• search

ಜೀ 37 ಲೈವ್ ಚಾನೆಲ್‌ಗಳು ಜಿಯೋ ಗ್ರಾಹಕರಿಗೆ ಇದೀಗ ಲಭ್ಯ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮುಂಬೈ, ಅಕ್ಟೋಬರ್ 11: ಮೀಡಿಯಾ ಮತ್ತು ಮನರಂಜನೆ ಕ್ಷೇತ್ರದ ಜಾಗತಿಕ ಸಂಸ್ಥೆ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿ. (ಝೀ) ಹಾಗೂ ಭಾರತದ ಡಿಜಿಟಲ್ ಸೇವೆಗಳ ಮುಂಚೂಣಿ ಸಂಸ್ಥೆ ರಿಲಯನ್ಸ್ ಜಿಯೋ ಇನ್‌ಫೋಕಾಂ ಲಿ ("ಜಿಯೋ") ಕೊನೆಗೂ ಒಪ್ಪಂದಕ್ಕೆ ಸಹಿ ಹಾಕಿವೆ.

  ಡಿಜಿಟಲ್ ಇಕೋಸಿಸ್ಟಂನ ಬೆಳವಣಿಗೆಯನ್ನು ಬೆಂಬಲಿಸುವ ದೃಷ್ಟಿಯಿಂದ, ಜೀ ಸಮೂಹದ ಸಂಪೂರ್ಣ ಕಂಟೆಂಟ್ ಸಂಗ್ರಹವನ್ನು ಜಿಯೋ ವೇದಿಕೆಗಳಲ್ಲಿ ಲಭ್ಯವಾಗಿಸಲು ಒಪ್ಪಂದಕ್ಕೆ ಬರಲಾಗಿದೆಯೆಂದು ಇಂದು ಪ್ರಕಟಿಸಿವೆ.

  ಜಿಯೋಫೋನ್‌‌ನಲ್ಲಿ ಕೊನೆಗೂ ವಾಟ್ಸಾಪ್ ಲಭ್ಯ!

  ಈ ಒಪ್ಪಂದವು 227 ಮಿಲಿಯನ್‌ಗೂ ಹೆಚ್ಚಿನ ಜಿಯೋ ಗ್ರಾಹಕರ ಅನುಭವವನ್ನು ಉತ್ತಮಗೊಳಿಸಲಿದ್ದು, 37 ನೇರಪ್ರಸಾರದ ಚಾನೆಲ್‍ಗಳು ಸೇರಿದ ಜೀ ಸಮೂಹದ ಉತ್ಕೃಷ್ಟ ಹಾಗೂ ಮನಸೆಳೆಯುವ ಕಾರ್ಯಕ್ರಮಗಳನ್ನು ಅವರಿಗೆ ಲಭ್ಯವಾಗಿಸಲಿದೆ.

  ಹಾಥ್ ವೇ ಹಾಗೂ ರಿಲಯನ್ಸ್ ಡೀಲ್ ಮುಖ್ಯಾಂಶ

  ಈ ಹೊಂದಾಣಿಕೆಯನ್ನು ಇನ್ನಷ್ಟು ಸದೃಢಗೊಳಿಸುವ ಉದ್ದೇಶದಿಂದ, ಜೀ ಸಮೂಹದ ZEE5 ಆಪ್ ಅನ್ನೂ ಡೌನ್‌ಲೋಡ್‌ಗಾಗಿ ಲಭ್ಯವಾಗಿಸಲಾಗುವುದು. ಇದು ಜೀ ಸಮೂಹದ ವಿಸ್ತೃತ ಡಿಜಿಟಲ್ ಕಂಟೆಟ್‌ನ ಸಂಗ್ರಹವಾಗಿದ್ದು, ವೀಡಿಯೋ ಆನ್ ಡಿಮ್ಯಾಂಡ್ (ವಿಓಡಿ) ಜಾಲದ ಕಂಟೆಟ್ ಮಾತ್ರವೇ ಅಲ್ಲದೆ ZEE5 ಒರಿಜಿನಲ್ಸ್, ಚಲನಚಿತ್ರ, ಟೀವಿ ಕಾರ್ಯಕ್ರಮ, ಮ್ಯೂಸಿಕ್ ವೀಡಿಯೋ, ಲೈಫ್‌ಸ್ಟೈಲ್ ಕಾರ್ಯಕ್ರಮ, ಮಕ್ಕಳ ಕಾರ್ಯಕ್ರಮ ಹಾಗೂ ನಾಟಕಗಳನ್ನು ಒಳಗೊಂಡಿದೆ.

