನಾಲ್ಕನೇ ಪ್ರಕರಣದಲ್ಲಿ ಮಹದೇವಿ ತಂಬಡಗೇರಿ ಮನೆಯಲ್ಲಿ ದಾಸ್ತಾನಿಟ್ಟಿದ್ದ ಒಂದು ಬಾಕ್ಸ್, 5ನೇ ಪ್ರಕರಣವಾದ ಪುಟ್ಟಮ್ಮ ಎಂಬವರ ಮನೆಯಲ್ಲಿ ಒಂದು ಬಾಕ್ಸ್ ಸೇರಿದಂತೆ ಒಟ್ಟು 193 ಲೀಟರ್‌ ಮದ್ಯ ವಶಕ್ಕೆ ಪಡೆಯಲಾಗಿದೆ. ಒಟ್ಟಿನಲ್ಲಿ ತಪೋಭೂಮಿಯಲ್ಲಿ ಕುಡಿತಕ್ಕೆ ಬ್ರೇಕ್ ಹಾಕುವ ಕೆಲಸ ನಿರಂತರವಾಗಿರಲಿ ಎಂಬುದು ಭಕ್ತರ ಒತ್ತಾಸೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+