ಊಬರ್ ಈಟ್ ಇಂಡಿಯಾ ಜೊಮ್ಯಾಟೊಗೆ ಮಾರಾಟ?

ನವದೆಹಲಿ, ಡಿಸೆಂಬರ್ 17: ಊಬರ್ ಈಟ್ಸ್ ಇಂಡಿಯಾ ಜೊಮ್ಯಾಟೊಗೆ ಮಾರಾಟವಾಗಲಿದೆ?. ಈ ಬಗ್ಗೆ ಪ್ರಾಥಮಿಕ ಮಾತುಕತೆ ಆರಂಭವಾಗಿದ್ದು, ಭಾರತದ ಆಹಾರ ವಿತರಣಾ ಉದ್ಯಮದಲ್ಲಿ ಶೀಘ್ರದಲ್ಲೇ ಹೊಸ ಬೆಳವಣಿಗೆ ನಡೆಯುವ ನಿರೀಕ್ಷೆ ಇದೆ.

207ರಲ್ಲಿ ಊಬರ್ ಈಟ್ಸ್ ಇಂಡಿಯಾ ಆರಂಭಗೊಂಡಿತ್ತು. ಜೊಮ್ಯಾಟೊ ಮತ್ತು ಸ್ವಿಗ್ಗಿ ಜೊತೆ ಪ್ರತಿಸ್ಪರ್ಧೆ ನೀಡಲು ಊಬರ್ ಈಟ್ಸ್‌ಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಜೊಮ್ಯಾಟೊಗೆ ಮಾರಾಟ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಊಬರ್ ಈಟ್ಸ್ ಮಾರುಕಟ್ಟೆ ಮೌಲ್ಯ 400 ದಶಲಕ್ಷ ಡಾಲರ್ ಎಂದು ಅಂದಾಜಿಸಲಾಗಿದೆ. ಜೊಮ್ಯಾಟೊ ಊಬರ್ ಈಟ್ಸ್‌ನಲ್ಲಿ 150 ರಿಂದ 200 ದಶಲಕ್ಷ ಡಾಲರ್ ಹೂಡಿಕೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ವರ್ಷದ ಅಂತ್ಯಕ್ಕೆ ಈ ಮಾತುಕತೆ ಅಂತಿಮ ಹಂತಕ್ಕೆ ಬರಬಹುದು.

Zomato All Set To Buy UberEats India

ಜೊಮ್ಯಾಟೋ ಭಾರತದ ಅತಿ ದೊಡ್ಡ ಆಹಾರ ವಿತರಣೆ ಉದ್ಯಮವಾಗಿದೆ. 1,50,000 ರೆಸ್ಟೋರೆಂಟ್‌ಗಳಿಂದ ಪ್ರತಿದಿನ 1.3 ದಶಲಕ್ಷ ಆರ್ಡರ್‌ಗಳನ್ನು ಇದು ವಿತರಣೆ ಮಾಡುತ್ತಿದ್ದು, ಸ್ವಿಗ್ಗಿ ಜೊತೆ ಸ್ಪರ್ಧೆಗೆ ಇಳಿದಿದೆ.

ವ್ಯಾಪಾರಿ ಸಲಹಾ ಸಂಸ್ಥೆ ಮಾರ್ಕೆಟ್ ರಿಸರ್ಚ್ ಫ್ಯೂಚರ್ ಪ್ರಕಾರ ಭಾರತದ ಆನ್‌ಲೈನ್ ಆಹಾರ ವಿತರಣೆ ಉದ್ಯಮ ವಾರ್ಷಿಕ ಶೇ 16ರ ದರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. 2023ರ ವೇಳೆಗೆ ಮಾರುಕಟ್ಟೆ ಮೌಲ್ಯ 17.02 ಶತಕೋಟಿ ಡಾಲರ್‌ಗಳಿಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

ಊಬರ್ ಇಂಡಿಯಾ ಜೊಮ್ಯಾಟೊಗೆ ಮಾರಾಟವಾದರೆ ದೇಶದ ಆಹಾರ ವಿತರಣಾ ಉದ್ಯಮದಲ್ಲಿ ಹೊಸ ಕ್ರಾಂತಿಯಾಗಲಿದೆ. ಈ ಮಾರಾಟ ಪ್ರಕ್ರಿಯೆ ಅಂತಿಮಗೊಂಡರೆ ಸ್ವಿಗ್ಗಿ ಸಹ ತನ್ನ ಉದ್ಯಮವನ್ನು ವಿಸ್ತರಣೆ ಮಾಡಲು ಹೊಸ ತಂತ್ರವನ್ನು ಅನುಸರಿಸಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+