  ಜೀ ಗ್ಲೋಬಲ್‌ನ ಸಿಇಓ ಅಮಿತ್ ಗೋಯೆಂಕಾ

  ಜೀ ಗ್ಲೋಬಲ್‌ನ ಸಿಇಓ ಅಮಿತ್ ಗೋಯೆಂಕಾ

  ಈ ಹೊಂದಾಣಿಕೆಯ ಮೂಲಕ ಜೀ ಸಮೂಹದ ಉತ್ಕೃಷ್ಟ ಹಾಗೂ ಜನಪ್ರಿಯ ಕಂಟೆಂಟ್ ಸಂಗ್ರಹ ಹಾಗೂ ರಿಲಯನ್ಸ್ ಜಿಯೋದ ರಾಷ್ಟ್ರವ್ಯಾಪಿ ಜಾಲ ಒಟ್ಟು ಸೇರಿ ಗ್ರಾಹಕರಿಗೆ ನವೀನ ಹಾಗೂ ಚೈತನ್ಯದಾಯಕ ಕಂಟೆಂಟ್ ಆಯ್ಕೆಗಳನ್ನು ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
  ಈ ನಿರ್ಧಾರದ ಕುರಿತು ಮಾತನಾಡಿದ ಜೀ ಇಂಟರ್‌ನ್ಯಾಶನಲ್ ಹಾಗೂ ಜೀ ಗ್ಲೋಬಲ್‌ನ ಸಿಇಓ ಅಮಿತ್ ಗೋಯೆಂಕಾ, "ಈ ಧನಾತ್ಮಕ ಬೆಳವಣಿಗೆಯ ಬಗ್ಗೆ ನಾವು ಉತ್ಸಾಹಿತರಾಗಿದ್ದೇವೆ. ದೇಶ ಹಾಗೂ ವಿಶ್ವದೆಲ್ಲೆಡೆಯ ವೀಕ್ಷಕರಿಗಾಗಿ ಉನ್ನತ ಗುಣಮಟ್ಟದ ಕಾರ್ಯಕ್ರಮಗಳನ್ನು ರೂಪಿಸುವುದು ಕಂಟೆಂಟ್ ನಿರ್ಮಾಪಕರಾದ ನಮ್ಮ ಜವಾಬ್ದಾರಿ. ವಿಸ್ತಾರವಾದ ಜಿಯೋ ಜಾಲ, ಮೊಬೈಲ್ ಸಾಧನಗಳ ಮೂಲಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಇಚ್ಛಿಸುವ ಇನ್ನಷ್ಟು ವೀಕ್ಷಕರನ್ನು ತಲುಪುವ ಅವಕಾಶವನ್ನು ನಮಗೆ ನೀಡುತ್ತಿದೆ.

  ಜೀ ಎಂಟರ್‌ಟೈನ್ ‌ಮೆಂಟ್ ಹಾಗೂ ರಿಲಯನ್ಸ್ ಜಿಯೋ

  ಜೀ ಎಂಟರ್‌ಟೈನ್ ‌ಮೆಂಟ್ ಹಾಗೂ ರಿಲಯನ್ಸ್ ಜಿಯೋ

  12 ಭಾರತೀಯ ಭಾಷೆಗಳಲ್ಲಿರುವ ನಮ್ಮ ಕಾರ್ಯಕ್ರಮಗಳು ಗ್ರಾಹಕರಿಗೆ ರಿಲಯನ್ಸ್ ಜಿಯೋ ಕೊಡುಗೆಯನ್ನು ಇನ್ನಷ್ಟು ಉತ್ತಮಪಡಿಸಲಿದ್ದು, ಈ ಹೊಂದಾಣಿಕೆಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲು ನಾವು ಉತ್ಸುಕರಾಗಿದ್ದೇವೆ" ಎಂದು ಹೇಳಿದರು.

  ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಮಾತನಾಡಿ, "ನಮ್ಮ ಗ್ರಾಹಕರು ಜೀ ಸಮೂಹದ ವೈವಿಧ್ಯಮಯ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ ಎನ್ನುವುದು ಬಹಳ ಸಂತೋಷದ ವಿಷಯ. ದೇಶದಲ್ಲಿ ಡಿಜಿಟಲ್ ಒಳಗೊಳ್ಳುವಿಕೆಯನ್ನು ವಿಸ್ತರಿಸುವ ನಮ್ಮ ಪ್ರಯತ್ನದಲ್ಲಿ ದೇಶವಿದೇಶಗಳ ಉತ್ಕೃಷ್ಟ ಕಂಟೆಂಟ್ ಅನ್ನು ಗ್ರಾಹಕರಿಗೆ ಒದಗಿಸಲು ಜಿಯೋ ಬದ್ಧವಾಗಿದೆ" ಎಂದರು.
  ಜೀ ಎಂಟರ್‌ಟೈನ್ ‌ಮೆಂಟ್ ಹಾಗೂ ರಿಲಯನ್ಸ್ ಜಿಯೋ ಸಂಸ್ಥೆಗಳು ಈ ನವೀನ ಕೊಡುಗೆಯನ್ನು, ಗ್ರಾಹಕರೊಡನೆ ಇರುವ ತಮ್ಮ ಸಂಪರ್ಕ ಬಿಂದುಗಳನ್ನು ಬಳಸಿಕೊಂಡು, ಜಂಟಿಯಾಗಿ ಮಾರುಕಟ್ಟೆಗೆ ಪರಿಚಯಿಸಲಿವೆ.

