• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೊಮಾಟೊ ಮತ್ತು ಸ್ವಿಗ್ಗಿ ಆರ್ಡರ್, ಕ್ಯಾನ್ಸಲ್ ದುಬಾರಿಯಾಗಲಿದೆ

|
   Zomato and Swiggy to raise cancellation fee | ZOMATO | SWIGGY | FEE HIKE | ONEINDIA KANNADA

   ಬೆಂಗಳೂರು, ಜನವರಿ 28: ಭಾರತದ ಮುಂಚೂಣಿಯಲ್ಲಿರುವ ಬೇಡಿಕೆ ಆಧಾರಿತ ಡೆಲಿವರಿ ಪ್ಲಾಟ್‍ಫಾರಂ ಆಗಿರುವ ಜೊಮಾಟೊ ಮತ್ತು ಸ್ವಿಗ್ಗಿ ಪೇಮೆಂಟ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಆನ್ ಲೈನ್ ಆಹಾರ ವಿತರಣೆ ಶುಲ್ಕ ಹೆಚ್ಚಳವಾಗಿದೆ. ಕ್ಯಾನ್ಸಲ್ ಮಾಡುವ ನಿಯಮ ಬದಲಾಗಿದೆ, ರಿಯಾಯಿತಿ ಕಟ್ ಆಗಿದ್ದು, ಡೈನಾಮಿಕ್ ಡಿಸ್ಕೌಂಟ್ ವ್ಯವಸ್ಥೆ ತರಲಾಗಿದೆ. ಒಟ್ಟಾರೆ, ಆನ್ ಲೈನ್ ಫುಡ್ ಆರ್ಡರ್ ಕೈ ಕಚ್ಚಲಿದೆ.

   ಎರಡು ಸಂಸ್ಥೆಗಳ ರಿಯಾಯಿತಿ ಕಡಿತದಿಂದ ಆರ್ಡರ್ ಗಳು ಕಡಿಮೆಯಾಗುತ್ತಿವೆ. ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಎರಡೂ ಕಂಪನಿಗಳ ವಹಿವಾಟು ಶೇಕಡಾ 5ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗುತ್ತಿದೆ.

   ಸ್ವಿಗ್ಗಿ ಸಂಸ್ಥೆಯಿಂದ ಸ್ವಿಗ್ಗಿ ಗೋ ಎಂಬ ಪಿಕಪ್ ಮತ್ತು ಡ್ರಾಪ್ ಸೇವೆ

   ಉಬರ್ ಈಟ್ಸ್ ಕಂಪನಿಯನ್ನು ಆಹಾರ ವಿತರಣಾ ಅಪ್ಲಿಕೇಶನ್ ಜೊಮಾಟೊ ಕಳೆದ ವಾರ ಖರೀದಿ ಮಾಡಿದ ನಂತರ ಸಾಕಷ್ಟು ಬದಲಾವಣೆ ತಂದಿದೆ. ಇದರ ನೇರ ಪರಿಣಾಮ ಗ್ರಾಹಕರ ಮೇಲಾಗುತ್ತಿದೆ.ಉಬರ್ ಈಟ್ಸ್ ನ ಶೇಕಡಾ 9.99 ರಷ್ಟು ಷೇರುಗಳನ್ನು ಖರೀದಿಸುವ ಮೂಲಕ ಜೊಮಾಟೊ ಸಂಸ್ಥೆಯ ಮಾರುಕಟ್ಟೆಯ ಪಾಲು ಶೇಕಡಾ 50 ಕ್ಕಿಂತ ಹೆಚ್ಚಾಗಿದೆ. ಆದರೂ ಸ್ವಿಗ್ಗಿ ಶೇಕಡಾ 48 ರಷ್ಟು ಪಾಲನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

   "ಕೇವಲ ಆಹಾರ ಮಾತ್ರವಲ್ಲದೆ, ಇತರೆ ವಸ್ತುಗಳನ್ನೂ ತಲುಪಬೇಕಾದವರಿಗೆ ತಲುಪಿಸುವಂಥ ಸ್ವಿಗ್ಗಿಯ ಸೇವೆಗೆ ಸಾಕ್ಷಿಯಾದ ದೇಶದ ಮೊದಲ ನಗರವೆಂದರೆ ಅದು ಬೆಂಗಳೂರು. 2020ರೊಳಗಾಗಿ ನಾವು ಸ್ವಿಗ್ಗಿ ಗೋ ಸೇವೆಯನ್ನು ಸುಮಾರು 300 ನಗರಗಳಿಗೆ ವಿಸ್ತರಿಸುತ್ತಿದ್ದು, ಸ್ವಿಗ್ಗಿ ಸ್ಟೋರ್‍ಗಳನ್ನು ಎಲ್ಲ ಪ್ರಮುಖ ಮೆಟ್ರೋಗಳಲ್ಲಿ ವಿಸ್ತರಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಭಾರತದಾದ್ಯಂತದ ಗ್ರಾಹಕರಿಗೆ ಆರಾಮದಾಯಕತೆಯ ಹೊಸ ಯುಗವನ್ನು ಸೃಷ್ಟಿಸಲಿದ್ದೇವೆ,'' ಎಂದು ಸಿಇಒ ಶ್ರೀಹರ್ಷ ಹೇಳಿದ್ದಾರೆ.

   English summary
   Food delivery platforms Zomato and Swiggy have increased the delivery fees in the past few months, tightened order cancellation rules, introduced dynamic pricing.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X