  ಹಾಥ್ ವೇ ಹಾಗೂ ಆರ್.ಐ.ಎಲ್ ಒಪ್ಪಂದ

  ಹಾಥ್ ವೇ ಹಾಗೂ ಆರ್.ಐ.ಎಲ್ ಒಪ್ಪಂದ

  ದೇಶದ ದೊಡ್ಡ ಕೇಬಲ್ ಆಪರೇಟರ್ ಹಾಥ್ ವೇ ಕೇಬಲ್ ಹಾಗೂ ಡೇಟಾಕಾಮ್ ಅನ್ನು ರಿಲಯನ್ಸ್ ಇಂಡಸ್ಟ್ರಿ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿವೆ. ಲಭ್ಯ ಮಾಹಿತಿ ಪ್ರಕಾರ, ಸರಿ ಸುಮಾರು 2,500 ಕೋಟಿ ರು ಡೀಲ್ ಇದಾಗಿದೆ ಎಂಬ ಮಾಹಿತಿಯಿದೆ. ಹಾಥ್ ವೇ ಹಾಗೂ ಆರ್.ಐ.ಎಲ್. ನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

  ಫೈಬರ್ ಟು ದಿ ಹೋಮ್ (FTTH) ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಗ್ರಾಹಕರಿಗೆ 100 ಜಿಬಿ ಹೈ ಸ್ಪೀಡ್ ಡೇಟಾ ಸಿಗಲಿದೆ. 100 ಜಿಬಿ ಡೇಟಾ ಮಿತಿ ಮುಗಿದ ಮೇಲೆ ಬಳಕೆದಾರರಿಗೆ ತಿಂಗಳಿಗೆ 25 ಬಾರಿ 40 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.ಈ ಯೋಜನೆ ಅನುಷ್ಠಾನಕ್ಕಾಗಿ ರಿಲಯನ್ಸ್ ಸಂಸ್ಥೆಯು 60 ಸಾವಿರ ಕೋಟಿ ರು ಹೂಡಿಕೆಗೆ ಮುಂದಾಗಿದೆ.

  ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ

  ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ

  ಜಿಯೋ ಪ್ರಾರಂಭದ ನಂತರ ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ ಎಲ್ಲ ಪ್ರಮುಖ ಸೋಶಿಯಲ್ ಮೀಡಿಯಾ ವೇದಿಕೆಗಳ ಭಾರತೀಯ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜಿಯೋ ಪ್ರಾರಂಭದ ಮೊದಲ ವರ್ಷದಲ್ಲೇ ಸುಮಾರು 70 ಮಿಲಿಯನ್ ಹೊಸ ಬಳಕೆದಾರರನ್ನು ಪಡೆದಿರುವ ಗೂಗಲ್ ಹಾಗೂ ಫೇಸ್‌ಬುಕ್‌ ಪಾಲಿಗೆ ಭಾರತ ಅತ್ಯಂತ ಸಕ್ರಿಯ ಮಾರುಕಟ್ಟೆಯಾಗಿ ಪರಿಣಮಿಸಿದೆ.

  ದೇಶದ ಡಿವೈಸ್ ಇಕೋಸಿಸ್ಟಂ‌ ವೇಗವರ್ಧನೆ: ರಿಲಯನ್ಸ್ ರೀಟೈಲ್ ನಿಂದ ವಿಒ‌ಎಲ್‌ಟಿಇ ಅಂತರ್ಗತ ಸಾಧನಗಳನ್ನು ಬಿಡುಗಡೆಮಾಡಿದುದರಿಂದ, ಸ್ಮಾರ್ಟ್‌ಫೋನ್ ಬ್ರಾಂಡ್ ಗಳೆಲ್ಲವೂ ಎಲ್‌ಟಿಇ ಶಿಪ್‌ಮೆಂಟ್‌ಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತಾಯಿತು. ಇದರಿಂದಾಗಿ ಈಗ ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಸ್ಮಾರ್ಟ್‌ಫೋನ್ ಶಿಪ್‌ಮೆಂಟ್‌ಗಳೂ ಎಲ್‌ಟಿಇ ಸಾಧನಗಳಾಗಿ ಬದಲಾಗಿರುವ ಸ್ಥಿತಿ ನಿರ್ಮಾಣವಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Mukesh Ambani's Reliance Jio has struck deal with ZEE. The deal will allow over 227 million Jio subscribers access to ZEE’s content, 37 live TV Channels. The new deal also includes content alliance with ZEE5 app, which includes the video on demand (VOD)

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more